ಹೈದರಾಬಾದ್(ತೆಲಂಗಾಣ): ಬಿಜೆಪಿ ಸಂಸದ ಧರ್ಮಪುರಿ ಅರವಿಂದ್ ಎಐಎಂಐಎಂ ಮುಖಂಡರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಮತ್ತು ಅವರ ಸಹೋದರ ಅಕ್ಬರುದ್ದೀನ್ ಓವೈಸಿಗೆ ಪ್ರಚಾರದ ಭರಾಟೆಯಲ್ಲಿ ಬೆದರಿಕೆ ಹಾಕಿದ್ದಾರೆ.
ಇದನ್ನೂ ಓದಿ: ಹೈದರಾಬಾದ್ ಪಾಕಿಸ್ತಾನದಲ್ಲಿದೆಯೇ?: ಬಿಜೆಪಿಗೆ ಸಚಿವ ಕೆ.ಟಿ.ರಾಮ ರಾವ್ ತಿರುಗೇಟು
ತೆಲಂಗಾಣದಲ್ಲಿ ಒಮ್ಮೆ ಬಿಜೆಪಿ ಪಕ್ಷ ಅಧಿಕಾರಕ್ಕೆ ಬಂದರೆ ಸಾಕು, ಸಂಸದ ಅಸಾದುದ್ದೀನ್ ಓವೈಸಿ ಮತ್ತು ಸಹೋದರ ಅಕ್ಬರುದ್ದೀನ್ ಓವೈಸಿ ರಾಜಕೀಯದಿಂದ ಸರ್ವನಾಶಗೊಳ್ಳಬೇಕಾಗುತ್ತದೆ. ಆದರೂ ಅಚ್ಚರಿ ಇಲ್ಲ. ಪಕ್ಷ ಅಧಿಕಾರಕ್ಕೆ ಬಂದರೆ ಭಾರಿ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ವಾರ್ನಿಂಗ್ ಕೊಟ್ಟಿದ್ದಾರೆ.
ಬಿಜೆಪಿ ಪಕ್ಷದ ಪರ ಪ್ರಚಾರ ನಡೆಸುತ್ತಿದ್ದಾಗ ಒವೈಸಿ ಸಹೋದರರ ವಿರುದ್ಧ ವಾಗ್ದಾಳಿ ನಡೆಸಿದ ಸಂಸದ ಅರವಿಂದ್, ತೆಲಂಗಾಣದಲ್ಲಿ ಒಮ್ಮೆ ಕಮಲ ಅರಳಿದರೆ ಸಾಕು ನಾನು ನಿಮ್ಮನ್ನು (ಅಸಾದುದ್ದೀನ್ ಓವೈಸಿ) ಹಾಗೂ ನಿಮ್ಮ ಸಹೋದರ (ಅಕ್ಬರುದ್ದೀನ್ ಓವೈಸಿ) ನನ್ನು ಇಡೀ ಜೀವನಪೂರ್ತಿ ನನ್ನ ಕಾಲು ಕೆಳಗೆ ಇಟ್ಟುಕೊಳ್ಳುವುದಾಗಿ ಹೇಳಿದ್ದಾರೆ. GHMC ಚುನಾವಣಾ ಕಾವು ಬಿರುಸುಗೊಂಡಿದ್ದು ಪ್ರಚಾರದ ವೇಳೆ ಒವೈಸಿ ಸಹೋದರರು ತಮ್ಮ ಹೇಳಿಕೆ ನೀಡಿದ್ದರು. ಅವರ ಹೇಳಿಕೆಗಳಿಗೆ ಸಂಸದ ಅರವಿಂದ್ ಈ ರೀತಿ ವಿವಾದಾತ್ಮಕ ಪ್ರತಿಕ್ರಿಯೆ ನೀಡಿದ್ದಾರೆ.
GHMC ಚುನಾವಣೆಯು ಡಿಸೆಂಬರ್ 1 ರಂದು ನಡೆಯಲಿದ್ದು, ಡಿಸೆಂಬರ್ 4 ರಂದು ಫಲಿತಾಂಶ ಪ್ರಕಟವಾಗಲಿದೆ.
ಇದನ್ನೂ ಓದಿ: ದಕ್ಷಿಣ ಭಾರತವನ್ನೂ ಕೇಸರಿಮಯ ಮಾಡುತ್ತೇವೆ: ತೇಜಸ್ವಿ ಸೂರ್ಯ
ನಗರದಲ್ಲಿ ಕೇಂದ್ರ ಸಚಿವೆ ಸ್ಮೃತಿ ಇರಾನಿ ಮತ್ತು ಭಾರತೀಯ ಜನತಾ ಯುವ ಮೋರ್ಚಾ ಮುಖ್ಯಸ್ಥ ತೇಜಸ್ವಿ ಸೂರ್ಯ ಸೇರಿದಂತೆ ಹಲವು ಬಿಜೆಪಿ ನಾಯಕರು, ಅಕ್ರಮ ವಲಸಿಗರಿಗೆ ರಾಜ್ಯದ ಮತದಾರರಲ್ಲಿ ಸ್ಥಾನ ನೀಡಲು ಎಐಎಂಐಎಂ ಮತ್ತು ಟಿಆರ್ಎಸ್ ಒಟ್ಟಾಗಿ ಕೆಲಸ ಮಾಡುತ್ತಿವೆ ಎಂದು ಆರೋಪಿಸಿದ್ದಾರೆ. ಬಿಜೆಪಿ ಆರೋಪ ತಿರಸ್ಕರಿಸಿದ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಚುನಾವಣಾ ಪಟ್ಟಿಯಲ್ಲಿ 1,000 ರೋಹಿಂಗ್ಯಾಗಳ ಹೆಸರನ್ನು ತೋರಿಸುವಂತೆ ಬಿಜೆಪಿಗೆ ಸವಾಲು ಹಾಕಿದ್ದಾರೆ.