ನವದೆಹಲಿ: ಮಹಿಳೆಯರಿಗೆ ಸುರಕ್ಷತೆ ಹಾಗೂ ಮೂಲಸೌಕರ್ಯ ಒದಗಿಸುವ ನಿಟ್ಟಿನಲ್ಲಿ ಭಾರತ ಸರ್ಕಾರ 'ನಿರ್ಭಯಾ ಫಂಡ್' ಸ್ಥಾಪಿಸಿದೆ. ನಿರ್ಭಯಾ ನಿಧಿಯಡಿ ಇಲ್ಲಿಯವರೆಗೆ 9288.45 ಕೋಟಿ ರೂ.ಮೌಲ್ಯದ ಯೋಜನೆಗಳನ್ನು ಮೌಲ್ಯಮಾಪನ ಮಾಡಲಾಗಿದೆ ಎಂದು ಕೇಂದ್ರ ತಿಳಿಸಿದೆ.
ಒಟ್ಟು 5712.85 ಕೋಟಿ ರೂ.ಗಳನ್ನು ಹಂಚಿಕೆ ಮಾಡಲಾಗಿದ್ದು, ಸಂಬಂಧಪಟ್ಟ ಸಚಿವಾಲಯಗಳು ಮತ್ತು ಇಲಾಖೆಗಳಿಗೆ 3544.06 ಕೋಟಿ ರೂ. ಬಿಡುಗಡೆ ಮಾಡಲಾಗಿದೆ.
ನಿರ್ಭಯಾ ನಿಧಿ ಅಡಿಯಲ್ಲಿ ರಚಿಸಲಾದ ಅಧಿಕಾರಿಗಳ ಉನ್ನತಾಧಿಕಾರ ಸಮಿತಿಯು (ಇಸಿ), ಸಂಬಂಧಪಟ್ಟ ಸಚಿವಾಲಯ ಹಾಗೂ ಇಲಾಖೆಗಳು ಅನುಷ್ಠಾನಗೊಳಿಸುವ ಏಜೆನ್ಸಿಗಳ ಜೊತೆಯಲ್ಲಿ ನಿರ್ಭಯಾ ನಿಧಿಯಡಿ ಧನಸಹಾಯ ನೀಡುವ ಪ್ರಸ್ತಾಪಗಳನ್ನು ಮೌಲ್ಯಮಾಪನ ಶಿಫಾರಸು ಮಾಡುತ್ತದೆ.
ಇಸಿಯ ಮೌಲ್ಯಮಾಪನದ ನಂತರ, ಸಂಬಂಧಪಟ್ಟ ಸಚಿವಾಲಯ ಅಥವಾ ಇಲಾಖೆ ಆಯಾ ಬಜೆಟ್‌ನಿಂದ ಹಣವನ್ನು ಬಿಡುಗಡೆ ಮಾಡಲು ಯೋಜನೆಯನ್ನು ನೇರವಾಗಿ ಅಥವಾ ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳು ಮತ್ತು ಅನುಷ್ಠಾನಗೊಳಿಸುವ ಏಜೆನ್ಸಿಗಳ ಮೂಲಕ ಕಾರ್ಯಗತಗೊಳಿಸಲು ಸಂಬಂಧಿಸಿದ ಹಣಕಾಸು ಪ್ರಾಧಿಕಾರದ ಅನುಮೋದನೆಯನ್ನು ಪಡೆಯುತ್ತದೆ.