ನವದೆಹಲಿ: ಈ ವರ್ಷ 9 ಮತ್ತು 11ನೇ ತರಗತಿಯಲ್ಲಿ ಅನುತ್ತೀರ್ಣಗೊಂಡ ವಿದ್ಯಾರ್ಥಿಗಳಿಗೆ ಮತ್ತೊಂದು ಬಾರಿ ಪರೀಕ್ಷೆ ಬರೆಯಲು ಅನುಮತಿ ಕೊಡಬೇಕೆಂದು ಸಿಬಿಎಸ್ಇ ತನ್ನ ಅಧೀನದಲ್ಲಿ ಬರುವ ಎಲ್ಲಾ ಶಾಲೆಗಳಿಗೆ ಸೂಚಿಸಿದೆ.
ಈ ವಿದ್ಯಾರ್ಥಿಗಳಿಗೆ ಆನ್ಲೈನ್, ಆಫ್ ಲೈನ್ ಅಥವಾ ಯಾವುದಾದರೂ ಹೊಸ ರೀತಿಯಲ್ಲಿ ಪರೀಕ್ಷೆ ನಡೆಸಬೇಕು ಎಂದು ಶಾಲೆಗಳಿಗೆ ಸೂಚನೆ ನೀಡಿದೆ. ಒತ್ತಡಕ್ಕೆ ಒಳಗಾದ ಪೋಷಕರು, ವಿದ್ಯಾರ್ಥಿಗಳಿಂದ ಮನವಿಗಳು ಬಂದ ಹಿನ್ನೆಲೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.
-
Technology to be used to enable migrants to access Public Distribution System from any fair price shop in India by Mar, 2021
— Dr Ramesh Pokhriyal Nishank (@DrRPNishank) May 14, 2020 " class="align-text-top noRightClick twitterSection" data="
67 crore beneficiaries in 23 states covering 83% of PDS population will be covered by national portability by Aug, 2020. #AatmaNirbharBharatPackage pic.twitter.com/Oc5ew6Jy5N
">Technology to be used to enable migrants to access Public Distribution System from any fair price shop in India by Mar, 2021
— Dr Ramesh Pokhriyal Nishank (@DrRPNishank) May 14, 2020
67 crore beneficiaries in 23 states covering 83% of PDS population will be covered by national portability by Aug, 2020. #AatmaNirbharBharatPackage pic.twitter.com/Oc5ew6Jy5NTechnology to be used to enable migrants to access Public Distribution System from any fair price shop in India by Mar, 2021
— Dr Ramesh Pokhriyal Nishank (@DrRPNishank) May 14, 2020
67 crore beneficiaries in 23 states covering 83% of PDS population will be covered by national portability by Aug, 2020. #AatmaNirbharBharatPackage pic.twitter.com/Oc5ew6Jy5N
ಈ ಕುರಿತು ಸಿಬಿಎಸ್ಇ ಪರೀಕ್ಷಾ ನಿಯಂತ್ರಕರು ಅಧಿಸೂಚನೆ ಹೊರಡಿಸಿದ್ದು, ದೇಶ ಈಗ ಸಂಕಷ್ಟದಲ್ಲಿದೆ. 9 ಹಾಗೂ 11ನೇ ತರಗತಿಗಳಲ್ಲಿ ಅನುತ್ತೀರ್ಣಗೊಂಡ ವಿದ್ಯಾರ್ಥಿಗಳೂ ಒತ್ತಡದಲ್ಲಿರುತ್ತಾರೆ. ಅವರಿಗೆ ಇನ್ನೊಂದು ಅವಕಾಶ ಕೊಟ್ಟರೆ ಸ್ವಲ್ಪ ನಿರಾಳವಾಗುತ್ತಾರೆ. ಇದರಿಂದಾಗಿ ಮತ್ತೊಂದು ಅವಕಾಶ ನೀಡಲಾಗುತ್ತಿದೆ ಎಂದು ಸ್ಪಷ್ಟನೆ ನೀಡಿದೆ. ಇದರ ಜೊತೆಗೆ ಪರೀಕ್ಷೆಗೆ ತಯಾರಾಗಲು ಅವರಿಗೆ ಸಮಯ ನೀಡಲಾಗುತ್ತದೆ ಎಂದಿದ್ದಾರೆ.
ಸಿಬಿಎಸ್ಇ ಅಧಿಸೂಚನೆಯನ್ನು ಕೇಂದ್ರ ಮಾನವ ಸಂಪನ್ಮೂಲ ಸಚಿವ ಡಾ. ರಮೇಶ್ ಪೋಕ್ರಿಯಾಲ್ ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.