ನವದೆಹಲಿ: ದೇಶದ ಈಶಾನ್ಯ ರಾಜ್ಯಗಳಿಗೆ ಕಾರ್ಗೊ(ಸರಕು) ವಿಮಾನಗಳ ಮೂಲಕ ವೈದ್ಯಕೀಯ ಸಲಕರಣೆ, ತುರ್ತು ಅವಶ್ಯಕ ವಸ್ತುಗಳು ಹಾಗೂ ಇತರ ಅವಶ್ಯಕ ನಿತ್ಯ ಬಳಕೆಯ ವಸ್ತುಗಳನ್ನು ಪೂರೈಸಲಾಗುವುದು ಎಂದು ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಹೇಳಿದ್ದಾರೆ. ಇಂಥ ಸಂಕಷ್ಟದ ಸಮಯದಲ್ಲಿ ಈಶಾನ್ಯ ರಾಜ್ಯಗಳ ಅಗತ್ಯಗಳನ್ನು ತುರ್ತಾಗಿ ಪೂರೈಸುವುದರಿಂದ ಅವರಲ್ಲಿ ವಿಶ್ವಾಸ ಮೂಡಿಸಲು ಸಹಾಯಕವಾಗಲಿದೆ ಎಂದು ಅವರು ತಿಳಿಸಿದ್ದಾರೆ.
ಯಾವೆಲ್ಲ ಕಾರ್ಗೊ ವಿಮಾನಗಳು ಈಶಾನ್ಯ ರಾಜ್ಯಗಳಿಗೆ ಸಂಚರಿಸಲಿವೆ ಎಂಬ ಬಗೆಗಿನ ಮಾಹಿತಿಯನ್ನು ಶೀಘ್ರ ಬಿಡುಗಡೆ ಮಾಡಲಾಗುವುದು. ತಮ್ಮ ಅಗತ್ಯತೆಗಳ ಕುರಿತು ಟ್ವಿಟರ್ ಮೂಲಕ ಮಾಹಿತಿ ನೀಡುವಂತೆ ಈಶಾನ್ಯ ವಲಯದ ವಿಮಾನ ನಿಲ್ದಾಣಗಳ ನಿರ್ದೇಶಕರುಗಳಿಗೆ ಸೂಚಿಸಲಾಗಿದೆ ಎಂದು ಸಚಿವ ಸಿಂಗ್ ಹೇಳಿದರು.
ಈಶಾನ್ಯ ರಾಜ್ಯಗಳ ಅಭಿವೃದ್ಧಿ ವಿಷಯವು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಕಾರ್ಯಸೂಚಿಯ ಪಟ್ಟಿಯಲ್ಲಿ ಪ್ರಥಮ ಸ್ಥಾನದಲ್ಲಿದೆ ಎಂಬುದನ್ನು ಸಚಿವ ಸಿಂಗ್ ಪುನರುಚ್ಚರಿಸಿದ್ದಾರೆ.