ನವದೆಹಲಿ: ಕೇಂದ್ರ ಪ್ರೌಢ ಶಿಕ್ಷಣ ಮಂಡಳಿಯು (ಸಿಬಿಎಸ್‌ಇ) 12ನೇ ತರಗತಿ ಪರೀಕ್ಷೆಯ ಫಲಿತಾಂಶವನ್ನು ಪ್ರಕಟಿಸಿದ್ದು, ಶೇ.88.78 ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.
ಈವರೆಗಿನ ಉತ್ತೀರ್ಣದ ಪ್ರಮಾಣಕ್ಕೆ ಹೋಲಿಸಿದರೆ, ಈ ಬಾರಿಯ ಫಲಿತಾಂಶದಲ್ಲಿ ಶೇ.5.38 ರಷ್ಟು ಏರಿಕೆ ಕಂಡುಬಂದಿದೆ. ಆದರೆ ಈ ವರ್ಷ ಯಾವುದೇ ಮೆರಿಟ್ ಲಿಸ್ಟ್ ಬಿಡುಗಡೆ ಮಾಡುವುದಿಲ್ಲ ಎಂದು ಮಂಡಳಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಬೆಂಗಳೂರು ವಲಯದಲ್ಲಿನ ಶೇ.97.05 ವಿದ್ಯಾರ್ಥಿಗಳು ಉತ್ತೀರ್ಣ ಆಗುವ ಮೂಲಕ ಉತ್ತಮ ಸಾಧನೆ ಮಾಡಿದ್ದಾರೆ.
ಲಾಕ್ಡೌನ್ಗೂ ಮೊದಲೇ 10 ಮತ್ತು 12ನೇ ತರಗತಿಯ ಕೆಲ ವಿಷಯಗಳಿಗೆ ಪರೀಕ್ಷೆಗಳು ನಡೆದಿತ್ತು. ಸುಪ್ರೀಂ ಅಧಿಸೂಚನೆ ಮೇರೆಗೆ ಕೋವಿಡ್ ಭೀತಿಯಿಂದಾಗಿ ಉಳಿದ ಪರೀಕ್ಷೆಗಳನ್ನು ಕೇಂದ್ರೀಯ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ರದ್ದುಗೊಳಿಸಿತ್ತು. ಇಂದು ಸಿಬಿಎಸ್‌ಇ 12ನೇ ತರಗತಿ ಫಲಿತಾಂಶ ಪ್ರಕಟವಾಗಿದೆ.