ETV Bharat / bharat

ಮೈಕ್ರೋಸಾಫ್ಟ್​​ನ ನಿರ್ದೇಶಕ ಮಂಡಳಿಯಿಂದ ಹೊರ ಬಂದ ಬಿಲ್​ ಗೇಟ್ಸ್ - Bill Gates steps down

ಮೈಕ್ರೋಸಾಫ್ಟ್​​ನ ಸಹ ಸಂಸ್ಥಾಪಕ ಬಿಲ್​ ಗೇಟ್ಸ್​ ಅವರು ನಿರ್ದೇಶಕ ಮಂಡಳಿಯಿಂದ ಹೊರಬಂದಿದ್ದಾರೆ. 1975ರಲ್ಲಿ ಪೌಲ್​​ ಅಲೆನ್​​ ಅವರೊಂದಿಗೆ ಬಿಲ್​ಗೇಟ್ಸ್ ಮೈಕ್ರೋಸಾಫ್ಟ್​​​​​ ಕಂಪನಿಯನ್ನು ಪ್ರಾರಂಭಿಸಿದ್ರು.

Bill Gates
ಬಿಲ್​ ಗೇಟ್ಸ್
author img

By

Published : Mar 14, 2020, 5:35 AM IST

Updated : Mar 14, 2020, 7:20 AM IST

ನವದೆಹಲಿ: ಮೈಕ್ರೋಸಾಫ್ಟ್​​ನ ಸಹ ಸಂಸ್ಥಾಪಕ ಬಿಲ್​ ಗೇಟ್ಸ್​ ಅವರು ನಿರ್ದೇಶಕ ಮಂಡಳಿಯಿಂದ ಹೊರಬಂದಿದ್ದಾರೆ. ಸಾಮಾಜಿಕ ಕಾರ್ಯಗಳತ್ತ ಗಮನಹರಿಸುವ ಸಲುವಾಗಿ ಈ ನಿರ್ಧಾರವನ್ನು ಕೈಗೊಂಡಿದ್ದಾರೆ ಎಂದು ತಿಳಿದುಬಂದಿದೆ.

1975ರಲ್ಲಿ ಪೌಲ್​​ ಅಲೆನ್​​ ಅವರೊಂದಿಗೆ ಬಿಲ್​ಗೇಟ್ಸ್​​​ ಕಂಪನಿಯನ್ನು ಪ್ರಾರಂಭಿಸಿದ್ದರು. ಬಿಲ್​​​ ಗೇಟ್ಸ್ ಅವರು 2000ದವರೆಗೆ ಮೈಕ್ರೋಸಾಫ್ಟ್​​ ಕಂಪನಿಯ ಸಿಇಒ ಆಗಿ ಕಾರ್ಯ ನಿರ್ವಹಿಸಿದ್ದರು. ನಂತರ ಸಿಇಒ ಸ್ಥಾನದಿಂದ ಕೆಳಗಿಳಿದ ಬಳಿಕ ಅವರು ಕಂಪನಿಯಲ್ಲಿ ತಮ್ಮ ತೊಡಗಿಸಿಕೊಳ್ಳುವಿಕೆಯನ್ನು ಕಡಿಮೆ ಮಾಡಿದ್ದರು. 2008ರಲ್ಲಿ ಮೈಕ್ರೋಸಾಫ್ಟ್​​ನ ದಿನನಿತ್ಯದ ಕೆಲಸ ಕಾರ್ಯಗಳಿಂದ ಹೊರಬಂದಿದ್ದದ್ದ ಅವರು 2014 ರವರೆಗೆ ಮಂಡಳಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.

  • Microsoft Corporation: Co-Founder&Technology Advisor Bill Gates stepped down from the company’s Board of Directors to dedicate more time to his philanthropic priorities. He will continue to serve as Technology Advisor to CEO Satya Nadella&other leaders in the company. (File pic) pic.twitter.com/Stx1FbD9sc

    — ANI (@ANI) March 13, 2020 " class="align-text-top noRightClick twitterSection" data=" ">

ಬಿಲ್​ ಗೇಟ್ಸ್​ 2008ರ ಜೂನ್‌ 27 ಮೈಕ್ರೋಸಾಫ್ಟ್‌ನಲ್ಲಿನ ತಮ್ಮ ಪೂರ್ಣಕಾಲಿಕ ದುಡಿಮೆಗೆ ವಿದಾಯ ಹೇಳಿದ್ದರು. ಇದೀಗ ನಿರ್ದೇಶಕ ಮಂಡಳಿಯಿಂದಲೂ ಹೊರಬಂದಿದ್ದು, ಇನ್ಮುಂದೆ ಸಿಇಒ ಸತ್ಯ ನಾಡೆಲ್ಲಾ ಮತ್ತು ಕಂಪನಿಯ ಇತರ ನಾಯಕರಿಗೆ ತಂತ್ರಜ್ಞಾನ ಸಲಹೆಗಾರರಾಗಿ ಅವರು ಮುಂದುವರಿಯುವುದಾಗಿ ತಿಳಿಸಿದ್ದಾರೆ.

ತಮ್ಮ ಬಿಡುವಿನ ಹೆಚ್ಚಿನ ಸಮಯವನ್ನು ಬಿಲ್ ಮತ್ತು ಮೆಲಿಂಡಾ ಗೇಟ್ಸ್ ಪ್ರತಿಷ್ಠಾನಕ್ಕೆ ಮೀಸಲಿಡಲು ಚಿಂತಿಸಿದ್ದೇನೆ ಎಂದು ಗೇಟ್ಸ್ ಹೇಳಿದ್ದಾರೆ.

Last Updated : Mar 14, 2020, 7:20 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.