ನವದೆಹಲಿ: ಜಾಲತಾಣಿಗರ ಅಚ್ಚುಮೆಚ್ಚು ಅಂದ್ರೆ ಅದು ವಾಟ್ಸ್ಆ್ಯಪ್. ಆದರೆ, ಈಗ ವಾಟ್ಸ್ಆ್ಯಪ್ ಬಳಕೆದಾರರಿಗೆ ಶಾಕಿಂಗ್ ಸುದ್ದಿಯೊಂದು ಸಂಶೋಧನೆಯಿಂದ ಬಹಿರಂಗಗೊಂಡಿದೆ.
ಹೌದು ಸುಲಭವಾಗಿ ನಾವು ಬಳಸುತ್ತಿರುವ ವಾಟ್ಸ್ಆ್ಯಪ್ ಖಾತೆಯನ್ನು ಹ್ಯಾಕ್ ಮಾಡಬಹುದು ಹಾಗೂ ಮೇಸೆಜ್ಗಳನ್ನು ಬದಲಾಯಿಸಬಹುದು ಎಂಬ ಶಾಕಿಂಗ್ ವಿಚಾರ ಗೊತ್ತಾಗಿದೆ.
ವಾಟ್ಸ್ಆ್ಯಪ್ ಗ್ರೂಪ್ ಕಮ್ಯುನಿಕೇಷನ್ ಸಮಯದಲ್ಲಿ ಹ್ಯಾಕರ್ಗಳು ಭದ್ರತಾ ವೈಫಲ್ಯವನ್ನು ಬಳಸಿಕೊಂಡು, ಮೆಸೇಜ್ ಹಾಗೂ ವಾಯ್ಸ್ ಕರೆಗಳನ್ನು ಹ್ಯಾಕ್ ಮಾಡಬಹುದು ಎಂದು ಕಂಪನಿಯ ಸುರಕ್ಷತೆ ಹಾಗೂ ಸೈಬರ್ ಭದ್ರತೆ ಕುರಿತು ಸಂಶೋಧನೆ ನಡೆಸಿರುವ ಚೆಕ್ ಪಾಯಿಂಟ್ ರಿಸರ್ಚ್ ಸಂಸ್ಥೆ ಹೇಳಿದೆ. ಎಷ್ಟೇ ವಿಧದಲ್ಲಿ ಸೆಕ್ಯುರಿಟಿ ಇದ್ದರೂ, ಮೂರು ವಿಧಾನಗಳಲ್ಲಿ ಹ್ಯಾಕ್ ಚಾನ್ಸ್ ಇದೆ.
ಇನ್ನೂ ಗ್ರೂಪ್ ಕಮ್ಯುನಿಕೇಷನ್ನಲ್ಲಿರುವ ಕೋಟ್ ಟೆಕ್ಸ್ಟ್ ಬಳಸಿಕೊಂಡು ಬಳಕೆದಾರನ ಹೆಸರು ಮತ್ತು ಸಂದೇಶವನ್ನು ಬದಲಾಯಿಸಬಹುದು. ಕೋಟೆಡ್ ರಿಪ್ಲೈಯನ್ನು ಬಳಸಿಕೊಂಡು ಗ್ರೂಪ್ನಲ್ಲಿ ಸಂದೇಶಗಳನ್ನು ಬದಲಾಯಿಸಿಕೊಳ್ಳಬಹುದು. ಇನ್ನೂ ಖಾಸಗಿ ಸಂದೇಶವನ್ನು ಹ್ಯಾಕ್ ಮಾಡಿ, ಇನ್ನೊಂದು ಗ್ರೂಪ್ಗೆ ಕಳುಹಿಸಬಹುದು ಎಂದು ಚೆಕ್ ಪಾಯಿಂಟ್ ಸಂಶೋಧನೆಯಲ್ಲಿ ಶಾಂಕಿಗ್ ಸುದ್ದಿ ಕೊಟ್ಟಿದೆ.