ETV Bharat / bharat

ಮನೆಯಲ್ಲೇ ಇರಿ.. ಸರಳವಾಗಿ ಯುಗಾದಿ ಹಬ್ಬ ಆಚರಿಸಿ.. ಇದು ಈಟಿವಿ ಭಾರತ ಕಾಳಜಿ! - ಯುಗಾದಿ

ಈ ಬಾರಿ ಯುಗಾದಿ ಹಬ್ಬದ ಸಿಹಿಯನ್ನು ಕೊರೊನಾ ಕಹಿಯಾಗಿಸಿದೆ. ಯಾಕೆಂದರೆ, ರಾಜ್ಯಕ್ಕೆ ರಾಜ್ಯವೇ ಲಾಕ್​ಡೌನ್ ಆಗಿದೆ. ಹೀಗಾಗಿ ಮನೆಯಲ್ಲೇ ಇದ್ದುಕೊಂಡು ಸರಳವಾಗಿ ಹಬ್ಬ ಆಚರಿಸೋಣ.

celebrate-ugadi-at-home
celebrate-ugadi-at-home
author img

By

Published : Mar 24, 2020, 8:32 PM IST

Updated : Mar 25, 2020, 7:36 AM IST

ಹಿಂದೂಗಳ ಅತ್ಯಂತ ಸಂಭ್ರಮದ ಹಬ್ಬ ಯುಗಾದಿ. ವರ್ಷದ ಮೊದಲ ಹಬ್ಬ ಯುಗಾದಿಯನ್ನು ಪ್ರತಿ ವರ್ಷ ಸಡಗರದಿಂದ ಆಚರಿಸುತ್ತೇವೆ. ಇದು ಬಹಳ ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಆದರೆ, ಈ ಬಾರಿ ಯುಗಾದಿ ಹಬ್ಬದ ಸಿಹಿಯನ್ನು ಕೊರೊನಾ ಕಹಿಯಾಗಿಸಿದೆ. ಯಾಕೆಂದರೆ ,ರಾಜ್ಯಕ್ಕೆ ರಾಜ್ಯವೇ ಲಾಕ್​ಡೌನ್ ಆಗಿದೆ.

ಮನೆಯಲ್ಲೇ ಇರಿ : ಸರಳ ಯುಗಾದಿ ಆಚರಿಸಿ

ಮಹಾಮಾರಿ ಕೊರೊನಾದಿಂದಾಗಿ ಜನರು ಆತಂಕದಲ್ಲಿದ್ದಾರೆ. ಹೀಗಾಗಿ ಎಲ್ಲರೂ ತಮ್ಮ ತಮ್ಮ ಮನೆಗಳಲ್ಲೇ ಇರಿ. ಹಬ್ಬ ಅಂತಾ ಯಾರೂ ಮನೆಗಳಿಂದ ಹೊರ ಬರಬೇಡಿ. ಹಬ್ಬದ ಖರೀದಿಗಾಗಿ ಯಾವುದೇ ಮಾರುಕಟ್ಟೆಗೆ ಹೋಗಬೇಡಿ. ತೀರಾ ಅಗತ್ಯ ಬಿದ್ದರೆ ಮನೆಯಿಂದ ಒಬ್ಬರು ಮಾತ್ರ ಹೊರ ಬಂದು ಅಗತ್ಯ ವಸ್ತು ಖರೀದಿಸಿ, ಸರ್ಕಾರದ ಹಾಗೂ ಪೊಲೀಸರ ಆದೇಶ ಪಾಲಿಸಿ. ಇನ್ನುಳಿದಂತೆ ಮನೆಯಲ್ಲೇ ಇದ್ದು ಸರಳವಾಗಿ ಹಬ್ಬ ಆಚರಿಸೋಣ. ನಮ್ಮಿಂದಲೇ ನಮ್ಮವರಿಗೆ ತೊಂದರೆಯಾಗೋದು ಬೇಡ. ಪ್ರತಿಯೊಬ್ಬರೂ ಸರ್ಕಾರದ ನಿಯಮಾವಳಿ ಪಾಲಿಸಿ ಸೆಲ್ಫ್‌ ಕ್ವಾರಂಟೈನ್ ಆಗಿರಬೇಕು.

ಮನೆಯಲ್ಲೇ ಇರಿ : ಸರಳ ಯುಗಾದಿ ಆಚರಿಸಿ

ಪ್ರತಿಯೊಬ್ಬರೂ ಈ ನಿಯಮ ಅನುಸರಿಸದೇ ಇದ್ದರೆ ನಾಳೆಯ ದಿನ ಕಠಿಣ ಪರಿಸ್ಥಿತಿ ಎದುರಿಸಬೇಕಾಗಬಹುದು. ಈ ಕಾರಣದಿಂದಾಗಿ ಮನೆಯಿಂದ ಹೊರಗಡೆ ಹೋಗದಿರುವ ಗಟ್ಟಿ ತೀರ್ಮಾನ ತೆಗೆದುಕೊಳ್ಳಿ. ಈ ಮೂಲಕ ನಾವು ಕೊರೊನಾ ವಿರುದ್ಧ ಸೆಣಸಾಡುವ ಯೋಧರಾಗೋಣ. ಹೊಸ ವರ್ಷ ಯುಗಾದಿ ಸರಳವಾಗಿದ್ದರೂ ಸಿಹಿ ಭವಿಷ್ಯ ರೂಪಿಸಿ ಬಾಳು ಬೆಳಗಿಸೋಣ. ನಮ್ಮ ಆರೋಗ್ಯ ನಮ್ಮ ಜವಾಬ್ದಾರಿ, ಕೊರೊನಾ ಸೋಲಿಸಿ, ಭಾರತ ದೇಶ ಗೆಲ್ಲಿಸಿ.

ಇದು ಈಟಿವಿ ಭಾರತ ಕಳಕಳಿ

Last Updated : Mar 25, 2020, 7:36 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.