ETV Bharat / bharat

ಕೊರೊನಾ ವಿರುದ್ಧ ಸಮರಕ್ಕೆ ಕೇಂದ್ರದ ನೆರವು.. ರಾಜ್ಯಗಳಿಗೆ 15 ಸಾವಿರ ಕೋಟಿಯ ವಿಶೇಷ ಪ್ಯಾಕೇಜ್​​ - ರಾಜ್ಯಗಳಿಗೆ ಅನುದಾನ

ನ್ಯಾಷನಲ್​ ಹೆಲ್ತ್​ ಮಿಷನ್​ ಅಡಿ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಈ ಹಣವನ್ನು ಹಂಚಲಾಗುತ್ತದೆ. ಕೊರೊನಾ ಸೋಂಕು ಪತ್ತೆ, ವೈದ್ಯಕೀಯ ಸಾಧನಗಳ ಖರೀದಿ, ಔಷಧಗಳ ಖರೀದಿ ಸೇರಿ ಮುಂತಾದ ಕಾರ್ಯಗಳಿಗೆ ಈ ಹಣವನ್ನು ಬಳಸಬಹುದಾಗಿದೆ.

central ministers meeting
ಕೇಂದ್ರ ಸಚಿವರ ಸಭೆ
author img

By

Published : Apr 9, 2020, 7:10 PM IST

ನವದೆಹಲಿ : ರಾಜ್ಯಗಳು ಕೊರೊನಾ ವಿರುದ್ಧ ಹೋರಾಡುವ ಸಲುವಾಗಿ ತುರ್ತು ಕ್ರಮಕೈಗೊಳ್ಳಲು ಕೇಂದ್ರ ಸರ್ಕಾರ 15 ಸಾವಿರ ಕೋಟಿ ರೂಪಾಯಿಗಳ ಪ್ಯಾಕೇಜ್‌ನ ಘೋಷಣೆ ಮಾಡಿದೆ. ಈ ಮೂಲಕ ರಾಜ್ಯಗಳು ಕೊರೊನಾ ವಿರುದ್ಧ ಹೋರಾಡಲು ನೆರವು ನೀಡಿದೆ. ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.

ನ್ಯಾಷನಲ್​ ಹೆಲ್ತ್​ ಮಿಷನ್​ ಅಡಿ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಈ ಹಣವನ್ನು ಹಂಚಲಾಗುತ್ತದೆ. ಕೊರೊನಾ ಸೋಂಕು ಪತ್ತೆ, ವೈದ್ಯಕೀಯ ಸಾಧನಗಳ ಖರೀದಿ, ಔಷಧಗಳ ಖರೀದಿ ಸೇರಿ ಮುಂತಾದ ಕಾರ್ಯಗಳಿಗೆ ಈ ಹಣವನ್ನು ಬಳಸಬಹುದಾಗಿದೆ ಎಂದು ರಾಷ್ಟ್ರೀಯ ಆರೋಗ್ಯ ಮಿಷನ್​ ರಾಜ್ಯಗಳ ಹಾಗೂ ಕೇಂದ್ರಾಡಳಿತ ಪ್ರದೇಶಗಳ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ಪ್ರಧಾನ ಕಾರ್ಯದರ್ಶಿಗಳು ಹಾಗೂ ಆರೋಗ್ಯ ಆಯುಕ್ತರಿಗೆ ಪತ್ರ ಬರೆದಿದೆ.

ಐದು ವರ್ಷಗಳಲ್ಲಿ ಮೂರು ಹಂತಗಳಲ್ಲಿ ಒಟ್ಟು ಐದು ವರ್ಷಗಳ ಅವಧಿಯಲ್ಲಿ ಮೂರು ಹಂತಗಳಲ್ಲಿ ಈ ಹಣವನ್ನು ಬಳಕೆ ಮಾಡಲು ನಿರ್ಧಾರ ಮಾಡಲಾಗಿದೆ. ಮಾರ್ಚ್ 2020ರಿಂದ ಮೊದಲ ಹಂತ ಆರಂಭವಾಗಲಿದೆ. ಜೂನ್​ 2020ಕ್ಕೆ ಇದು ಕೊನೆಗೊಳ್ಳಲಿದೆ. ಎರಡನೇ ಹಂತ ಜುಲೈ 2020ಕ್ಕೆ ಆರಂಭಗೊಂಡು ಮಾರ್ಚ್​ 2021ಕ್ಕೆ ಕೊನೆಗೊಳ್ಳಲಿದೆ. ಮೂರನೇ ಹಂತ 2021ರಿಂದ ಆರಂಭವಾಗಿ ಮಾರ್ಚ್​ 2024ಕ್ಕೆ ಕೊನೆಗೊಳ್ಳಲಿದೆ ಎಂದು ತಿಳಿಸಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.