ಐಜಾಲ್: ಮಿಜೋರಾಂನ ಮಾಮಿತ್ ಜಿಲ್ಲೆಯ ಭಾರತ - ಬಾಂಗ್ಲಾದೇಶ ಗಡಿ ಬಳಿ, ಭದ್ರತಾ ಪಡೆಯ (ಬಿಎಸ್ಎಫ್) ಸಿಬ್ಬಂದಿ ಅಪಾರ ಪ್ರಮಾಣದ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಂಡಿದ್ದಾರೆ.
ಈ ಪ್ರಕರಣದಲ್ಲಿ ಭಾಗಿಯಾಗಿದ್ದ, ಮೂವರನ್ನು ಬಂಧಿಸಲಾಗಿದೆ ಎಂದು ಅರೆಸೈನಿಕ ಪಡೆ ಅಧಿಕಾರಿ ಮಂಗಳವಾರ ತಿಳಿಸಿದ್ದಾರೆ. ಬಂಧಿತ ವ್ಯಕ್ತಿಗಳನ್ನು ಲಾಲ್ಹುಪ್ಜೌವಾ (56), ವನ್ಲಾಲ್ರುವಾಟಾ (25) ಮತ್ತು ಲಿಯಾನ್ಸಂಗಾ (46) ಎಂದು ಗುರುತಿಸಲಾಗಿದೆ.
ಸೋಮವಾರ ರಾತ್ರಿ ಪಶ್ಚಿಮ ಫೈಲೆಂಗ್ ತಹಸಿಲ್‌ನ ದಕ್ಷಿಣ ಫುಲ್ಡುಂಗ್ಸೆ ಗ್ರಾಮದ ಬಳಿ ಎರಡು ವಾಹನಗಳಲ್ಲಿ ಸಾಗಿಸುತ್ತಿದ್ದ 28 ಎಕೆ -47 ರೈಫಲ್ಸ್, ಒಂದು ಎಕೆ -74 ಮತ್ತು ಯುಎಸ್ ನಿರ್ಮಿತ ಕಾರ್ಬೈನ್ ಜೊತೆಗೆ 7,894 ಮದ್ದುಗುಂಡು, 39,020 ರೂ. ನಗದು ಮತ್ತು ಇತರ ವಸ್ತುಗಳನ್ನು ಸಹ ವಶಪಡಿಸಿಕೊಳ್ಳಲಾಗಿದೆ.
ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ಸಾಗಿಸುವಾಗ ಐಜಾಲ್ ನಿವಾಸಿಗಳಾದ ಮೂವರನ್ನು ಬಂಧಿಸಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ. ಆರೋಪಿಗಳನ್ನು ರಾಜ್ಯ ಪೊಲೀಸರಿಗೆ ಹಸ್ತಾಂತರಿಸಲಾಗಿದ್ದು, ಅವರ ವಿಚಾರಣೆ ನಡೆಯುತ್ತಿದೆ.