ನವದೆಹಲಿ: ಗೌರಿ ಗಣೇಶ ಹಬ್ಬದ ಹಿನ್ನಲೆ ಬಾಲಿವುಡ್ ನಟ ನಟಿಯರು ಮನೆಯಲ್ಲಿ ಗಣಪತಿ ಬಪ್ಪನ ಮೂರ್ತಿಯನ್ನ ಪ್ರತಿಷ್ಠಾಪಿಸಿ ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು.
ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಇಂದು ಗಣೇಶನ ಚತುರ್ಥಿಯಾದ್ದರಿಂದ ಭಾನುವಾರ ಮಧ್ಯಾಹ್ನವೇ ಚಿಂಚ್‌ಪೋಕ್ಲಿಯಲ್ಲಿ ಹೊಸ ಗಣೇಶ ವಿಗ್ರಹವನ್ನು ಮನೆಗೆ ತೆಗೆದುಕೊಂಡು ಹೋಗಿ ಪ್ರತಿಷ್ಠಾಪಿಸಿದರು. ಗಣಪತಿ ಮೂರ್ತಿಯೊಂದಿಗೆ ಮನೆ ತಲುಪಿದ ಶಿಲ್ಪ ವಿನಾಯಕನನ್ನು ಮನೆಯೊಳಗೆ ಬರಮಾಡಿಕೊಳ್ಳುವ ವೇಳೆ ಗಣಪತಿ ಬಪ್ಪಾ ಮೊರೆಯಾ ಮಂತ್ರ ಪಠಿಸಿದರು.
![Bollwood cBollwood celebrities celebrated Ganesha chathurthielebreties celebrated Ganesha chathurthi](https://etvbharatimages.akamaized.net/etvbharat/prod-images/4316565_ghghgjg.jpg)
ಇನ್ನೂ ಬಾಲಿವುಡ್ ನಟ ವಿವೇಕ್ ಓಬೆರಾಯ್ ಕೂಡ ಪರಿಸರ ಸ್ನೇಹಿ ಮಣ್ಣಿನ ಗಣಪನನ್ನು ತಮ್ಮ ನಿವಾಸದಲ್ಲಿ ಪ್ರತಿಷ್ಠಾಪಿಸುತ್ತಾ ಕ್ಯಾಮೆರಾ ಕಣ್ಣಿಗೆ ಬಿದ್ದರು.
ಇನ್ನೂ ಈ ಬಗ್ಗೆ ಮಾತನಾಡಿದ ಅವರು, "ಪ್ರತಿ ವರ್ಷದಂತೆ, ಈ ವರ್ಷವೂ ನಾನು ಪರಿಸರ ಸ್ನೇಹಿ ಗಣಪನನ್ನೆ ಪ್ರತಿಷ್ಠಾಪಿಸಿದ್ದೇನೆ. ಹಿಂದಿನಿಂದಲೂ ನಾವು ಗಣೇಶ ಚತುರ್ಥಿಗೆ ವಿಷಕಾರಿ ಬಣ್ಣಗಳಿಂದ ಕೂಡಿದ ಪಿಒಪಿ ಗಣಪನನ್ನು ಪ್ರತಿಷ್ಠಾಪಿಸದೆ ಮಣ್ಣಿನ ಗಣಪನನ್ನೆ ಇಡುತ್ತಾ ಬಂದಿದ್ದೇವೆ ಎಂದು ಹೆಮ್ಮೆಯಿಂದಲೇ ಹೇಳಿಕೊಂಡಿದ್ದಾರೆ.
![Bollwood cBollwood celebrities celebrated Ganesha chathurthielebreties celebrated Ganesha chathurthi](https://etvbharatimages.akamaized.net/etvbharat/prod-images/4316565_hjghffgy.jpg)
ಬಾಲಿವುಡ್ ಡಿಂಪಲ್ ಕ್ವೀನ್ ಪ್ರೀತಿ ಜಿಂಟಾ ತಮ್ಮ ನಿವಾಸದಲ್ಲಿ 2 ಗಣಪನ ಮೂರ್ತಿಯನ್ನು ಪ್ರತಿಷ್ಠಾಪಿಸಿ ಹಬ್ಬ ಆಚರಿಸಿದ್ದಾರೆ. ಶ್ವೇತ ವರ್ಣದ ಗುಲಾಬಿಗಳ ಮಧ್ಯೆ ಕಂಗೊಳಿಸುತ್ತಿರುವ ಜೋಡಿಗಣಪನ ಮೂರ್ತಿಗಳು ಹಬ್ಬದ ಮೆರಗನ್ನ ಹೆಚ್ಚಿಸಿತ್ತು
![Bollwood celebrities celebrated Ganesha chathurthi](https://etvbharatimages.akamaized.net/etvbharat/prod-images/4316565_gdfgdfgf.jpg)