ETV Bharat / bharat

ಬಿಹಾರ, ಎಂಪಿಯಲ್ಲಿ ಸೋತ ಕಾಂಗ್ರೆಸ್​ಗೆ ಮತ್ತೆ ಇವಿಎಂಗಳ ಮೇಲೆ ಗುಮಾನಿ - ಬಿಜೆಪಿ ವಿರುದ್ಧ ಕಾಂಗ್ರೆಸ್ ಮುಖಂಡ ಸಜ್ಜನ್ ಸಿಂಗ್ ವರ್ಮಾ

ಮಧ್ಯಪ್ರದೇಶದ ಉಪಚುನಾವಣೆಯ ಫಲಿತಾಂಶಗಳನ್ನು ತಿರುಚಲು ಮತ್ತು ರಾಜ್ಯದಲ್ಲಿ ಅಧಿಕಾರದಲ್ಲಿ ಮುಂದುವರಿಯಲು ಬಿಜೆಪಿಯು ಇವಿಎಂ ಅನ್ನೋ ಜಾದೂಗಾರನನ್ನು ಬಳಸಿಕೊಂಡಿದೆ ಎಂದು ಕಾಂಗ್ರೆಸ್​ ಮುಖಂಡ ಸಜ್ಜನ್ ಸಿಂಗ್ ವರ್ಮ ಆರೋಪಿಸಿದ್ದಾರೆ. ಅಲ್ಲದೇ ಬ್ಯಾಲೆಟ್​ ಪೇಪರ್​ಗಳ ಮೂಲಕ ಮಾತ್ರವೇ ಚುನಾವಣೆ ನಡೆಸಬೇಕೆಂದು ಒತ್ತಾಯಿಸಿದ್ದಾರೆ.

MP Congress leader
ಕಾಂಗ್ರೆಸ್ ಮುಖಂಡ ಆರೋಪ
author img

By

Published : Nov 15, 2020, 12:25 PM IST

ಇಂದೋರ್​: ಮಧ್ಯಪ್ರದೇಶದ ಉಪಚುನಾವಣೆಯ ಫಲಿತಾಂಶಗಳನ್ನು ಬದಲಿಸಲು ಮತ್ತು ರಾಜ್ಯದಲ್ಲಿ ಅಧಿಕಾರದಲ್ಲಿರಲು ಭಾರತೀಯ ಜನತಾ ಪಕ್ಷವು "ಇವಿಎಂ ಎಂಬ ಜಾದೂಗಾರರನ್ನು" ಆಶ್ರಯಿಸಿದೆ ಎಂದು ಕಾಂಗ್ರೆಸ್ ಮುಖಂಡ ಸಜ್ಜನ್ ಸಿಂಗ್ ವರ್ಮ ಶನಿವಾರ ಆರೋಪಿಸಿದ್ದಾರೆ.

ಇವಿಎಂ ಮೇಲೆ ಕಾಂಗ್ರೆಸ್ ಮುಖಂಡನಿಗೆ ಸಂಶಯ

ನಾನು ನಕಾರಾತ್ಮಕ​​ ರಾಜಕೀಯ ಮಾಡುವುದಿಲ್ಲ. ಆದರೆ ಮೊದಲ ಬಾರಿಗೆ ಬಿಹಾರ ಮತ್ತು ಮಧ್ಯಪ್ರದೇಶದಲ್ಲಿ ಬಿಜೆಪಿ ಇವಿಎಂಗಳನ್ನು ತಮ್ಮ ಪರವಾಗಿ ದುರುಪಯೋಗಪಡಿಸಿಕೊಳ್ಳುತ್ತಿದೆ ಎಂದು ನನಗೆ ಅನಿಸುತ್ತಿದೆ. ಜನರು ಮಧ್ಯಪ್ರದೇಶದ ಕಾಂಗ್ರೆಸ್ ಮತ್ತು ಬಿಹಾರದಲ್ಲಿ ತೇಜಸ್ವಿ ಯಾದವ್ ಪರವಾಗಿಯೇ ಇದ್ದಾರೆ ಎಂದ್ರು.

ಇದೇ ವೇಳೆ ಕೇವಲ ಬ್ಯಾಲೆಟ್​​ ಪೇಪರ್​ ಮೂಲಕವೇ ಚುನಾವಣೆ ನಡೆಸುವಂತೆ ಆಗ್ರಹಿಸಿದ್ರು. ಅಭಿವೃದ್ಧಿ ಹೊಂದಿದ ರಾಷ್ಟ್ರಗಳಾದ ಅಮೆರಿಕ, ಜರ್ಮನಿ ಮತ್ತು ಫ್ರಾನ್ಸ್ ದೇಶಗಳು ಇವಿಎಂ ಬಳಕೆಯನ್ನು ನಿಲ್ಲಿಸಿವೆ. ಆದರೆ ನಾವೇಕೆ ಅದರ ಬಳಕೆ ನಿಲ್ಲಿಸುತ್ತಿಲ್ಲ? ಎಂದು ಪ್ರಶ್ನಿಸಿದ್ದಾರೆ. ರಾಜಕೀಯ ಪಕ್ಷಗಳು ಮತ್ತು ರಾಜಕೀಯ ಮುಖಂಡರು ಇದನ್ನೇ ಹೇಳುತ್ತಿದ್ದಾರೆ. ಬ್ಯಾಲೆಟ್ ಪೇಪರ್ ಚುನಾವಣೆಗಳು ಮತ್ತೆ ಬಂದ ದಿನ, ಬಿಜೆಪಿಗೆ ಅದರ ಸ್ಥಾನ ತಿಳಿಯುತ್ತದೆ ಎಂದು ವರ್ಮ ಹೇಳಿದ್ದಾರೆ. ನಾವು ಗಾಂಧಿ ಪಕ್ಷವಾದ್ದರಿಂದ ಜನರನ್ನು ಮೋಸಗೊಳಿಸುವ ಮೂಲಕ ಅಥವಾ ಬಲವನ್ನು ಬಳಸಿ ಅಧಿಕಾರಕ್ಕೆ ಬರಲು ಬಯಸುವುದಿಲ್ಲ" ಎಂದು ಅವರು ಹೇಳಿದರು.

ಆರ್‌ಜೆಡಿ ಮುಖಂಡ ತೇಜಸ್ವಿ ಯಾದವ್ ಅವರ ಱಲಿಗಳಲ್ಲಿ ನಡೆದ ಬೃಹತ್ ಸಮಾರಂಭಗಳು, ಚುನಾವಣೆಗಳು 'ಮಹಾಘಟ್​​ಬಂಧನ' ಪರವಾಗಿ ಏಕಪಕ್ಷೀಯವಾಗಿದ್ದವು ಎಂಬುದಕ್ಕೆ ಸಾಕ್ಷಿಯಾಗಿದೆ. ಜನರು ಕಾಂಗ್ರೆಸ್ ಪಕ್ಷವನ್ನು ಸಂಪೂರ್ಣವಾಗಿ ಬೆಂಬಲಿಸುತ್ತಿದ್ದರು. ಇವಿಎಂಗಳೊಂದಿಗೆ ಮಧ್ಯಪ್ರವೇಶಿಸುವ ಮೂಲಕ ಬಿಜೆಪಿ ಚುನಾವಣೆಯಲ್ಲಿ ಜಯಗಳಿಸಿತು" ಎಂದು ವರ್ಮ ಆರೋಪ ಮಾಡಿದ್ರು.

ಪಶ್ಚಿಮ ಬಂಗಾಳದಲ್ಲಿ ಅಧಿಕಾರಕ್ಕೆ ಬರುವ ಬಗ್ಗೆ ಬಿಜೆಪಿ ಮುಖಂಡ ಕೈಲಾಶ್ ವಿಜಯವರ್ಗಿಯವರ ಹೇಳಿಕೆಯ ಕುರಿತು ಪ್ರತಿಕ್ರಿಯಿಸಿದ ವರ್ಮ, "ಅವರು ವಿಜಯವರ್ಗಿಯಾ ಜಾದೂಗಾರರಾದ್ರೆ ಮಮತಾ ಬ್ಯಾನರ್ಜಿ ದೊಡ್ಡ ಜಾದೂಗಾರರು. ಹೀಗಾಗಿ ಮಮತಾ ಮತ್ತೆ ರಾಜ್ಯದಲ್ಲಿ ಸರ್ಕಾರ ರಚಿಸಲಿದ್ದಾರೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.