ನವದೆಹಲಿ: ದಿನೇ ದಿನೆ ದೇಶದಲ್ಲಿ ಹಕ್ಕಿ ಜ್ವರ ಭೀತಿ ಹೆಚ್ಚಾಗುತ್ತಿದ್ದು, ಸಾವಿರಾರು ಪಕ್ಷಿಗಳು ಸಾಯುತ್ತಿವೆ. ಈ ಮಧ್ಯೆ ಜನವರಿ 22ರವರೆಗೆ 12 ರಾಜ್ಯಗಳಲ್ಲಿ ಹಕ್ಕಿ ಜ್ವರ ದೃಢಪಟ್ಟಿದೆ.
ಕೇರಳ, ಹರಿಯಾಣ, ಮಧ್ಯಪ್ರದೇಶ, ಛತ್ತಿಸ್ಘಡ, ಮಹಾರಾಷ್ಟ್ರ, ಉತ್ತರಾಖಂಡ್, ಗುಜರಾತ್, ಉತ್ತರ ಪ್ರದೇಶ ಮತ್ತು ಪಂಜಾಬ್, ದೆಹಲಿ ಸೇರಿ 12 ರಾಜ್ಯಗಳಲ್ಲಿ ಈ ವೈರಸ್ ಕಾಣಿಸಿಕೊಂಡಿದೆ ಎಂದು ಕೇಂದ್ರ ಪಶು ಸಂಗೋಪನಾ ಇಲಾಖೆ ಮಾಹಿತಿ ನೀಡಿದೆ.
ಈಗಾಗಲೇ ದೆಹಲಿ, ಉತ್ತರ ಪ್ರದೇಶದ ಕೆಲ ಭಾಗಗಳಲ್ಲಿ ಕೋಳಿ ಆಮದನ್ನು ಸಂಪೂರ್ಣವಾಗಿ ನಿಲ್ಲಿಸಲಾಗಿದೆ.
ಕೋವಿಡ್ಗಿಂತ ಮಾರಕ ಹಕ್ಕಿ ಜ್ವರ ಎಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ. ಕೋಳಿ, ಬಾತುಕೋಳಿಗಳು ಮತ್ತು ಹೆಬ್ಬಾತುಗಳು ಸೇರಿದಂತೆ ಅನೇಕ ಪಕ್ಷಿಗಳಲ್ಲಿ ಈ ಜ್ವರ ಕಂಡುಬರಲಿದ್ದು, ಮಾನವನಿಗೂ ಹರಡುವ ಸಾಧ್ಯತೆಯಿದೆ. ಒಂದು ವೇಳೆ ಮನುಷ್ಯರಲ್ಲೂ ಈ ರೋಗ ಕಂಡುಬಂದರೆ ಮರಣ ಪ್ರಮಾಣವು ಹೆಚ್ಚಾಗಿರುತ್ತದೆ ಎಂದು ತಿಳಿಸಿದೆ.