ETV Bharat / bharat

370ನೇ ವಿಧಿ ರದ್ದು: ಕೇಂದ್ರ ಸರ್ಕಾರವನ್ನು ಟೀಕಿಸಿದ್ದ ಬ್ರಿಟನ್​ ಎಂಪಿಗೆ ಭಾರತ ಪ್ರವೇಶ ನಿಷಿದ್ಧ

ಜಮ್ಮು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನ ರದ್ದುಗೊಳಿಸಿರುವ ಕೇಂದ್ರ ಸರ್ಕಾರದ ಕ್ರಮ ಖಂಡಿಸಿದ್ದ ಬ್ರಿಟನ್​​ನ ಲೇಬರ್ ಪಕ್ಷದ ಸಂಸದೆ ಡೆಬ್ಬಿ ಅಬ್ರಾಹಂ ಅವರಿಗೆ ಭಾರತ ಪ್ರವೇಶಿಸಲು ಗೃಹ ಸಚಿವಾಲಯ ವೀಸಾ ನಿರಾಕರಿಸಿದೆ.

Labour Party MP Debbie Abraham
ಬ್ರಿಟನ್​​ನ ಲೇಬರ್ ಪಕ್ಷದ ಸಂಸದೆ ಡೆಬ್ಬಿ ಅಬ್ರಾಹಂ
author img

By

Published : Feb 17, 2020, 8:51 PM IST

ನವದೆಹಲಿ/ಲಂಡನ್​: ಜಮ್ಮು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನ ರದ್ದುಗೊಳಿಸಿರುವ ಕೇಂದ್ರ ಸರ್ಕಾರದ ಕ್ರಮ ಖಂಡಿಸಿ ಟೀಕಿಸಿದ್ದ ಬ್ರಿಟನ್​​ನ ಲೇಬರ್ ಪಕ್ಷದ ಸಂಸದೆ ಡೆಬ್ಬಿ ಅಬ್ರಾಹಂ ಅವರಿಗೆ ಭಾರತ ಪ್ರವೇಶಿಸಲು ಗೃಹ ಸಚಿವಾಲಯ ವೀಸಾ ನಿರಾಕರಿಸಿದೆ. ಅವರ ವೀಸಾ ಹೊರತಾಗಿ ಭಾರತಕ್ಕೆ ಪ್ರವೇಶಿಸುವುದಕ್ಕೂ ನಿರಾಕರಿಸಿದೆ.

ಅವರು ಎರಡು ದಿನಗಳ ಕಾಲ ಭಾರತ ಪ್ರವಾಸ ಕೈಗೊಂಡಿದ್ದರು. ಹೀಗಾಗಿ, ದುಬೈ ವಿಮಾನ ನಿಲ್ದಾಣದ ಮೂಲಕ ಬೆಳಗ್ಗೆ ದೆಹಲಿಗೆ ಆಗಮಿಸಿದ್ದರು. ಕಾಶ್ಮೀರಕ್ಕೆ ಆಗಮಿಸುವ ಎಲ್ಲಾ ಪಕ್ಷಗಳ ಸಂಸತ್​ ಸದಸ್ಯರ ಅಧ್ಯಕ್ಷರಾಗಿರುವ ಅಬ್ರಾಹಂ ಅವರು ಕುಟುಂಬ ಮತ್ತು ಸ್ನೇಹಿತರನ್ನು ಭೇಟಿಯಾಗಲು ಬಂದಿದ್ದರು.

ಕಳೆದ ವರ್ಷ ಅಕ್ಟೋಬರ್​​ನಲ್ಲಿ ಭಾರತದ ಪ್ರವಾಸ ಕೈಗೊಳ್ಳುವ ಸಲುವಾಗಿ ಒಂದು ವರ್ಷದ ಅವಧಿಗೆ ಇ-ವೀಸಾ ಪಡೆದುಕೊಂಡಿದ್ದರು. ಅದು ಈ ವರ್ಷದ ಅಕ್ಟೋಬರ್​​ವರೆಗೂ ಮಾನ್ಯತೆ ಹೊಂದಿತ್ತು.

ಕಳೆದ ವರ್ಷವೇ ಸಂಸದೆಯ ವೀಸಾ ರದ್ದಾಗಿರುವ ಕುರಿತು ಮಾಹಿತಿ ನೀಡಲಾಗಿತ್ತು. ಈ ವಿಷಯ ಗೊತ್ತಿದ್ದರೂ ಭಾರತಕ್ಕೆ ಬಂದಿದ್ದಾರೆ ಎಂದು ಸಚಿವಾಲಯ ಹೇಳಿದೆ. ಆದರೆ, ರದ್ದುಪಡಿಸಲು ಕಾರಣ ಏನು ಎಂಬುದನ್ನು ಸಚಿವಾಲಯ ತಿಳಿಸಿಲ್ಲ.

ಮಾನ್ಯತೆ ಹೊಂದಿರುವ ವೀಸಾ ಇದ್ದರೂ, ಅವರಿಗೆ ಭಾರತ ಪ್ರವೇಶ ನಿರಾಕರಣೆಗೊಳಿಸಿ ಗಡಿಪಾರು ಮಾಡಲಾಗಿದೆ ಎಂದು ಅಬ್ರಹಾಂ ಆರೋಪಿಸಿದರು. ದೆಹಲಿಯ ಇಂದಿರಾಗಾಂಧಿ ವಿಮಾನ ನಿಲ್ದಾಣಕ್ಕೆ ಬಂದಾಗ ಅಧಿಕಾರಿಗಳು, ನನ್ನ ಕೈ ಕುಲುಕಿದರು. ಬಳಿಕ ನಿಮ್ಮ ವೀಸಾ ರದ್ದಾಗಿದೆ ಎಂದರು. 10 ನಿಮಿಷ ನನಗೆ ಕಾಣದಂತೆ ವೀಸಾ ತೆಗೆದಿಟ್ಟುಕೊಂಡಿದ್ದರು. ನನ್ನನ್ನು ಅಪರಾಧಿಯಂತೆ ಪರಿಗಣಿಸಿದರು ಎಂದು ಅಬ್ರಾಹಂ ಆರೋಪಿಸಿದ್ದಾರೆ.

2019ರ ಆಗಸ್ಟ್​ನಲ್ಲಿ ಜಮ್ಮು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ರದ್ದುಪಡಿಸಿದ ಕೇಂದ್ರ ಸರ್ಕಾರದ ನಿರ್ಧಾರವನ್ನು ಡೆಬ್ಬಿ ಅಬ್ರಾಹಂ ಅವರು ಖಂಡಿಸಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.