ಮುಂಬೈ: ಕೇಂದ್ರ ರೈಲ್ವೆ ಇಲಾಖೆಯು, ಟಿಕೆಟ್ ರಹಿತ ಹಾಗೂ ಅನಿಯಮಿತ ಪ್ರಯಾಣಿಕರಿಂದ 2019 ರ ಏಪ್ರಿಲ್ ಮತ್ತು ಡಿಸೆಂಬರ್ ನಡುವೆ 155.14 ಕೋಟಿ ರೂ.ಗಳ ದಂಡವನ್ನು ಗಳಿಸಿದೆ ಎಂದು ಅಧಿಕಾರಿಯೊಬ್ಬರು ಸೋಮವಾರ ಮಾಹಿತಿ ನೀಡಿದ್ದಾರೆ.
ಇದು 2018 ರ ಅವಧಿಯಲ್ಲಿ ವಸೂಲಿ ಮಾಡಿದ 135.56 ಕೋಟಿ ರೂ.ಗಳ ದಂಡಕ್ಕಿಂತ ಶೇ 14.44 ರಷ್ಟು ಹೆಚ್ಚಾಗಿದೆ ಎಂದು ಅವರು ಹೇಳಿದರು.
2019 ರ ಡಿಸೆಂಬರ್‌ನಲ್ಲಿ ಟಿಕೆಟ್ ರಹಿತ ಪ್ರಯಾಣಿಕರಿಂದ 12.20 ಕೋಟಿ ರೂ.ಗಳನ್ನು ಗಳಿಸಿದೆ ಎಂದು ಸಿಆರ್ ಪ್ರಕಟಣೆಯಲ್ಲಿ ತಿಳಿಸಿದೆ. 2018 ರಲ್ಲಿ ಇದೇ ತಿಂಗಳಲ್ಲಿ ಇದು 10.40 ಕೋಟಿ ರೂ ಗಳಿಸಿದ್ದು, ಇದು ಶೇಕಡಾ 17.30 ರಷ್ಟು ಹೆಚ್ಚಾಗಿದೆ.
ಕಾಯ್ದಿರಿಸಿದ ಪ್ರಯಾಣ ಟಿಕೆಟ್‌ಗಳ ವರ್ಗಾವಣೆಯ 249 ಪ್ರಕರಣಗಳು ಪತ್ತೆಯಾಗಿದ್ದು, 2019 ರ ಡಿಸೆಂಬರ್‌ನಲ್ಲಿ ದಂಡವಾಗಿ 1.95 ಲಕ್ಷ ರೂ.ಸಂಗ್ರಹವಾಗಿದೆ.