ನವದೆಹಲಿ: ಭೋಪಾಲ್ ಸಂಸದೆ ಸಾಧ್ವಿ ಪ್ರಜ್ಞಾ ಸಿಂಗ್ ಠಾಕೂರ್ ಅವರು ಸ್ಪೈಸ್ ಜೆಟ್ ವಿರುದ್ಧ ದೂರು ನೀಡಿದ್ದಾರೆ.
ದೆಹಲಿ-ಭೋಪಾಲ್ ವಿಮಾನದ ಸೀಟ್ ಬುಕ್ ಮಾಡಿದ್ದ ತನಗೆ ಸೀಟ್ನ್ನು ನೀಡಲಿಲ್ಲವೆಂದು ಆರೋಪಿಸಿ ದೂರು ನೀಡಿದ್ದಾರೆ. ವಿಮಾನ ಎಸ್‌ಜಿ 2489 ಮೂಲಕ ಆಗಮಿಸಿದ್ದ ಪ್ರಜ್ಞಾ ಠಾಕೂರ್, ಇಲ್ಲಿರುವ ರಾಜ ಭೋಜ್ ವಿಮಾನ ನಿಲ್ದಾಣದ ನಿರ್ದೇಶಕರಿಗೆ ಈ ಬಗ್ಗೆ ದುರು ಸಲ್ಲಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅವರು, ಪ್ರಯಾಣಿಕರೊಂದಿಗೆ ವಿಮಾನ ಸಿಬ್ಬಂದಿ ಸರಿಯಾಗಿ ವರ್ತಿಸುವುದಿಲ್ಲ. ನಾನು ಕಾಯ್ದಿರಿಸಿದ್ದ ಸೀಟ್ನ್ನು ನನಗೆ ನೀಡಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ವಿಮಾನ ನಿಲ್ದಾಣ ನಿರ್ದೇಶಕ ಅನಿಲ್ ವಿಕ್ರಮ್ ಮಾತನಾಡಿದ್ದು, ದೂರು ಸ್ವೀಕಾರ ಮಾಡಲಾಗಿದೆ. ದೂರಿನ ಆಧಾರದ ಮೇಲೆ ಪರಿಶೀಲನೆ ನಡೆಸಲಾಗುವುದು ಎಂದಿದ್ದಾರೆ.