ETV Bharat / bharat

ಗಂಗಾ ಕಾಲುವೆಗೆ ಬಿದ್ದ ಕಾರು: ಚಾಲಕ ಪ್ರಾಣಾಪಾಯದಿಂದ ಪಾರು

ಉತ್ತರ ಪ್ರದೇಶದ ಗಾಜಿಯಾಬಾದ್​ನಲ್ಲಿ ಗಂಗಾ ಕಾಲುವೆಗೆ ಸುಜುಕಿ ಕಾರು ಉರುಳಿ ಬಿದ್ದಿದೆ. ಘಟನೆಯಲ್ಲಿ ಕಾರು ಚಾಲಕನ್ನು ಪೊಲೀಸ್ ಅಧಿಕಾರಿ ರಕ್ಷಿಸಿದ್ದು, ಉಳಿದ ಮೂವರಿಗಾಗಿ ಹುಡುಕಾಟ ನಡೆಸಲಾಗಿದೆ.

car-crashes-into-canal-in-ghaziabad
ಗಾಜಿಯಾಬಾದ್​ನಲ್ಲಿ ಗಂಗಾ ಕಾಲುವೆಗೆ ಬಿದ್ದ ಸುಜುಕಿ ಕಾರು
author img

By

Published : Aug 8, 2020, 7:42 PM IST

ಗಾಜಿಯಾಬಾದ್: ಉತ್ತರ ಪ್ರದೇಶದ ಗಾಜಿಯಾಬಾದ್‌ನ ಮಸೂರಿ ಬಳಿಯ ಗಂಗಾ ಕಾಲುವೆಗೆ ಮಾರುತಿ ಸುಜುಕಿ ಕಾರು ಬಿದ್ದಿದ್ದು, ಕಾರಿನಲ್ಲಿ ನಾಲ್ವರು ಪ್ರಯಾಣಿಸುತ್ತಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ.

car-crashes-into-canal-in-ghaziabad
ಗಾಜಿಯಾಬಾದ್​ನಲ್ಲಿ ಗಂಗಾ ಕಾಲುವೆಗೆ ಬಿದ್ದ ಸುಜುಕಿ ಕಾರು

ಮಧ್ಯರಾತ್ರಿ 12 ಗಂಟೆ ಸಮಯದಲ್ಲಿ ಬರೇಲಿಯಿಂದ ಚಂಡಿಗಡ್​ ಕಡೆಗೆ ಹೊರಟ ಕೆಂಪು ಬಣ್ಣದ ಕಾರು ಗಂಗಾ ಕಾಲುವೆಗೆ ಬಿದ್ದಿದೆ. ಈ ಸಂದರ್ಭದಲ್ಲಿ ನಾನು ರಾತ್ರಿ ಪಾಳಯದಲ್ಲಿ ಕೆಲಸ ನಿರ್ವಹಿಸುತ್ತಿದ್ದೆ. ನನಗೆ ನೀರಿನಲ್ಲಿ ಕೈಗಳು ಕಾಣಿಸಿದವು. ತಕ್ಷಣ ನೀರಿಗೆ ಜಿಗಿದು ಕಾರು​ ಚಾಲಕನನ್ನು ರಕ್ಷಿಸಿದೆ ಎಂದು ಪೊಲೀಸ್​ ಅಧಿಕಾರಿ ನರೇಶ್​ ಸಿಂಗ್ ಘಟನೆಯನ್ನು​ ವಿವರಿಸಿದರು.

ಉಳಿದ ಮೂವರಿಗಾಗಿ ಹುಡುಕಾಟ ನಡೆಸಲಾಗುತ್ತಿದೆ ಎಂದು ಪೊಲೀಸ್​ ಮೂಲಗಳು ತಿಳಿಸಿವೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.