ಬೆಂಗಳೂರು: ದಿ ಡಿವೈನ್ 7801 ಬ್ರಹ್ಮವಜ್ರ ಕಮಲಂ ಹೆಸರಿನ ಗಿನ್ನಿಸ್ ವಿಶ್ವದಾಖಲೆ ಉಂಗುರವನ್ನು ಆನ್‍ಲೈನ್‍ನಲ್ಲಿ 2020 ನವೆಂಬರ್ 13-22ರವರೆಗೆ ಹರಾಜು ಹಾಕಲಾಗುತ್ತಿದೆ. ಇಂದಿನಿಂದ ನೋಂದಣಿ ಆರಂಭವಾಗಿದ್ದು, ಉಂಗುರದಲ್ಲಿ ಒಟ್ಟು 7801 ಸಂಘರ್ಷ ಮುಕ್ತವಾದ ನೈಸರ್ಗಿಕ ವಜ್ರಗಳನ್ನು ಬಳಸಲಾಗಿದೆ.
ಹೈದರಾಬಾದ್‍ನಲ್ಲಿರುವ ದಿ ಡೈಮಂಡ್ ಸ್ಟೋರ್ ಬೈ ಚಂದೂಭಾಯ್ (ಹಾಲ್‍ಮಾರ್ಕ್ ಜ್ಯುವೆಲರ್ಸ್‍ನ ಘಟಕ)ನ ಮಾಲೀಕರಾದ ಕೊಟ್ಟಿ ಶ್ರೀಕಾಂತ್ ಅವರು ಒಂದು ಉಂಗುರದಲ್ಲಿ ಅತ್ಯಂತ ಹೆಚ್ಚಿನ ಸಂಖ್ಯೆಯ ವಜ್ರಗಳನ್ನು ಅಳವಡಿಸಿ ಸೆಪ್ಟೆಂಬರ್, 2020ರಲ್ಲಿ ನೂತನ ಗಿನ್ನಿಸ್ ದಾಖಲೆಯ ಸಾಧನೆ ಸ್ಥಾಪಿಸಿದ್ದಾರೆ.
ಒಟ್ಟು 7,801 ನೈಸರ್ಗಿಕ ವಜ್ರಗಳನ್ನು ಬಳಸಲಾಗಿರುವ ಉಂಗುರವನ್ನು ಆನ್‍ಲೈನ್‍ನಲ್ಲಿ ನವೆಂಬರ್ 13ರಿಂದ ನವೆಂಬರ್22, 2020 ರವರೆಗೆ ಹರಾಜು ಹಾಕಲಾಗುತ್ತಿದೆ. ಹರಾಜಿಗೆ ನೋಂದಣಿ ಪ್ರಕ್ರಿಯೆ ನವೆಂಬರ್ 2, 2020ರಿಂದ ಆರಂಭವಾಗುತ್ತಿದೆ. ಹರಾಜಿನಲ್ಲಿ ಭಾಗವಹಿಸುವವರಿಗೆ ಇದರ ಮೀಸಲು ಬೆಲೆಯನ್ನು 78,01,000 ರೂ.(ಸುಮಾರು 104,692 ಯುಎಸ್ ಡಾಲರ್)ಗಳೆಂದು ನಿಗದಿಪಡಿಸಲಾಗಿದೆ.
ಈ ಉಂಗುರದ ಸೃಷ್ಟಿಕರ್ತರಾದ ಕೊಟ್ಟಿ ಶ್ರೀಕಾಂತ್ ಅವರು ಮಾತನಾಡಿ, "ಆಭರಣಗಳಲ್ಲಿ ಅತ್ಯಂತ ಅನನ್ಯ ಕಲಾವಸ್ತುಗಳನ್ನು ಸೃಷ್ಟಿಸುವ ನನ್ನ ಭಾವೋದ್ವೇಗವನ್ನು ಗುರುತಿಸಿರುವುದಕ್ಕೆ ನಾನು ಗಿನ್ನಿಸ್ ವಿಶ್ವದಾಖಲೆ ಸಂಸ್ಥೆಗೆ ವಂದನೆ ಸಲ್ಲಿಸುತ್ತೇನೆ ಮತ್ತು ನನಗಿದು ಅತ್ಯಂತ ಗೌರವದ ವಿಷಯವಾಗಿದೆ. ಈ ಯಶಸ್ಸನ್ನು ಹಂಚಿಕೊಳ್ಳಲು ಮತ್ತು ಜಾಗತಿಕ ಆನ್‍ಲೈನ್ ಹರಾಜಿಗೆ ಈ ಮೇರು ಕೃತಿಯನ್ನು ಸಾದರಪಡಿಸಲು ನಾನು ಹರ್ಷಿಸುತ್ತೇನೆ. ಅಲ್ಲದೆ ಈ ಹರಾಜಿನಿಂದ ಬರುವ ಮೊತ್ತದಲ್ಲಿ ಶೇ.10ರಷ್ಟನ್ನು ಪಿಎಂ ಕೇರ್ಸ್ ನಿಧಿಗೆ ನೀಡಲು ನಾನು ಇಚ್ಛಿಸಿದ್ದೇನೆ’’ ಎಂದರು.
ಆಸಕ್ತರಿಗಾಗಿ ಹರಾಜು ಪ್ರಕ್ರಿಯೆ ವೆಬ್‍ಸೈಟ್ www.thedivine7801.com ರಲ್ಲಿ ನೋಂದಣಿಗಳನ್ನು ಆಹ್ವಾನಿಸಲಾಗಿದೆ. ನೋಂದಣಿಗಳು ಮುಕ್ತಾಯವಾದ ನಂತರ ಹರಾಜಿಗಾಗಿ ಒಂದು ಯುಆರ್‍ಎಲ್, ಯೂಸರ್ ಐಡಿ, ಮತ್ತು ಪಾಸ್‍ವರ್ಡ್‍ಗಳನ್ನು ನೋಂದಾಯಿತ ಹರಾಜುದಾರರಿಗೆ ಕಳುಹಿಸಲಾಗುವುದು. ಮಾನ್ಯತೆ ಹೊಂದಿರುವ ಯೂಸರ್ ಐಡಿ ಮತ್ತು ಪಾಸ್‍ವರ್ಡ್ ಹೊಂದಿರುವ ಎಲ್ಲಾ ಹರಾಜುದಾರರಿಗೆ ಈ ಹರಾಜಿನಲ್ಲಿ ರಿಯಲ್‍ಟೈಮ್‍ನಲ್ಲಿ ನೇರವಾಗಿ ಭಾಗವಹಿಸುವ ಅವಕಾಶ ಇರುತ್ತದೆ.
ದಿ ಡಿವೈನ್ 7801 ಬ್ರಹ್ಮವಜ್ರ ಕಮಲಂ ವಿಶೇಷತೆ: ಹಿಮಾಲಯದಲ್ಲಿ ಕಂಡು ಬರುವ ಅಪರೂಪದ ಹೂವಾದ ಬ್ರಹ್ಮಕಮಲದಿಂದ ಈ ಉಂಗುರದ ಹೆಸರು ಸ್ಫೂರ್ತಿ ಪಡೆದಿದೆ. ಈ ಹೂವು ವೈದ್ಯಕೀಯ ಗುಣಗಳನ್ನೂ ಹೊಂದಿರುತ್ತದೆ ಎಂದು ಪರಿಗಣಿಸಲಾಗಿದೆ. ಸಂಸ್ಕøತ, ತೆಲುಗು ಹಾಗೂ ಕನ್ನಡದಲ್ಲಿ ಡೈಮಂಡ್ ಅನ್ನು ವಜ್ರ ಎಂದು ಕರೆಯಲಾಗುತ್ತದೆ.
ದಿ ಡಿವೈನ್ ರಿಂಗ್(ದೈವೀಕ ಉಂಗುರ) ವಿನ್ಯಾಸಕ್ಕಾಗಿ ಆರಿಸಲಾದ ಹೂವು ಅತ್ಯಂತ ನೈಸರ್ಗಿಕ ಮತ್ತು ಪರಿಶುದ್ಧ ರೂಪದಲ್ಲಿ ಸಾಮಾನ್ಯ ಪೂಜೆಯ ಅರ್ಪಣೆಯಾಗಿರುತ್ತದೆ. ಸೆಪ್ಟೆಂಬರ್ 2018ರಲ್ಲಿ ಈ ಉಂಗುರದ ಚಿಂತನೆಯನ್ನು ರೂಪಿಸಲಾಗಿದ್ದು, ಅದನ್ನು ಪೂರ್ಣಗೊಳಿಸಲು 11 ತಿಂಗಳುಗಳ ಸಮರ್ಪಿತ ಕಲಾತ್ಮಕ ಪ್ರಯತ್ನ ಮತ್ತು ಕರಕುಶಲತೆ ಅಗತ್ಯವಾಯಿತು. ಎಂಟು ದಳಗಳೊಂದಿಗೆ ಐದು ಪದರಗಳನ್ನು ಇದು ಹೊಂದಿದ್ದು, ಅತ್ಯಂತ ಮೇಲ್ಭಾಗದ ಪದರ ಆರು ದಳಗಳನ್ನು ಹೊಂದಿರುವುದರ ಜೊತೆಗೆ ಕೇಂದ್ರ ಭಾಗದಲ್ಲಿ ಮೂರು ಪುಷ್ಪರೇಣುಗಳನ್ನು ಹೊಂದಿರುತ್ತದೆ.