ನವದೆಹಲಿ: ಭಾರತೀಯ ಜನತಾ ಪಕ್ಷ (ಬಿಜೆಪಿ) ಮತ್ತು ತೃಣಮೂಲ ಕಾಂಗ್ರೆಸ್ (ಟಿಎಂಸಿ) ನಡುವಿನ ಕಿತ್ತಾಟ ಮುಂದುವರೆದಿದ್ದು, ಬುಧವಾರ ನವದೆಹಲಿಯಲ್ಲಿ ನಡೆದ ಸಂಸದೀಯ ಸ್ಥಾಯಿ ಸಮಿತಿ ಸಭೆಯಲ್ಲಿ ತೀವ್ರ ಚರ್ಚೆ ನಡೆದಿದೆ.
ಸೈಬರ್ ಅಪರಾಧಗಳಿಗೆ ಸಂಬಂಧಿಸಿದ ವಿಷಯಗಳು, ರಾಜ್ಯದಲ್ಲಿನ ಹಿಂಸಾಚಾರದ ಕುರಿತು ಅಭಿಪ್ರಾಯಗಳನ್ನು ತಿಳಿಸಲು ಗೃಹ ಸಚಿವಾಲಯ ಸಭೆ ಕರೆದಿತ್ತು. ಕಾಂಗ್ರೆಸ್ ಸಂಸದ ಆನಂದ್ ಶರ್ಮಾ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ, ಪಶ್ಚಿಮ ಬಂಗಾಳದಲ್ಲಿ ರಾಜಕೀಯ ಹಿಂಸಾಚಾರಕ್ಕೆ ಒತ್ತು ನೀಡುತ್ತಿದೆ ಎಂದು ಎರಡೂ ಪಕ್ಷಗಳ ಸಂಸದರು ಪರಸ್ಪರ ಆರೋಪಿಸಿಕೊಂಡು ಆಕ್ಷೇಪ ವ್ಯಕ್ತಪಡಿಸಿದರು.
ಸಭೆಯಲ್ಲಿ ಪಶ್ಚಿಮ ಬಂಗಾಳದ ಡಿಜಿಪಿ ವೀರೇಂದ್ರ ಮತ್ತು ಮುಖ್ಯ ಕಾರ್ಯದರ್ಶಿ ಅಲಪನ್ ಬಂದೋಪಾಧ್ಯಾಯ್ ಉಪಸ್ಥಿತರಿದ್ದರು.
ಸಮಿತಿಯ ಮುಂದೆ ರಾಜ್ಯ ಸರ್ಕಾರದ ಪ್ರತಿನಿಧಿಗಳು, ಮಹಿಳೆಯರ ಮೇಲಿನ ಅಪರಾಧ ಪ್ರಕರಣಗಳು ತೀವ್ರ ಕುಸಿತ ಕಂಡಿದೆ ಎಂದು ಹೇಳಿದರು. ಮಹಿಳೆಯರು ಮತ್ತು ಮಕ್ಕಳ ಅಭಿವೃದ್ಧಿಗಾಗಿ ರಾಜ್ಯ ಸರ್ಕಾರದ 'ಕನ್ಯಾಶ್ರೀ' ಯ ಉಪಕ್ರಮಗಳನ್ನು ಶ್ಲಾಘಿಸಿದರು.
ಈ ಸುದ್ದಿಯನ್ನೂ ಓದಿ: ಲಾರ್ಡ್ ರಾಮ್ ದೇವಸ್ಥಾನ ಘರ್ಷಣೆ: ರಾತ್ರೋರಾತ್ರಿ ಟಿಡಿಪಿ ನಾಯಕನ ಬಂಧನ!
ಟಿಎಂಸಿ ಸಂಸದರಾದ ಕಾಕೋಲಿ ಘೋಷ್ ದಸ್ತಿದಾರ್ ಅವರು, ಬಿಜೆಪಿಗೆ ಪಕ್ಷವನ್ನು ಹೆಸರಿಸದೇ ಪಕ್ಷವೊಂದರ ಯುವ ವಿಭಾಗವು ರಾಜ್ಯದ ಹುಡುಗಿಯರು ಮತ್ತು ಮಹಿಳೆಯರನ್ನು ವಿಶೇಷವಾಗಿ ಟಿಎಂಸಿ ಕಾರ್ಮಿಕರನ್ನು ಗುರಿಯಾಗಿಸಿಕೊಂಡಿದೆ ಎಂದು ಆರೋಪಿಸಿದ್ದಾರೆ ಎನ್ನುವ ವಿಚಾರ ಮೂಲಗಳಿಂದ ತಿಳಿದು ಬಂದಿದೆ.
ಕೆಲ ಬಿಜೆಪಿ ಸಂಸದರು, ರಾಜ್ಯದಲ್ಲಿ ನಡೆಯುತ್ತಿರುವ ಹಿಂಸಾಚಾರ ಕುರಿತು ಮಾತನಾಡಿ, ಟಿಎಂಸಿಯನ್ನು ಟೀಕಿಸಿದರು. ತಮ್ಮ ಪಕ್ಷದ ಅನೇಕ ನಾಯಕರನ್ನು ರಾಜ್ಯ ಸರ್ಕಾರದ ಗೂಂಡಾಗಳು ಹತ್ಯೆ ಮಾಡಿದ್ದಾರೆ ಎಂದು ಬಿಜೆಪಿ ನಾಯಕರು ಆರೋಪಿಸಿದರು.
ತೀವ್ರ ವಾದಗಳು ಮುಂದುವರೆದಂತೆ, ಅಧ್ಯಕ್ಷ ಆನಂದ್ ಶರ್ಮಾ ಮಧ್ಯಪ್ರವೇಶಿಸಿ ಸಭೆಯ ಕಾರ್ಯಸೂಚಿಗೆ ಅನುಗುಣವಾಗಿ ನಡೆದುಕೊಳ್ಳುವಂತೆ ಸದಸ್ಯರನ್ನು ಕೇಳಿಕೊಂಂಡರು.