ETV Bharat / bharat

ರಕ್ಷಣಾ ಬೋಟ್​​ನಲ್ಲೇ ಮಹಿಳೆಗೆ ಹೆರಿಗೆ... ಮಾನವೀಯತೆ ಮೆರೆದ ಎನ್​ಡಿಆರ್​​ಎಫ್​​ ಸಿಬ್ಬಂದಿ! - Bihar: Woman delivers baby girl on NDRF's rescue boat

ಬಿಹಾರದಲ್ಲಿ ಮಳೆಯ ಅವಾಂತರಕ್ಕೆ ಜನ ನಲುಗಿ ಹೋಗಿದ್ದು, ಪ್ರವಾಹಪೀಡಿತ ಪ್ರದೇಶದಲ್ಲಿ ಎನ್​ಡಿಆರ್​ಎಫ್​​ ರಕ್ಷಣಾ ಕಾರ್ಯಾಚರಣೆ ಬೋಟ್​​ನಲ್ಲೇ ಮಹಿಳೆಯೊಬ್ಬರು ಹೆಣ್ಣುಮಗುವಿಗೆ ಜನ್ಮ ನೀಡಿದ್ದಾರೆ.

ಪ್ರವಾಹಕ್ಕೆ ನಲುಗಿದ ಬಿಹಾರ
author img

By

Published : Jul 22, 2019, 2:55 AM IST

ಮೋತಿಹರಿ: ಮಹಾಮಳೆಗೆ ಬಿಹಾರ ತತ್ತರಿಸಿದ್ದು, ಪ್ರವಾಹಪೀಡಿತ ಮೋತಿಹರಿ ಪ್ರದೇಶದಲ್ಲಿ ಎನ್​ಡಿಆರ್​ಎಫ್​​ ರಕ್ಷಣಾ ಕಾರ್ಯಾಚರಣೆ ಬೋಟ್​​ನಲ್ಲೇ ಮಹಿಳೆಯೊಬ್ಬರು ಹೆಣ್ಣುಮಗುವಿಗೆ ಜನ್ಮ ನೀಡಿದ್ದಾರೆ. ಮಗು ಹಾಗೂ ತಾಯಿಯ ಆರೋಗ್ಯ ಸ್ಥಿರವಾಗಿದೆ ಎನ್ನಲಾಗಿದೆ.

ಮೋತಿಹರಿಯ ಗೋಬ್ರಿ ಎಂಬ ಗ್ರಾಮದ ಸಬೀನಾ ಖತೂನ್​ ಎಂಬ 41 ವರ್ಷದ ಮಹಿಳೆಗೆ ತೀವ್ರ ಹೆರಿಗೆ ನೋವು ಕಾಣಿಸಿಕೊಂಡಿದೆ. ಕೂಡಲೇ ಅವರ ಕುಟುಂಬಸ್ಥರು ತುರ್ತು ಚಿಕಿತ್ಸೆಗೆಂದು ಹತ್ತಿರದ ಪ್ರಾಥಾಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯಲು ಪ್ರಯತ್ನಿಸಿದ್ದಾರೆ. ಅದೇ ವೇಳೆಗೆ ಅಧೀನ ಸಬ್​ ಇನ್ಸ್​ಪೆಕ್ಟರ್​ ವಿಜಯ್​ ಝಾ ನೇತೃತ್ವದ ಎನ್​ಡಿಆರ್​ಎಫ್​ನ ಉಪ ತಂಡ ಪ್ರವಾಹಪೀಡಿತ ಬಜಾರಿಯಾ ಪ್ರದೇಶದಲ್ಲಿ ರಕ್ಷಣಾ ಹಾಗೂ ಪರಿಹಾರ ಕಾರ್ಯದಲ್ಲಿ ತೊಡಗಿತ್ತು. ಆಗೆ ಮಹಿಯೊಬ್ಬರು ತೀವ್ರ ಹೆರಿಗೆ ನೋವಿನಿಂದ ಬಳಲುತ್ತಿದ್ದಾರೆ ಎಂಬ ಮಾಹಿತಿ ಪಡೆದ ಈ ರಕ್ಷಣಾ ತಂಡ, ಕೂಡಲೇ ಸ್ಥಳಕ್ಕೆ ಧಾವಿಸಿದೆ.

ಮಹಿಳೆಯ ಸಂಬಂಧಿಕರು ಹಾಗೂ ಆಶಾ ಕಾರ್ಯಕರ್ತೆಯರ ಸಹಾಯದೊಂದಿಗೆ ಮೋಟರ್​ ಬೋಟ್​​ನಲ್ಲಿ ಸಬೀನಾರನ್ನು ಆಸ್ಪತ್ರೆಗೆ ಕೊಂಡೊಯ್ಯಲು ಎನ್​ಡಿಆರ್​ಎಫ್​​ ತಂಡ ತಯಾರಿ ನಡೆಸಿತ್ತು. ತಂಡದಲ್ಲಿ ರಾಣಾ ಪ್ರತಾಪ್​ ಯಾದವ್​ ಎಂಬ ನರ್ಸ್​ ಕೂಡಾ ಇದ್ದ. ಹೀಗೆ ಬೋಟ್​ನಲ್ಲಿ ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ಸಬೀನಾರಿಗೆ ಹರಿಗೆ ನೋವು ವಿಪರೀತವಾಗಿದೆ. ಆಗ ಪರಿಸ್ಥಿತಿ ಅರಿತ ಎನ್​ಡಿಆರ್​ಎಫ್​ ತಂಡ ಮಹಿಳೆಗೆ ಬೋಟ್​​ನಲ್ಲೇ ಹೆರಿಗೆ ಮಾಡಿಸಲು ನಿರ್ಧರಿಸಿದೆ. ಕೊನೆಗೆ ಎಲ್ಲರ ಪ್ರಯತ್ನದಿಂದ ಸಬೀನಾ ಹೆಣ್ಣುಮಗುವಿಗೆ ಜನ್ಮ ನೀಡಿದ್ದಾರೆ. ಬಳಿಕ ತಾಯಿ ಹಾಗೂ ಮಗುವನ್ನು ಬಜಾರಿಯಾದ ಆಸ್ಪತ್ರೆಗೆ ದಾಖಲಿಸಲಾಗಿದೆ.

Intro:Body:

ಪ್ರವಾಹಕ್ಕೆ ನಲುಗಿದ ಬಿಹಾರ... ರಕ್ಷಣಾ ಬೋಟ್​​ನಲ್ಲೇ ಮಹಿಳೆಗೆ ಹೆರಿಗೆ... ಮಾನವೀಯತೆ ಮೆರೆದ ಎನ್​ಡಿಆರ್​​ಎಫ್​​ ಸಿಬ್ಬಂದಿ!

ಮೋತಿಹರಿ: ಮಹಾಮಳೆಗೆ ಬಿಹಾರ ತತ್ತರಿಸಿದ್ದು, ಪ್ರವಾಹಪೀಡಿತ ಮೋತಿಹರಿ ಪ್ರದೇಶದಲ್ಲಿ ಎನ್​ಡಿಆರ್​ಎಫ್​​ ರಕ್ಷಣಾ ಕಾರ್ಯಾಚರಣೆ ಬೋಟ್​​ನಲ್ಲೆ ಮಹಿಳೆಯೊಬ್ಬರು ಹೆಣ್ಣುಮಗುವಿಗೆ ಜನ್ಮ ನೀಡಿದ್ದಾರೆ. ಮಗು ಹಾಗೂ ತಾಯಿಯ ಆರೋಗ್ಯ ಸ್ಥಿರವಾಗಿದೆ ಎಂದು ವರದಿಯಾಗಿದೆ. 

ಮೋತಿಹರಿಯ ಗೋಬ್ರಿ ಎಂಬ ಗ್ರಾಮದ ಸಬೀನಾ ಖತೂನ್​ ಎಂಬ 41 ವರ್ಷದ ಮಹಿಳೆಗೆ ತೀವ್ರ ಹೆರಿಗೆ ನೋವು ಕಾಣಿಸಿಕೊಂಡಿದೆ. ಕೂಡಲೇ ಅವರ ಕುಟುಂಬಸ್ಥರು ತುರ್ತು ಚಿಕಿತ್ಸೆಗೆಂದು ಹತ್ತಿರದ ಪ್ರಾಥಾಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯಲು ಪ್ರಯತ್ನಿಸಿದ್ದಾರೆ. ಅದೇ ವೇಳೆಗೆ ಅಧೀನ ಸಬ್​ ಇನ್ಸ್​ಪೆಕ್ಟರ್​ ವಿಜಯ್​ ಝಾ ನೇತೃತ್ವದ ಎನ್​ಡಿಆರ್​ಎಫ್​ನ ಉಪ ತಂಡ ಪ್ರವಾಹಪೀಡಿತ ಬಜಾರಿಯಾ ಪ್ರದೇಶದಲ್ಲಿ ರಕ್ಷಣಾ ಹಾಗೂ ಪರಿಹಾರ ಕಾರ್ಯದಲ್ಲಿ ತೊಡಗಿತ್ತು. ಆಗೆ ಮಹಿಯೊಬ್ಬರು ತೀವ್ರ ಹೆರಿಗೆ ನೋವಿನಿಂದ ಬಳಲುತ್ತಿದ್ದಾರೆ ಎಂಬ ಮಾಹಿತಿ ಪಡೆದ ಈ ರಕ್ಷಣಾ ತಂಡ, ಕೂಡಲೇ ಸ್ಥಳಕ್ಕೆ ಧಾವಿಸಿದೆ. 

ಮಹಿಳೆಯ ಸಂಬಂಧಿಕರು ಹಾಗೂ ಆಶಾ ಕಾರ್ಯಕರ್ತೆಯರ ಸಹಾಯದೊಂದಿಗೆ ಮೋಟರ್​ ಬೋಟ್​​ನಲ್ಲಿ ಸಬೀನಾರನ್ನು ಆಸ್ಪತ್ರೆಗೆ ಕೊಂಡೊಯ್ಯಲು ತಯಾರಿ ನಡೆಸಿತ್ತು. ಎನ್​ಡಿಆರ್​ಎಫ್​ ತಂಡದಲ್ಲಿ ರಾಣಾ ಪ್ರತಾಪ್​ ಯಾದವ್​ ಎಂಬ ನರ್ಸ್​ ಕೂಡಾ ಇದ್ದ. ಹೀಗೆ ಬೋಟ್​ನಲ್ಲಿ ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗು ಸಬೀನಾರಿಗೆ ಹರಿಗೆ ನೋವು ವಿಪರೀತವಾಗಿದೆ. ಪರಿಸ್ಥಿತಿ ಅರಿತ ಎನ್​ಡಿಆರ್​ಎಫ್​ ತಂಡ ಮಹಿಳೆಗೆ ಬೋಟ್​​ನಲ್ಲೇ ಹೆರಿಗೆ ಮಾಡಿಸಲು ನಿರ್ಧರಿಸಿದೆ. ಕೊನೆಗೆ ಎಲ್ಲರ ಪ್ರಯತ್ನದಿಂದ ಸಬೀನಾ ಹೆಣ್ಣುಮಗುವಿಗೆ ಜನ್ಮ ನೀಡಿದ್ದಾರೆ. ಬಳಿಕ ತಾಯಿ ಹಾಗೂ ಮಗುವನ್ನು ಬಜಾರಿಯಾದ ಆಸ್ಪತ್ರೆಗೆ ದಾಖಲಿಸಲಾಗಿದೆ. 

Conclusion:

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.