ETV Bharat / bharat

ಹರಿಯಾಣದಲ್ಲಿ ಖಟ್ಟರ್​ 2.0 ಸರ್ಕಾರ... ದುಷ್ಯಂತ್​ ಚೌಟಾಲ​ಗೆ ಒಲಿದ ಡಿಸಿಎಂ ಸ್ಥಾನ!

author img

By

Published : Oct 25, 2019, 10:15 PM IST

Updated : Oct 25, 2019, 11:23 PM IST

ಈಗಾಗಲೇ ಹರಿಯಾಣದಲ್ಲಿ ಆಡಳಿತ ನಡೆಸುತ್ತಿದ್ದ ಭಾರತೀಯ ಜನತಾ ಪಾರ್ಟಿಗೆ ತಮ್ಮ ಬೆಂಬಲ ಘೋಷಣೆ ಮಾಡಿರುವ ಜೆಜೆಪಿ ಪಕ್ಷದ ಮುಖ್ಯಸ್ಥ ದುಷ್ಯಂತ್​ ಚೌಟಾಲಗೆ ಡಿಸಿಎಂ ಸ್ಥಾನ ನೀಡುವುದಾಗಿ ಬಿಜೆಪಿ ಘೋಷಣೆ ಮಾಡಿದೆ.

ದುಷ್ಯಂತ್​,ಮನೋಹರ್​ಲಾಲ್​ ಖಟ್ಟರ್​​

ನವದೆಹಲಿ: ಹರಿಯಾಣದಲ್ಲಿ ಕೊನೆಗೂ ಮನೋಹರ್​ ಲಾಲ್​ ಖಟ್ಟರ್​ ನೇತೃತ್ವದಲ್ಲಿ ಬಿಜೆಪಿ ಸರ್ಕಾರ ಎರಡನೇ ಅವಧಿಗೆ ಅಧಿಕಾರದ ಚುಕ್ಕಾಣಿ ಹಿಡಿಯಲು ಸಜ್ಜಾಗಿದ್ದು, ಜನನಾಯಕ್​ ಜನತಾಪಾರ್ಟಿ ಕಮಲಕ್ಕೆ ಜೈ ಎಂದಿದೆ.

90 ವಿಧಾನಸಭಾ ಕ್ಷೇತ್ರಗಳ ಪೈಕಿ ಆಡಳಿತ ಪಕ್ಷ 40 ಕ್ಷೇತ್ರಗಳಲ್ಲಿ ಗೆಲುವು ದಾಖಲು ಮಾಡಿದರೆ, ಕಾಂಗ್ರೆಸ್​ 31 ಕ್ಷೇತ್ರ, ದುಷ್ಯಂತ್​ ಚೌಟಾಲ ನೇತೃತ್ವದ ಜೆಜೆಪಿ ಪಕ್ಷ 10 ಸ್ಥಾನಗಳಲ್ಲಿ ಗೆಲುವು ದಾಖಲು ಮಾಡಿತ್ತು. ಮಧ್ಯಾಹ್ನ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ್ದ ಚೌಟಾಲ, ತಮ್ಮ ಅಜೆಂಡಾ ಬೆಂಬಲಿಸುವವರಿಗೆ ಸಪೋರ್ಟ್​ ನೀಡುವುದಾಗಿ ಘೋಷಣೆ ಮಾಡಿದ್ದರು.

ಅಮಿತ್​ ಶಾ ಸುದ್ದಿಗೋಷ್ಠಿ

ಇದೀಗ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಬಿಜೆಪಿ ಜತೆ ಕೈ ಸೇರಿಸಲು ಮುಂದಾಗಿದ್ದಾಗಿ ಹೇಳಿಕೆ ನೀಡಿದ್ದರಿಂದ ಹರಿಯಾಣದಲ್ಲಿ ಬಿಜೆಪಿ-ಜೆಜೆಪಿ ನೇತೃತ್ವದ ಮೈತ್ರಿ ಸರ್ಕಾರ ಅಧಿಕಾರಕ್ಕೆ ಬರಲಿದೆ. ಇದೇ ವೇಳೆ ಮಾತನಾಡಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್​ ಶಾ ಮುಂದಿನ ವರ್ಷ ಹರಿಯಾಣದಲ್ಲಿ ಬಿಜೆಪಿ-ಜೆಜೆಪಿ ಮೈತ್ರಿಯಾಗಿ ಸರ್ಕಾರ ನಡೆಸಲಿದ್ದು, ಹರಿಯಾಣ ಜನರ ಅಭಿವೃದ್ಧಿಗಾಗಿ ಕೆಲಸ ಮಾಡಲಿವೆ ಎಂದರು.

BJP-JJP alliance in Haryana
ಅಮಿತ್​ ಶಾ ಜತೆ ದುಷ್ಯಂತ್​,ಖಟ್ಟರ್​, ನಡ್ಡಾ

ಇನ್ನು ಬಿಜೆಪಿ ಪಕ್ಷದ ಅಭ್ಯರ್ಥಿ ಸಿಎಂ ಆಗಿ, ಜೆಜೆಪಿ ಪಕ್ಷದ ಅಭ್ಯರ್ಥಿ ಉಪಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕಾರ ಮಾಡಲಿದ್ದಾರೆ. ನಾಳೆ ಚಂಡೀಗಢನಲ್ಲಿ ಅಲ್ಲಿನ ರಾಜ್ಯಪಾಲರನ್ನು ಭೇಟಿ ಮಾಡಲಿರುವ ಮನೋಹರ್​ಲಾಲ್​ ಖಟ್ಟರ್​ ಸರ್ಕಾರ ರಚನೆ ಮಾಡಲು ಮನವಿ ಸಲ್ಲಿಕೆ ಮಾಡಲಿದ್ದಾರೆ.

ಇದೇ ವೇಳೆ ಮಾತನಾಡಿರುವ ದುಷ್ಯಂತ್ ಚೌಟಾಲ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್​​ ಶಾ, ಕಾರ್ಯಾಧ್ಯಕ್ಷ ಜೆಪಿ ನಡ್ಡಾ ಅವರಿಗೆ ಧನ್ಯವಾದ ತಿಳಿಸಿದ್ದು, ಹರಿಯಾಣದ ಅಭಿವೃದ್ಧಿಗಾಗಿ ತಾವು ಬಿಜೆಪಿಗೆ ಬೆಂಬಲ​ ನೀಡಿದ್ದು, ಎರಡು ಪಕ್ಷ ಸೇರಿ ರಾಜ್ಯದ ಅಭಿವೃದ್ದಿಗಾಗಿ ದುಡಿಯುವುದಾಗಿ ತಿಳಿಸಿದ್ದಾರೆ.

Intro:Body:

ಹರಿಯಾಣಲ್ಲಿ ಖಟ್ಟರ್​ 2.0 ಸರ್ಕಾರ... ದುಷ್ಯಂತ್​ ಚೌಟಾಲ​ಗೆ ಒಲಿದ ಡಿಸಿಎಂ ಸ್ಥಾನ! 

ನವದೆಹಲಿ: ಹರಿಯಾಣದಲ್ಲಿ ಕೊನೆಗೂ ಮನೋಹರ್​ ಲಾಲ್​ ಖಟ್ಟರ್​ ನೇತೃತ್ವದಲ್ಲಿ ಬಿಜೆಪಿ ಸರ್ಕಾರ ಎರಡನೇ ಅವಧಿಗೆ ಅಧಿಕಾರದ ಚುಕ್ಕಾಣಿ ಹಿಡಿಯಲು ಸಜ್ಜಾಗಿದ್ದು, ಜನನಾಯಕ್​ ಜನತಾಪಾರ್ಟಿ ಕಮಲಕ್ಕೆ ಜೈ ಎಂದಿದೆ. 

90 ವಿಧಾನಸಭಾ ಕ್ಷೇತ್ರಗಳ ಪೈಕಿ ಆಡಳಿತ ಪಕ್ಷ 40 ಕ್ಷೇತ್ರಗಳಲ್ಲಿ ಗೆಲುವು ದಾಖಲು ಮಾಡಿದರೆ, ಕಾಂಗ್ರೆಸ್​ 31 ಕ್ಷೇತ್ರ, ದುಷ್ಯಂತ್​ ಚೌಟಾಲ ನೇತೃತ್ವದ ಜೆಜೆಪಿ ಪಕ್ಷ 10 ಸ್ಥಾನಗಳಲ್ಲಿ ಗೆಲುವು ದಾಖಲು ಮಾಡಿತ್ತು.  ಮಧ್ಯಾಹ್ನ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ್ದ ಚೌಟಾಲ, ತಮ್ಮ ಅಜೆಂಡಾ ಬೆಂಬಲಿಸುವವರಿಗೆ ಸಪೋರ್ಟ್​ ನೀಡುವುದಾಗಿ ಘೋಷಣೆ ಮಾಡಿದ್ದರು. 

ಇದೀಗ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಬಿಜೆಪಿ ಜತೆ ಕೈ ಸೇರಿಸಲು ಮುಂದಾಗಿದ್ದಾಗಿ ಹೇಳಿಕೆ ನೀಡಿದ್ದರಿಂದ ಹರಿಯಾಣದಲ್ಲಿ ಬಿಜೆಪಿ-ಜೆಜೆಪಿ ನೇತೃತ್ವದ ಮೈತ್ರಿ ಸರ್ಕಾರ ಅಧಿಕಾರಕ್ಕೆ ಬರಲಿದೆ. 

ಇನ್ನು ಬಿಜೆಪಿ ಪಕ್ಷದ ಅಭ್ಯರ್ಥಿ ಸಿಎಂ ಆಗಿ, ಜೆಜೆಪಿ ಪಕ್ಷದ ಅಭ್ಯರ್ಥಿ ಉಪಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕಾರ ಮಾಡಲಿದ್ದಾರೆ. ನಾಳೆ ಚಂಡೀಗಢನಲ್ಲಿ ಅಲ್ಲಿನ ರಾಜ್ಯಪಾಲರನ್ನು ಭೇಟಿ ಮಾಡಲಿರುವ ಮನೋಹರ್​ಲಾಲ್​ ಖಟ್ಟರ್​ ಸರ್ಕಾರ ರಚನೆ ಮಾಡಲು ಮನವಿ ಸಲ್ಲಿಕೆ ಮಾಡಲಿದ್ದಾರೆ. 

Conclusion:
Last Updated : Oct 25, 2019, 11:23 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.