ETV Bharat / bharat

ಗುರುನಾನಕ್​ ಜಯಂತಿ: ನಾನಕ್ ಕಾಲ್ಪನಿಕ ಭಾವಚಿತ್ರ ಅರಳಿಸಿದ ಕಲಾವಿದ

ಇಂದು ಗುರುನಾನಕ್​ ಜಯಂತಿ ಹಿನ್ನೆಲೆ ಚಂಡೀಗಢ ಮೂಲದ ಕಲಾವಿದನೊಬ್ಬ ಗುರು ಗ್ರಂಥ ಸಾಹಿಬ್​​ನ ಆರಂಭಿಕ ಪದಗಳಾದ 'ಏಕ್ ಓಂಕಾರ್ ಅನ್ನು ಬಳಸಿ ಗುರುನಾನಕ್ ಅವರ ಕಾಲ್ಪನಿಕ ಭಾವಚಿತ್ರವನ್ನು ಮೂಡಿಸಿದ್ದಾರೆ.

Chandigarh-based artist makes optical illusion portrait of Guru Nanak Dev
ಗುರುನಾನಕ್ ಅವರ ಕಾಲ್ಪನಿಕ ಭಾವಚಿತ್ರ ಮೂಡಿಸಿದ ಕಲಾವಿದ
author img

By

Published : Nov 30, 2020, 7:27 AM IST

ಚಂಡೀಗಢ: ಗುರುನಾನಕ್ ಜಯಂತಿ ಹಿನ್ನೆಲೆ ಚಂಡೀಗಢ ಮೂಲದ ಕಲಾವಿದ ವರುಣ್ ಟಂಡನ್, ಗುರುನಾನಕ್ ಅವರ ಕಾಲ್ಪನಿಕ ಭಾವಚಿತ್ರವನ್ನು ರಚಿಸಿದ್ದಾರೆ.

ಗುರುನಾನಕ್​ ಜಯಂತಿ ಆಚರಣೆ

ಈ ಭಾವಚಿತ್ರವನ್ನು ಚಂಡೀಗಢದ ಸೆಕ್ಟರ್​​ 34 ನ ಗುರುದ್ವಾರ ಶ್ರೀ ಗುರು ತೇಜ್ ಬಹದ್ದೂರ್ ಸಾಹಿಬ್​​ನಲ್ಲಿ ಇಡಲಾಗಿದೆ. ಕಲಾವಿದ ವರುಣ್ ಟಂಡನ್ ಈ ಕುರಿತು ಪ್ರತಿಕ್ರಿಯಿಸಿ, "ನಾನು ಇದನ್ನು 551 'ಏಕ್ ಓಂಕಾರ್' (ಗುರು ಗ್ರಂಥ ಸಾಹಿಬ್​​ನ ಆರಂಭಿಕ ಪದಗಳು) ಬಳಸಿ ಮಾಡಿದ್ದೇನೆ" ಎಂದು ಹೇಳಿದರು. ದೂರದಿಂದ ಚಿತ್ರವನ್ನು ನೋಡಿದರೆ ಗುರುನಾನಕ್ ದೇವ್​ ಅವರ ಹತ್ತಿರದ ನೋಟ ಮತ್ತು ನೀವು 'ಏಕ್ ಓಂಕರ್' ನೋಡುತ್ತೀರಿ. ಇದು ಕಾಲ್ಪನಿಕ ಭಾವಚಿತ್ರ ಎಂದ್ರು. ಇವರು ಈ 'ಏಕ್ ಓಂಕಾರ್' ರಚಿಸಲು 13 ವಿವಿಧ ಬಣ್ಣಗಳನ್ನು ಬಳಸಿದ್ದಾರೆ. ಸುಮಾರು 1102 ಕಬ್ಬಿಣದ ಮೊಳೆಗಳನ್ನು ಬಳಸಿ ಶ್ರೀ ಗುರುನಾನಕ್ ದೇವ್ ಅವರ 6 ರಿಂದ 4 ಅಡಿ ಭಾವಚಿತ್ರವನ್ನು ಈ ಕಲಾವಿದ ರಚಿಸಿದ್ದಾರೆ.

ಇನ್ನು ಹಿಂದೂ ಕ್ಯಾಲೆಂಡರ್ ಪ್ರಕಾರ ಗುರುನಾನಕ್ ಜಯಂತಿಯನ್ನು ಕಾರ್ತಿಕ ತಿಂಗಳ ಹುಣ್ಣಿಮೆಯ ದಿನದಂದು ದೇಶಾದ್ಯಂತ ಮತ್ತು ಪ್ರಪಂಚದ ವಿವಿಧ ಭಾಗಗಳಲ್ಲಿ ಬಹಳ ಸಂಭ್ರಮದಿಂದ ಆಚರಿಸಲಾಗುತ್ತದೆ. ಇದನ್ನು ಕಾರ್ತಿಕ ಪೂರ್ಣಿಮಾ ಎಂದೂ ಕೂಡ ಕರೆಯಲಾಗುತ್ತೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.