ಪಾಟ್ನಾ: ಬಿಹಾರ ವಿಧಾನಸಭೆ ಚುನಾವಣೆಯ ಮೂರನೇ ಮತ್ತು ಅಂತಿಮ ಹಂತದ ಮತದಾನ ಇಂದು ಬೆಳಗ್ಗೆ 7 ರಿಂದ ನಡೆಯಲಿದೆ. 243 ವಿಧಾನಸಭಾ ಕ್ಷೇತ್ರಗಳ ಪೈಕಿ 16 ಜಿಲ್ಲೆಗಳ 78 ಕ್ಷೇತ್ರಗಳಲ್ಲಿ ಮತದಾನವಾಗಲಿದ್ದು, 2.35 ಕೋಟಿ ಮತದಾರರು ತಮ್ಮ ಹಕ್ಕು ಹೊಂದಿದ್ದಾರೆ.
ಮೂರನೇ ಹಂತದ ಚುನಾವಣೆಯ ಕಣದಲ್ಲಿ ಒಟ್ಟು 1204 ಅಭ್ಯರ್ಥಿಗಳು ಕಣದಲ್ಲಿದ್ದು, ಅವರ ಭವಿಷ್ಯ ಇಂದು ಮತಪೆಟ್ಟಿಗೆ ಸೇರಲಿದೆ. ಈ ಪೈಕಿ 1094 ಪುರುಷ ಅಭ್ಯರ್ಥಿಗಳು, 110 ಮಹಿಳಾ ಅಭ್ಯರ್ಥಿಗಳು ಇದ್ದಾರೆ.
78 ಕ್ಷೇತ್ರಗಳಲ್ಲಿ ಆರ್ಜೆಡಿ 46 ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದರೆ, 42 ಕ್ಷೇತ್ರಗಳಲ್ಲಿ ಲೋಕಜನಶಕ್ತಿ ಪಕ್ಷ, 37ರಲ್ಲಿ ಜೆಡಿಯು, 35ರಲ್ಲಿ ಬಿಜೆಪಿ, 31ರಲ್ಲಿ ಎನ್ಸಿಪಿ, 25ರಲ್ಲಿ ಕಾಂಗ್ರೆಸ್, 23ರಲ್ಲಿ ರಾಷ್ಟ್ರೀಯ ಲೋಕ ಸಮತಾ ಪಕ್ಷ, 19ರಲ್ಲಿ ಬಹುಜನ ಸಮಾಜವಾದಿ ಪಕ್ಷ ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ.
ಗೈಘಟ್ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 31 ಅಭ್ಯರ್ಥಿಗಳು ಚುನಾವಣೆಗೆ ಸ್ಪರ್ಧಿಸಿರುವುದು ದಾಖಲೆಯಾಗಿದೆ. ಅತಿಹೆಚ್ಚು ಅಭ್ಯರ್ಥಿಗಳು ಕಣದಲ್ಲಿರುವ ಕ್ಷೇತ್ರ ಎಂದು ಗುರುತಿಸಿಕೊಂಡಿದೆ..
ಕೊವಿಡ್-19 ಹಿನ್ನೆಲೆ ಸುರಕ್ಷಿತ ಮತದಾನಕ್ಕೆ ಚುನಾವಣಾ ಆಯೋಗ ಮಾರ್ಗಸೂಚಿ ಹೊರಡಿಸಿದೆ. ಮತಗಟ್ಟೆವೊಂದರಲ್ಲಿ 1600 ರಿಂದ 1000 ಮತದಾರರಿಗೆ ಹಕ್ಕು ಚಲಾಯಿಸಲು ಅನುಮತಿ ನೀಡಿದೆ. ಜೊತೆಗೆ 80 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಪೋಸ್ಟ ಕಾರ್ಡ್ ಮೂಲಕ ಮತದಾನ ಮಾಡುವುದಕ್ಕೆ ಅನುಮತಿ ನೀಡಲಾಗಿದೆ. ಎಲೆಕ್ಟ್ರಾನಿಕ್ ವೋಟಿಂಗ್ ಮಷಿನ್, ಮತಗಟ್ಟೆ ಸ್ಯಾನಿಟೈಸ್ ಮಾಡುವುದು ಕಡ್ಡಾಯವಾಗಿದೆ.