ETV Bharat / bharat

ಬಡವರ ಹಸಿವು ನೀಗಿಸಲು ಬಂದಿದೆ 'ರೋಟಿ ಬ್ಯಾಂಕ್​'... ಈ ಬ್ಯಾಂಕ್​ ಇರೋದೆಲ್ಲಿ? ​ - undefined

ನಗರದಲ್ಲಿ ಒಂದೊತ್ತು ಊಟಕ್ಕೂ ಪರದಾಡುತ್ತಿರುವ ಬಡವರಿಗೆ ರಾಜ್​ಕೋಟ್​ನಲ್ಲಿ ಶ್ರೀ ಬೋಲ್ಬಾಲಾ  ಚಾರಿಟಬಲ್ ಟ್ರಸ್ಟ್ 'ರೋಟಿ ಬ್ಯಾಂಕ್​' ತೆರೆದು ರೊಟ್ಟಿಗಳನ್ನು ಹಂಚುತ್ತಿದೆ.

ರೋಟಿ ಬ್ಯಾಂಕ್
author img

By

Published : May 18, 2019, 11:40 AM IST

ರಾಜ್​ಕೋಟ್​: ಯಾವುದೇ ವ್ಯಕ್ತಿ ಹಸಿವಿನಿಂದ ಬಳಲಬಾರದೆಂಬ ಸದುದ್ದೇಶ ಇಟ್ಟುಕೊಂಡು ಗುಜರಾತ್​ನಲ್ಲಿ ಚಾರಿಟಬಲ್ ಟ್ರಸ್ಟ್​ವೊಂದು 'ರೋಟಿ ಬ್ಯಾಂಕ್​' ನಡೆಸುತ್ತಿದೆ.

ರಾಜ್​ಕೋಟ್​ನ ಶ್ರೀ ಬೋಲ್ಬಾಲಾ ಚಾರಿಟಬಲ್ ಟ್ರಸ್ಟ್​ ಈ ಮಹತ್ತರ ಕಾರ್ಯ ಮಾಡುತ್ತಿದೆ. ಆಟೋ ರಿಕ್ಷಾ ಚಾಲಕರ ಸಹಾಯದಿಂದ ಮನೆಗಳಲ್ಲಿ ತಯಾರು ಮಾಡಿದ ರೊಟ್ಟಿಗಳನ್ನು ಸಂಗ್ರಹಿಸಿ, ನಗರದಲ್ಲಿ ಒಂದೊತ್ತು ಊಟಕ್ಕೂ ಪರದಾಡುತ್ತಿರುವ ಬಡವರಿಗೆ ಹಾಗೂ ಆಸ್ಪತ್ರೆಯಲ್ಲಿ ದಾಖಲಾಗಿರುವ ಬಡ ರೋಗಿಗಳಿಗೆ ಹಂಚುತ್ತಿದೆ.

ನಮ್ಮ ಟ್ರಸ್ಟ್​ನ ಸದಸ್ಯರು ಪ್ರತಿ ಮನೆಯಿಂದ ಎರಡು ರೊಟ್ಟಿಯಂತೆ ಸಾವಿರಕ್ಕೂ ಹೆಚ್ಚು ಮನೆಗಳಿಂದ ರೊಟ್ಟಿ ಸಂಗ್ರಹಿಸಿ, ನಂತರ ನಗರದಾದ್ಯಂತ ಇರುವ ನಿರ್ಗತಿಕರಿಗೆ ಹಂಚುತ್ತಿದೆ ಎಂದು ಶ್ರೀ ಬೋಲ್ಬಾಲಾ ಚಾರಿಟಬಲ್ ಟ್ರಸ್ಟ್​ನ ಧರ್ಮದರ್ಶಿ ಜಯೇಶ್​ ಉಪಾಧ್ಯಾಯ್​ ಹೇಳಿದರು.

ಟ್ರಸ್ಟ್​ನ ಮತ್ತೊಬ್ಬ ಸದಸ್ಯರು ಮಾತನಾಡಿ, ಯಾರೊಬ್ಬರೂ ಕೂಡ ಖಾಲಿ ಹೊಟ್ಟೆಯಲ್ಲಿ ಮಲಗಬಾರದೆಂದು ನಾವು ಬಯಸುತ್ತೇವೆ. ಬಿಹಾರ್​ ಹಾಗೂ ಪಂಜಾಬ್​ಗಳಲ್ಲಿ ಇದೇ ರೀತಿಯ ಬ್ಯಾಂಕ್​ಗಳ ಕಾರ್ಯವನ್ನು ನೋಡಿದ ಮೇಲೆ ನಮಗೆ 'ರೋಟಿ ಬ್ಯಾಂಕ್​' ತೆರೆಯುವ ಕಲ್ಪನೆ ಬಂತು ಎಂದರು.

ಕರ್ನಾಟಕ, ತಮಿಳುನಾಡುಗಳಲ್ಲಿ ಇಂದಿರಾ ಹಾಗೂ ಅಮ್ಮ ಕ್ಯಾಂಟೀನ್​ಗಳು ಬಡವರ ಹೊಟ್ಟೆ ತುಂಬಿಸುತ್ತಿವೆ. ಇದನ್ನ ಸರ್ಕಾರವೇ ಮಾಡುತ್ತಿದೆ. ಆದರೆ ಗುಜರಾತ್​ನ ರಾಜ್​ಕೋಟ್​ನಲ್ಲಿ ಸ್ವಯಂ ಸೇವಾ ಸಂಸ್ಥೆಯೇ ಈ ಕೆಲಸ ಮಾಡುತ್ತಿರುವುದು ಶ್ಲಾಘನೀಯವೇ ಸರಿ

Intro:Body:Conclusion:

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.