ಕೊಚ್ಚಿ(ಕೇರಳ): ಕೇರಳದಲ್ಲಿರುವ ಪವಿತ್ರ ಕ್ಷೇತ್ರ ಶಬರಿಮಲೆಗೆ ಪ್ರವೇಶಿಸಲು ಯತ್ನಿಸಿದ ಬಿಂದು ಅಮ್ಮಿನಿ ಎನ್ನುವ ಮಹಿಳೆ ಮೇಲೆ ಅಯ್ಯಪ್ಪ ಭಕ್ತನೋರ್ವ ಪೆಪ್ಪರ್ ಸ್ಪ್ರೇ(ಖಾರದ ಪುಡಿ) ಮಾಡಿದ್ದಾನೆ.
ಸಾಮಾಜಿಕ ಹೋರಾಟಗಾರ್ತಿ ತೃಪ್ತಿ ದೇಸಾಯಿ ಸೇರಿದಂತೆ ಆರು ಮಹಿಳೆಯರು ಅಯ್ಯಪ್ಪನ ದರ್ಶನಕ್ಕೆ ಮುಂದಾಗಿದ್ದರು. ಕೊಚ್ಚಿ ಪೊಲೀಸ್ ಕಮೀಷನರ್ ಕಚೇರಿ ಬಳಿ ಬಿಂದು ಮೇಲೆ ಪೆಪ್ಪರ್ ಸ್ಪ್ರೇ ದಾಳಿ ನಡೆದಿದೆ.
ಕೊಚ್ಚಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ತೃಪ್ತಿ ದೇಸಾಯಿ ತಂಡ ಭದ್ರತೆ ನೀಡುವಂತೆ ಮನವಿ ಮಾಡಲು ತೃಪ್ತಿ ದೇಸಾಯಿ ತಂಡ ನೇರವಾಗಿ ಕೊಚ್ಚಿ ಪೊಲೀಸ್ ಕಮೀಷನರ್ ಕಚೇರಿಗೆ ತೆರಳಿದ್ದರು. ಈ ವೇಳೆ ಬಿಂದು ಮತ್ತು ಅಯ್ಯಪ್ಪ ಭಕ್ತರೊಂದಿಗೆ ಮಾತಿನ ಚಕಮಕಿ ನಡೆದಿದೆ. ಈ ಮಾತಿನ ಚಕಮಕಿ ವಿಕೋಪಕ್ಕೆ ತಿರುಗಿ ಓರ್ವ ಪೆಪ್ಪರ್ ಸ್ಪ್ರೇ ದಾಳಿ ನಡೆಸಿದ್ದಾನೆ. ಬಿಂದುವನ್ನು ತಕ್ಷಣವೇ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.