ಬೆಂಗಳೂರು: 47 ದಿನಗಳ ಕಾಲ ಚಂದ್ರಯಾನ -2 ದ ವಿಕ್ರಂ ಲ್ಯಾಂಡರ್ ಲ್ಯಾಂಡಿಂಗ್ ಆಗೋದನ್ನ ಕಾತರದಿಂದ ಕಾಯುತ್ತಿದ್ದ ಆ ದಿನಗಳು ಬಂದೇ ಬಿಟ್ಟಿತ್ತು. ದಿನಾಂಕ 7 ನಡುರಾತ್ರಿ 1.38 ರಿಂದ 2.00 ರ ವೇಳೆಗೆ ಎಲ್ಲವೂ ಸರಿಯಾಗಿಯೇ ನಡೆದಿತ್ತು.
ಎಲ್ಲವೂ ಅಂದುಕೊಂಡಂತೆ ಸಾಗಿತ್ತು ಆರ್ಬಿಟರ್ನಿಂದ ಬೇರ್ಪಟ್ಟ ವಿಕ್ರಂ ಲ್ಯಾಂಡರ್, ಇಂದು ಇನ್ನೇನು ಚಂದಮಾಮನ ಅಂಗಳಕ್ಕೆ ಮುತ್ತಿಕ್ಕಲು 2 ಕಿ.ಮೀ ದೂರ ಇದೆ ಎನ್ನುವಾಗಲೇ ಇಸ್ರೋ ಕೇಂದ್ರದಿಂದ ಸಂಪರ್ಕ ಕಳೆದುಕೊಂಡು ಬಿಟ್ಟಿತು. ನಡುರಾತ್ರಿ 1: 44ರಿಂದ 2 ಗಂಟೆ 20 ನಿಮಿಷದ ವರೆಗೆ ಎಲ್ಲರಲ್ಲೂ ಡವ ಡವ..
ಇಸ್ರೋದ ಸಾಧನೆ ಕಣ್ತುಂಬಿಕೊಳ್ಳಲು ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ ಎದೆಯಲ್ಲೂ ಒಂದು ಕ್ಷಣ ಮೌನದ ಅನುಭವ.. ಅಂತಿಮವಾಗಿ ಇಸ್ರೋ ಅಧ್ಯಕ್ಷ ಕೆ ಸಿವನ್ ಮೋದಿ ಬಳಿ ಹೋಗೆ ಅದೇನೋ ಉಸಿರಿದರು.
ಕಾತರ ತಡೆಯದೇ ಮೋದಿ ಸಾಹೇಬರು ಅತ್ತಿಂದಿತ್ತ ಓಡಾಡಿದರು.. ನಂತರ ಕೆ ಶಿವನ್ ಆ ಒಂದು ಘೋಷಣೆ ಮಾಡಿಯೇ ಬಿಟ್ಟರು... 2.1 ಕಿಮೀ ಚಂದ್ರನ ಹತ್ತಿರ ಬರುವವರೆಗೂ ಎಲ್ಲವೂ ಅಂದುಕೊಂಡಂತೆಯೇ ಇತ್ತು... ಆದರೆ, 2.1 ಕಿ.ಮೀ ಸಮೀಪಕ್ಕೆ ಬರುತ್ತಿದ್ದಂತೆ ನಮ್ಮಿಂದ ಸಂಪರ್ಕ ಕಳೆದುಕೊಂಡಿದೆ. ಈ ಬಗ್ಗೆ ಆರ್ಬಿಟರ್ನಿಂದ ಡೇಟಾ ಅಧ್ಯಯನ ನಡೆಸುತ್ತಿದ್ದೇವೆ ಎಂದು ಘೋಷಿಸಿಯೇ ಬಿಟ್ಟರು.