ETV Bharat / bharat

ರಾಮಮಂದಿರ ನಿರ್ಮಾಣಕ್ಕೆ ದೇಣಿಗೆ ನೀಡುವವರಿಗೆ ತೆರಿಗೆ ವಿನಾಯಿತಿ: ಕೇಂದ್ರದ ಅಧಿಸೂಚನೆ - ದೇಣಿಗೆ ನೀಡುವವರಿಗೆ ತೆರಿಗೆ ವಿನಾಯ್ತಿ

ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣಕ್ಕಾಗಿ 15 ಸದಸ್ಯರನ್ನೊಳಗೊಂಡ ಟ್ರಸ್ಟ್​​ ನಿರ್ಮಿಸಲಾಗಿದೆ. ಈ ದೇವಾಲಯ ನಿರ್ಮಾಣ ಮಾಡಲು ದೇಣಿಗೆ ನೀಡುವವರಿಗೆ ಕೇಂದ್ರ ಸರ್ಕಾರ ಇದೀಗ ತೆರಿಗೆ ವಿನಾಯಿತಿ ನೀಡಿದೆ.

Ram Temple
Ram Temple
author img

By

Published : May 9, 2020, 11:21 AM IST

ನವದೆಹಲಿ: ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ನಿರ್ಮಾಣ ಮಾಡಲು ಶ್ರೀ ರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್​​ಗೆ ದೇಣಿಗೆ ನೀಡುವವರಿಗೆ ಕೇಂದ್ರ ಸರ್ಕಾರ ತೆರಿಗೆ ವಿನಾಯಿತಿ ನೀಡಲು ನಿರ್ಧರಿಸಿದೆ.

ಕೇಂದ್ರ ಹಣಕಾಸು ಸಚಿವಾಲಯ ತಡರಾತ್ರಿ ಹೊರಡಿಸಿದ ಅಧಿಸೂಚನೆಯ ಪ್ರಕಾರ, ರಾಮ ಮಂದಿರ ಟ್ರಸ್ಟ್​ಗೆ ದೇಣಿಗೆ ನೀಡುವವರಿಗೆ ಆದಾಯ ತೆರಿಗೆ ಕಾಯ್ದೆ ಸೆಕ್ಷನ್​ 80ಜಿ ಅಡಿಯಲ್ಲಿ ಕೇಂದ್ರೀಯ ನೇರ ತೆರಿಗೆ ಮಂಡಳಿ (ಸಿಬಿಡಿಟಿ) ವಿನಾಯಿತಿ ಇದೆ. ದಾನಿಗಳು 2020-21 ನೇ ಸಾಲಿನಿಂದ ಈ ಅವಕಾಶ ಪಡೆದುಕೊಳ್ಳಲಿದ್ದಾರೆ.

Centre exempts donations
ರಾಮಮಂದಿರ ನಿರ್ಮಾಣಕ್ಕಾಗಿ ದೇಣಿಗೆ ನೀಡುವವರಿಗೆ ಕೇಂದ್ರದ ವಿನಾಯಿತಿ

ಈ ಸೆಕ್ಷನ್​ನಲ್ಲಿ ದೇವಾಲಯಗಳು, ಮಸೀದಿಗಳು, ಚರ್ಚ್​​ ಹಾಗೂ ಪರಿಹಾರ ನಿಧಿಗಳು ಸೇರಿಕೊಂಡಿವೆ. ಸರ್ಕಾರದ ಪರಿಹಾರ ನಿಧಿಗಳು, ಸಾರ್ವಜನಿಕ ಕಲ್ಯಾಣ ಸಂಸ್ಥೆಗಳು ತೆರಿಗೆ ವಿನಾಯಿತಿ ಪಡೆಯಲು ಅರ್ಹವಾಗಿವೆ. ಆದರೆ ತಾವು ಪಡೆದುಕೊಳ್ಳುವ ಒಟ್ಟು ಹಣದ ಶೇ.10ರಷ್ಟು ಹಣ ದೇಣಿಗೆ ರೂಪದಲ್ಲಿ ನೀಡಬೇಕು ಎಂದು ತಿಳಿಸಿದೆ.

ಫೆಬ್ರವರಿ 8 ರಂದು 15 ಸದಸ್ಯರನ್ನೊಳಗೊಂಡ 'ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್' ರಚನೆ ಮಾಡಲಾಗಿತ್ತು.

ಕಳೆದ ವರ್ಷ ನವೆಂಬರ್​ ತಿಂಗಳಲ್ಲಿ ಸುಪ್ರೀಂಕೋರ್ಟ್‌​ ಅಯೋಧ್ಯೆ ರಾಮನಿಗೆ ಸೇರಿದ್ದು ಎಂದು ಐತಿಹಾಸಿಕ ತೀರ್ಪು ನೀಡಿತ್ತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.