ಚೆನ್ನೈ: ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ಡಿಎಂಕೆ ಪಕ್ಷಕ್ಕೆ ಕಾಂಗ್ರೆಸ್ ನಾಯಕ ಪಿ.ಚಿದಂಬರಂ ಬೆಂಬಲ ನೀಡಿದ್ದಾರೆ.
ಸಿಎಎ ವಿರುದ್ಧ ಬೀದಿಗಿಳಿದಿರು ಡಿಎಂಕೆ ಮುಂಖ್ಯಸ್ಥ ಎಂ.ಕೆ.ಸ್ಟಾಲಿನ್ ಚೆನ್ನೈನಲ್ಲಿ ಬೃಹತ್ ರ್ಯಾಲಿ ಹಮ್ಮಿಕೊಂಡಿದ್ದಾರೆ. ಪ್ರತಿಭಟನೆಯಲ್ಲಿ ಸಿಪಿಐ, ಸಿಪಿಎಂ ಪಕ್ಷಗಳು ಕೂಡ ಪಾಲ್ಗೊಂಡಿವೆ. ಕಾಂಗ್ರೆಸ್ ನಾಯಕ ಪಿ.ಚಿದಂಬರಂ, ಕನ್ನಿಮೊಳಿ, ಧಯಾನಿದಿ ಮಾರನ್ ಸೇರಿದಂತೆ ಹಲವು ಶಾಸಕರು ಮತ್ತು ಸಂಸದರು ಕೂಡ ಬೀದಗಿಳಿದು ಕೇಂದ್ರದ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ.
-
Tamil Nadu: DMK and its alliance parties hold a 'mega rally' against #CitizenshipAmendmentAct, in Chennai. Congress leader P Chidambaram and MDMK's Vaiko are also participating. pic.twitter.com/6oIP0kr9SS
— ANI (@ANI) December 23, 2019 " class="align-text-top noRightClick twitterSection" data="
">Tamil Nadu: DMK and its alliance parties hold a 'mega rally' against #CitizenshipAmendmentAct, in Chennai. Congress leader P Chidambaram and MDMK's Vaiko are also participating. pic.twitter.com/6oIP0kr9SS
— ANI (@ANI) December 23, 2019Tamil Nadu: DMK and its alliance parties hold a 'mega rally' against #CitizenshipAmendmentAct, in Chennai. Congress leader P Chidambaram and MDMK's Vaiko are also participating. pic.twitter.com/6oIP0kr9SS
— ANI (@ANI) December 23, 2019
ರೈತರು, ವ್ಯಾಪಾರಸ್ಥರು ಸೇರದಂತೆ ಸಾವಿರಾರು ಜನರು ಶಾಂತಿಯುತವಾಗಿ ಪ್ರತಿಭಟನಾ ಮೆರವಣಿಗೆ ನಡೆಸಿದ್ದಾರೆ. ಮುನ್ನೆಚ್ಚರಿಕೆ ಕ್ರಮವಾಗಿ ಬಿಗಿ ಭದ್ರತೆ ಕೈಗೊಂಡಿರುವ ಪೊಲೀಸ್ ಇಲಾಖೆ, 5 ಸಾವಿರ ಸಿಬ್ಬಂದಿಯನ್ನ ನಿಯೋಜಿಸಿದೆ.
ಈ ಮೊದಲು ಪ್ರತಿಭಟನೆಗೆ ಪೊಲೀಸ್ ಇಲಾಖೆ ಅನುಮತಿ ನೀಡಿರಲಿಲ್ಲ. ಹೀಗಾಗಿ ಸ್ಟಾಲಿನ್ ಕೋರ್ಟ್ ಮೊರೆ ಹೋಗಿದ್ದರು. ಪ್ರತಿಭಟನೆ ನಡೆಸಲು ಅನುಮತಿ ನೀಡಿದ ಮದ್ರಾಸ್ ಹೈಕೋರ್ಟ್ ಸಾರ್ವಜನಿಕ ಆಸ್ತಿ ಪಾಸ್ತಿಗೆ ನಷ್ಟ ಸಂಭವಿಸಿದರೆ. ರಾಜಕೀಯ ಪಕ್ಷಗಳೆ ನಷ್ಟವನ್ನ ಭರಿಸಬೇಕು ಎಂದು ತಿಳಿಸಿದೆ.