ETV Bharat / bharat

ಸ್ತನ ಆರೋಗ್ಯ ಸಮಸ್ಯೆಯ ತಪ್ಪು ಕಲ್ಪನೆಗಳು ಮತ್ತು ಸತ್ಯಾಸತ್ಯತೆ - 3: ಸ್ತನ ಕ್ಯಾನ್ಸರ್​ನ ವಿವಿಧ ಹಂತಗಳ ಮಾಹಿತಿ - ಸ್ತನ ಕ್ಯಾನ್ಸರ್ ಚಿಕಿತ್ಸೆ

ಸ್ತನ ಕ್ಯಾನ್ಸರ್ ಎಂದರೇನು ಮತ್ತು ಅದು ಎಲ್ಲಿ ಉದ್ಭವಿಸುತ್ತದೆ, ಕ್ಯಾನ್ಸರ್ ಹಂತ ಮತ್ತು ದರ್ಜೆಯ ನಡುವಿನ ವ್ಯತ್ಯಾಸವೇನು ಎಂಬ ಅಂಶಗಳ ಬಗ್ಗೆ ಡಾ.ಪಿ. ರಘು ರಾಮ್​ ವಿವರಿಸಿದ್ದಾರೆ.

ಸ್ತನ ಆರೋಗ್ಯ ಸಮಸ್ಯೆಯ ತಪ್ಪು ಕಲ್ಪನೆಗಳು ಮತ್ತು ಸತ್ಯಾಸತ್ಯತೆ - 3

author img

By

Published : Oct 20, 2020, 10:01 AM IST

ಹೈದರಾಬಾದ್: 'ಈಟಿವಿ ಭಾರತ' ಸುಖಿಭವದೊಂದಿಗೆ ಮಾತನಾಡಿದ ಡಾ. ಪಿ.ರಘು ರಾಮ್​ ಸ್ತನ ಕ್ಯಾನ್ಸರ್​ ಕುರಿತು ಮಾಹಿತಿ ನೀಡಿದ್ದಾರೆ. ಸ್ತನ ಕ್ಯಾನ್ಸರ್ ಎಂದರೇನು ಮತ್ತು ಅದು ಎಲ್ಲಿ ಉದ್ಭವಿಸುತ್ತದೆ, ಕ್ಯಾನ್ಸರ್ ಹಂತ ಮತ್ತು ದರ್ಜೆಯ ನಡುವಿನ ವ್ಯತ್ಯಾಸವೇನು ಎಂಬ ಅಂಶಗಳ ಬಗ್ಗೆ ತಿಳಿಸಿದ್ದಾರೆ.

ಪ್ರಶ್ನೆ 1 - ಸ್ತನ ಕ್ಯಾನ್ಸರ್ ಎಂದರೇನು ಮತ್ತು ಅದು ಎಲ್ಲಿ ಉದ್ಭವಿಸುತ್ತದೆ?

ಉತ್ತರ - ಸ್ತನ ಅಂಗಾಂಶವು ನಾಳಗಳು ಮತ್ತು ಲೋಬ್ಯುಲ್‌ಗಳಿಂದ ಕೂಡಿದೆ. ಸ್ತನದಲ್ಲಿನ ಒಂದು ಕೋಶವು ವಿಭಜನೆಗೊಳ್ಳಲು ಮತ್ತು ಅಸಹಜ ರೀತಿಯಲ್ಲಿ ಬೆಳೆಯಲು ಪ್ರಾರಂಭಿಸಿದಾಗ ಸ್ತನ ಕ್ಯಾನ್ಸರ್ ಸಂಭವಿಸುತ್ತದೆ.

ಸ್ತನ ಕ್ಯಾನ್ಸರ್​ನಲ್ಲಿ ವಿಧಗಳಿವೆ. ಇದನ್ನು ಕಾರ್ಸಿನೋಮ ಎಂದೂ ಕರೆಯುತ್ತಾರೆ. ನಾಳಗಳಿಂದ ಉಂಟಾಗುವ ಸ್ತನ ಕ್ಯಾನ್ಸರ್ ಅನ್ನು ಡಕ್ಟಲ್ ಕಾರ್ಸಿನೋಮ (ಸ್ತನ ಕ್ಯಾನ್ಸರ್​ನ ಸಾಮಾನ್ಯ ರೂಪ) ಎಂದು ಕರೆಯಲಾಗುತ್ತದೆ ಮತ್ತು ಲೋಬ್ಯುಲ್‌ಗಳಿಂದ ಉಂಟಾಗುವ ಕ್ಯಾನ್ಸರ್ ಅನ್ನು ಲೋಬ್ಯುಲರ್ ಕಾರ್ಸಿನೋಮ ಎಂದು ಕರೆಯಲಾಗುತ್ತದೆ.

ಪ್ರಶ್ನೆ 2 - ಕ್ಯಾನ್ಸರ್ ಹಂತ ಮತ್ತು ದರ್ಜೆಯ ನಡುವಿನ ವ್ಯತ್ಯಾಸವೇನು?

ಉತ್ತರ - ಕ್ಯಾನ್ಸರ್ ಹರಡುವ ಸಾಮರ್ಥ್ಯವನ್ನು ಕ್ಯಾನ್ಸರ್​ನ ಗ್ರೇಡ್ ಎಂದು ಕರೆಯಲಾಗುತ್ತದೆ. ಸ್ತನ ಕ್ಯಾನ್ಸರ್ ಅನ್ನು 1, 2 ಅಥವಾ 3 ಹಂತದಲ್ಲಿ ವರ್ಗೀಕರಿಸಲಾಗಿದೆ. ಸಾಮಾನ್ಯವಾಗಿ ಕಡಿಮೆ ದರ್ಜೆಯ (ಗ್ರೇಡ್ 1) ನಿಧಾನವಾಗಿ ಬೆಳೆಯುತ್ತಿರುವ ಕ್ಯಾನ್ಸರ್ ಅನ್ನು ಸೂಚಿಸುತ್ತದೆ ಮತ್ತು ಹೆಚ್ಚಿನ ಗ್ರೇಡ್ (ಗ್ರೇಡ್ 3) ವೇಗವಾಗಿ ಬೆಳೆಯುತ್ತಿರುವ ಕ್ಯಾನ್ಸರ್ ಅನ್ನು ಸೂಚಿಸುತ್ತದೆ. ಕ್ಯಾನ್ಸರ್ ಹರಡುವಿಕೆಯ ವ್ಯಾಪ್ತಿಯನ್ನು ರೋಗದ ಹಂತ ಎಂದು ಕರೆಯಲಾಗುತ್ತದೆ.

  • ಹಂತ 1: ಗೆಡ್ಡೆ 2 ಸೆಂ.ಮೀ. ಗಿಂತ ಕಡಿಮೆ, ಇದು ಹರಡುವುದಿಲ್ಲ
  • ಹಂತ 2: ಗೆಡ್ಡೆ 2 - 5 ಸೆಂ.ಮೀ, ಲಿಂಫ್​ ನೋಡ್​ನ್ನು ಒಳಗೊಂಡಿರಬಹುದು ಅಥವಾ ಇಲ್ಲ, ದೇಹದ ಇತರ ಭಾಗಗಳಿಗೆ ಹರಡುವುದಿಲ್ಲ
  • ಹಂತ 3: ಗೆಡ್ಡೆ 5 ಸೆಂ.ಮೀ ಗಿಂತ ಹೆಚ್ಚು ಅಥವಾ ಯಾವುದೇ ಗಾತ್ರದಲ್ಲಿರಬಹುದು. ಸ್ತನ ಗೋಡೆ, ಸ್ನಾಯು ಅಥವಾ ಚರ್ಮಕ್ಕೆ ಹೊಂದಿಕೊಂಡಿರುತ್ತದೆ
  • ಹಂತ 4: ಗೆಡ್ಡೆ ಯಾವುದೇ ಗಾತ್ರ, ಲಿಂಫ್​ ನೋಡ್ ಒಳಗೊಂಡಿರಬಹುದು ಅಥವಾ ಇಲ್ಲದಿರಬಹುದು. ಆದರೆ ಕ್ಯಾನ್ಸರ್ ದೇಹದ ಇತರ ಭಾಗಗಳಿಗೆ ಹರಡಬಹುದು

(ಮೂಲ: ಕ್ಯಾನ್ಸರ್ ವಿರುದ್ಧ ಅಂತಾರಾಷ್ಟ್ರೀಯ ಒಕ್ಕೂಟ - ಯುಐಸಿಸಿ)

ಪ್ರಶ್ನೆ 3 - ಸ್ತನ ಕ್ಯಾನ್ಸರ್​ಗೆ ಚಿಕಿತ್ಸೆ ನೀಡುವ ಉದ್ದೇಶಗಳು ಯಾವುವು?

ಉತ್ತರ - ಸ್ತನದಿಂದ ಕ್ಯಾನ್ಸರ್ ಪ್ರದೇಶವನ್ನು ಮತ್ತು ತೋಳಿನ ಬಳಿ ಯಾವುದೇ ಪೀಡಿತ ಲಿಂಫ್​ ನೋಡ್​ಗಳನ್ನು ತೆಗೆದುಹಾಕುವುದು. ರಕ್ತದ ಹರಿವು ಅಥವಾ ಲಿಂಫಾಟಿಕ್​ ವ್ಯವಸ್ಥೆಯ ಮೂಲಕ ಸ್ತನದಿಂದ ದೇಹಕ್ಕೆ ಈಗಾಗಲೇ ಹರಡಿರುವ ಯಾವುದೇ ಕ್ಯಾನ್ಸರ್ ಕೋಶಗಳನ್ನು ನಾಶ ಮಾಡುವುದು.

ಪ್ರಶ್ನೆ 4 - ಸ್ತನ ಕ್ಯಾನ್ಸರ್ ಚಿಕಿತ್ಸೆಗಾಗಿ ಲಭ್ಯವಿರುವ ವಿಧಾನಗಳು ಯಾವುವು?

ಉತ್ತರ - ಸ್ತನ ಕ್ಯಾನ್ಸರ್​ಗೆ ಚಿಕಿತ್ಸೆ ನೀಡಲು ಮೂಲಭೂತವಾಗಿ ನಾಲ್ಕು ವಿಧಾನಗಳಿವೆ. ಅವು:- 1. ಶಸ್ತ್ರಚಿಕಿತ್ಸೆ, 2.ಕಿಮೋಥೆರಪಿ, 3.ರೇಡಿಯೋಥೆರಪಿ, 4.ಹಾರ್ಮೋನ್ ಚಿಕಿತ್ಸೆ. ಆದರೆ ಎಲ್ಲಾ ರೋಗಿಗಳಿಗೆ ಕಿಮೋಥೆರಪಿ, ರೇಡಿಯೊಥೆರಪಿ ಮತ್ತು ಹಾರ್ಮೋನ್ ಚಿಕಿತ್ಸೆಯ ಅಗತ್ಯವಿರುವುದಿಲ್ಲ.

ಪ್ರಶ್ನೆ 5 - ಸ್ತನ ಕ್ಯಾನ್ಸರ್ ಎಲ್ಲಿಗೆ ಹರಡಬಹುದು?

ಉತ್ತರ - ಗಾತ್ರ, ದರ್ಜೆ ಮತ್ತು ಲಿಂಫ್​ ನೋಡ್​ಗಳಿಗೆ ಅನುಗುಣವಾಗಿ, ಕ್ಯಾನ್ಸರ್ ಹರಡಿದೆಯೆ ಎಂದು ನಿರ್ಣಯಿಸಲು ಹಂತದ ಪರೀಕ್ಷೆಗಳನ್ನು ಮಾಡಲಾಗುತ್ತದೆ. ಕ್ಯಾನ್ಸರ್ ಸಂಭಾವ್ಯವಾಗಿ ನಾಲ್ಕು ಪ್ರದೇಶಗಳಿಗೆ ಹರಡಬಹುದು. ಅಂದರೆ ಯಕೃತ್ತು, ಶ್ವಾಸಕೋಶ, ಮೆದುಳು ಮತ್ತು ಮೂಳೆಗಳು. ಸ್ಟೇಜಿಂಗ್ ಪರೀಕ್ಷೆಗಳು ಮೇಲೆ ತಿಳಿಸಿದ ಪ್ರದೇಶಗಳಿಗೆ ಕ್ಯಾನ್ಸರ್ ಹರಡಿದೆಯೆ ಎಂದು ನಿರ್ಣಯಿಸುವ ಗುರಿಯನ್ನು ಹೊಂದಿದೆ.

ಪ್ರಶ್ನೆ 6 - ಸ್ತನ ಕ್ಯಾನ್ಸರ್ ಚಿಕಿತ್ಸೆಯಲ್ಲಿ ಸಮಾಲೋಚನೆ ಏಕೆ ಮುಖ್ಯ?

ಉತ್ತರ - ಸ್ತನ ಕ್ಯಾನ್ಸರ್ ಆರೈಕೆಯಲ್ಲಿ ಕೌನ್ಸೆಲಿಂಗ್ ಬಹಳ ಮುಖ್ಯವಾದ ಅಂಶವಾಗಿದೆ. ಏಕೆಂದರೆ ರೋಗಿಗಳು ಮತ್ತು ಅವರ ಸಂಬಂಧಿಕರಿಗೆ ಇದು ಚಿಕಿತ್ಸೆಯ ಪ್ರತಿಯೊಂದು ಹಂತದಲ್ಲೂ ಸಹಾಯವಾಗುತ್ತದೆ. ಸಮಾಲೋಚನೆಯು ಸೂಕ್ಷ್ಮ ಮತ್ತು ಬೆಂಬಲ ವಾತಾವರಣದಲ್ಲಿ ತಜ್ಞರಿಂದ ರೋಗನಿರ್ಣಯ ಮತ್ತು ವಿವಿಧ ಚಿಕಿತ್ಸಾ ಆಯ್ಕೆಗಳ ಬಗ್ಗೆ ಚರ್ಚೆಯನ್ನು ಒಳಗೊಂಡಿರುತ್ತದೆ. ಸಮಾನವಾಗಿ, ಕೌನ್ಸೆಲಿಂಗ್​ನಲ್ಲಿ ಸಾಕಷ್ಟು ಮಾನಸಿಕ ಮತ್ತು ಭಾವನಾತ್ಮಕ ಬೆಂಬಲವನ್ನು ನೀಡಲಾಗುತ್ತದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.