ETV Bharat / bharat

ಕಟ್ಟಡಗಳ ಕಿರಿದಾದ ಅಂತರದಲ್ಲಿ ಶವ! ನಾಪತ್ತೆಯಾಗಿದ್ದ ಯುವತಿ ಪತ್ತೆಯಾದ ರೀತಿ ಮಾತ್ರ ನಿಗೂಢ - undefined

ನೊಯ್ಡಾದ ಆಮ್ರಪಾಲಿ ಸಿಲಿಕಾನ್ ಸೊಸೈಟಿಯ ಎರಡು ಬೃಹತ್​ ಕಟ್ಟಡಗಳ ನಡುವಿನ 1.5 ಪಾದದಳತೆ ಅಂತರದಲ್ಲಿ ಯುವತಿ ಶವ ಪತ್ತೆಯಾಗಿದೆ. 120 ಅಡಿ ಎತ್ತರದಲ್ಲಿ, ಅಷ್ಟು ಚಿಕ್ಕ ಅಂತರದಲ್ಲಿ ಸಿಲುಕಿದ್ದ ಮೃತದೇಹವನ್ನು ಹೊರತೆಗೆಯಲು ಪೊಲೀಸರು ಹಾಗೂ ಎನ್​ಡಿಆರ್​ಎಫ್ ಹರಸಾಹಸ ಪಡಬೇಕಾಯ್ತು.

ನೊಯ್ಡಾ
author img

By

Published : Jul 3, 2019, 2:04 PM IST

ನೊಯ್ಡಾ(ಯುಪಿ): ಹಲವು ದಿನಗಳಿಂದ ನಾಪತ್ತೆಯಾಗಿದ್ದ ಯುವತಿಯೊಬ್ಬಳು 2 ಬೃಹತ್​ ಕಟ್ಟಡಗಳ ನಡುವಿನ ಸಣ್ಣ ಅಂತರದಲ್ಲಿ ಸಿಲುಕಿ, ಶವವಾಗಿ ಪತ್ತೆಯಾಗಿರುವ ಘಟನೆ ಉತ್ತರಪ್ರದೇಶದ ನೊಯ್ಡಾದಲ್ಲಿ ನಡೆದಿದೆ.

ನೊಯ್ಡಾದ ಆಮ್ರಪಾಲಿ ಸಿಲಿಕಾನ್ ಸೊಸೈಟಿಯ ಎರಡು ಬೃಹತ್​ ಕಟ್ಟಡಗಳ ನಡುವಿನ 1.5 ಪಾದದಳತೆ ಅಂತರದಲ್ಲಿ ಯುವತಿ ಶವ ಪತ್ತೆಯಾಗಿದೆ. 120 ಅಡಿ ಎತ್ತರದಲ್ಲಿ, ಅಷ್ಟು ಚಿಕ್ಕ ಅಂತರದಲ್ಲಿ ಸಿಲುಕಿದ್ದ ಮೃತದೇಹವನ್ನು ಹೊರತೆಗೆಯಲು ಪೊಲೀಸರು ಹಾಗೂ ಎನ್​ಡಿಆರ್​ಎಫ್ ಹರಸಾಹಸ ಪಡಬೇಕಾಯ್ತು.

ನೊಯ್ಡಾ ಕಟ್ಟಡಗಳ ಅಂತರದಲ್ಲಿ ಶವ

ಮೃತ ಯುವತಿ ಬಿಹಾರದ ಕತಿಹಾರ್​ ಮೂಲದದವಳು. ಇದೇ ಕಟ್ಟಡದ ಮನೆಯೊಂದರಲ್ಲಿ ಕೆಲಸ ಮಾಡುತ್ತಿದ್ದಳು. ಜೂನ್ 28ರಂದು ಈಕೆ ಇದ್ದಕ್ಕಿದ್ದಂತೆ ನಾಪತ್ತೆಯಾಗಿದ್ದಳು. ಬೇರೆಡೆ ಹೋಗಿದ್ದ ಮನೆಯ ಮಾಲೀಕ ಹಾಗೂ ಆತನ ಪತ್ನಿ ಇಂದು ಬೆಳಗ್ಗೆ ಮನೆಗೆ ಬಂದಿದ್ದರು. ದುರ್ವಾಸನೆ ಬರುತ್ತಿದ್ದ ಕಾರಣ ಸ್ಥಳೀಯರು ಕಟ್ಟಡಗಳ ನಡುವೆ ಗಮನಿಸಿದಾಗ ಯಾರೋ ಸಿಲುಕಿರುವುದು ಪತ್ತೆಯಾಗಿದೆ. ಪೊಲೀಸರಿಗೆ ಮಾಹಿತಿ ನೀಡಿ, ಶವ ಕೆಳಗಿಳಿಸಿದಾಗ ಮಾಲೀಕರು, ಯುವತಿಯ ಗುರುತು ಪತ್ತೆ ಮಾಡಿದ್ದಾರೆ.

ಇಕ್ಕಟ್ಟಾದ ಜಾಗದಲ್ಲಿ ಸಿಲುಕಿದ್ದರಿಂದ ಮೃತ ಯುವತಿಯ ದೇಹ ವಿರೂಪಗೊಂಡಿತ್ತು.

35 ಜನರ ಎನ್​ಡಿಆರ್​ಎಫ್ ತಂಡ ಶವವನ್ನು ಕೆಳಗಿಳಿಸುವ ಕಾರ್ಯಾಚರಣೆಯಲ್ಲಿ ತೊಡಗಿತ್ತು. ಕೆಲ ಸಿಬ್ಬಂದಿ ಮೃತದೇಹ ಸಿಲುಕಿರುವ ಜಾಗಕ್ಕಿಳಿದು, ಯಂತ್ರದ ಮೂಲಕ ಸ್ವಲ್ಪ ಗೋಡೆ ಒಡೆದು, ಶವ ಕೆಳಗಿಳಿಸಿದರು.

ಇದು ಕೊಲೆ ಎಂದು ಹೇಳಲಾಗುತ್ತಿದ್ದು, ಸ್ಥಳೀಯ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Intro:Body:

Body 

Conclusion:

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.