ETV Bharat / bharat

ವಾಡ ಕೊರೊನಾ... ಕೋವಿಡ್-19 ವಿರುದ್ಧ ಹೋರಾಟಕ್ಕೆ ಕೇರಳ ಪೊಲೀಸರಿಂದ ಜಾಗೃತಿ ವಿಡಿಯೋ

author img

By

Published : Mar 22, 2020, 10:40 AM IST

COVID-19 ವಿರುದ್ಧ ಹೋರಾಡಲು ಕೈಗೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳನ್ನೊಳಗೊಂಡ ಜಾಗೃತಿ ವಿಡಿಯೋವೊಂದನ್ನು ಕೇರಳ ಪೊಲೀಸರು ತಯಾರಿಸಿ ತಮ್ಮ ಫೇಸ್​ಬುಕ್​ ಪೇಜ್​ನಲ್ಲಿ ಹರಿಬಿಟ್ಟಿದ್ದಾರೆ.

Break the chain: Kerala police releases second video to combat spread of Covid 19
ಕೋವಿಡ್-19 ಎಡೆಗೆ ಜಾಗೃತಿಗೊಳಿಸಲು ಕೇರಳ ಪೊಲೀಸರಿಂದ ವಿನೂತನ ಪ್ರಯತ್ನ

ಕೇರಳ: ಕೇರಳ ಪೊಲೀಸರು COVID-19 ವಿರುದ್ಧ ಹೋರಾಡಲು ಜಾಗೃತಿ ವಿಡಿಯೋವೊಂದನ್ನು ತಯಾರಿಸಿದ್ದಾರೆ. ಈ ವೀಡಿಯೊ ಪೊಲೀಸರ ‘ಬ್ರೇಕ್ ದಿ ಚೈನ್’ ಅಭಿಯಾನದ ಭಾಗವಾಗಿದೆ. ಮತ್ತು ಮಾರಕ ಕೊರೊನಾ ವೈರಸ್ ಹರಡುವುದನ್ನು ಹೇಗೆ ಎದುರಿಸುವುದು ಎಂಬ ಸಂದೇಶವನ್ನು ಸಾರುತ್ತದೆ.

ಕೈಯನ್ನು ಸ್ಯಾನಿಟೈಜರ್​ನಿಂದ ಶುಚಿಗೊಳಿಸಿಕೊಳ್ಳುವುದು ಮತ್ತು ಫೇಸ್ ಮಾಸ್ಕ್ ಬಳಸುವ ಪ್ರಾಮುಖ್ಯತೆಯನ್ನು ಈ ವೀಡಿಯೊ ವಿವರಿಸುತ್ತದೆ. ಜೊತೆಗೆ ಜನರಿಗೆ ಆತ್ಮಸ್ಥೈರ್ಯದಿಂದ ಮಹಾಮಾರಿ ವೈರಸ್​ ವಿರುದ್ಧ ಹೋರಾಡುವ ಧೈರ್ಯ ನೀಡುತ್ತದೆ.

ಪೃಥ್ವಿರಾಜ್ ನಿರ್ದೇಶನದ, ಮೋಹನ್ ಲಾಲ್ ಅಭಿನಯದ 'ಲೂಸಿಫರ್' ಚಿತ್ರದ 'ಕಡವುಲೈ ಧ್ರುವ' ಹಾಡನ್ನು ಈ ಜಾಗೃತಿ ವಿಡಿಯೋದ ಹಿನ್ನಲೆ ಗಾಯನವನ್ನಾಗಿ ಬಳಸಿಕೊಂಡಿರುವ ಕೇರಳ ಪೊಲೀಸರು, ತಮ್ಮ ಅಧಿಕೃತ ಫೇಸ್‌ಬುಕ್ ಪುಟದ ಮೂಲಕ ಅಪ್‌ಲೋಡ್ ಮಾಡಿದ್ದಾರೆ. ವಿಡಿಯೋದಲ್ಲಿ, ಕೊರೊನಾ ವೈರಸ್​ ನಿಮ್ಮ ಮೇಲೆ ದಾಳಿ ನಡೆಸಿದ್ದರೆ ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡುವ ನಿಮ್ಮ ಪ್ರಯತ್ನಕ್ಕೆ ಕೇರಳ ಪೊಲೀಸರು ಮತ್ತು ಆರೋಗ್ಯ ಕಾರ್ಯಕರ್ತರು ಸಹಸಹಕರಿಸುತ್ತಾರೆ. ಹೆದರದೇ ಹೋರಾಡಿ ನಾವು ನಿಮ್ಮೊಂದಿಗಿದ್ದೇವೆ ಎಂಬ ಸಂದೇಶ ನೀಡಿದ್ದಾರೆ.

ಇನ್ನೂ ಈ ಜಾಗೃತಿ ವೀಡಿಯೋವನ್ನು ಕೊರೊನಾದ ವಿರುದ್ಧ ಧೈರ್ಯದಿಂದ ಹೋರಾಡುವ ಆರೋಗ್ಯ ಇಲಾಖೆ ಅಧಿಕಾರಿಗಳು, ಸ್ವಯಂಸೇವಕರು, ಸಹೋದ್ಯೋಗಿಗಳು, ಮಾಧ್ಯಮಗಳು ಮತ್ತು ಸಾರ್ವಜನಿಕರಿಗೆ ಸಮರ್ಪಿಸಲಾಗಿದೆ. ಈ ವೀಡಿಯೋದ ಕಲ್ಪನೆಯ ಹಿಂದಿನ ಕಣ್ಣಿರುವುದು ಐಪಿಎಸ್ ಮನೋಜ್ ಅಬ್ರಹಾಂ ಅವರದ್ದು. ಕೋವಿಡ್-19 ಹರಡುವಿಕೆಯನ್ನು ತಡೆಯುವ ತಡೆಗಟ್ಟುವ ಕ್ರಮಗಳ ಬಗ್ಗೆ ಜಾಗೃತಿ ಮೂಡಿಸಲು ಪೊಲೀಸ್ ಇಲಾಖೆ ಮಾಡಿರುವ ಈ ಪ್ರಯತ್ನವನ್ನು ಸಾಮಾಜಿಕ ಮಾಧ್ಯಮ ಬಳಕೆದಾರರು ಶ್ಲಾಘಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.