ETV Bharat / bharat

ಐಪಿಎಲ್​ ಬೆಟ್ಟಿಂಗ್​ ಅಡ್ಡೆ ಮೇಲೆ ದಾಳಿ... 6 ಲಕ್ಷ ನಗದು, ಲ್ಯಾಪ್​ಟಾಪ್​, ಮೊಬೈಲ್ ವಶಕ್ಕೆ! - Bihar Man held in IPL betting racket bust

ವಿದೇಶದಲ್ಲಿ ನಡೆಯುತ್ತಿರುವ ಇಂಡಿಯನ್​​ ಪ್ರೀಮಿಯರ್​ ಲೀಗ್​ನ ವಿವಿಧ ಪಂದ್ಯಗಳಿಗಾಗಿ ನಡೆಸಲಾಗುತ್ತಿದ್ದ ಬೆಟ್ಟಿಂಗ್​ ದಂಧೆ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ.

IPL betting network in Bihar
IPL betting network in Bihar
author img

By

Published : Oct 3, 2020, 5:45 PM IST

ಪಾಟ್ನಾ(ಬಿಹಾರ): 13ನೇ ಆವೃತ್ತಿ ಇಂಡಿಯನ್​ ಪ್ರೀಮಿಯರ್​ ಲೀಗ್​ನ ವಿವಿಧ ಪಂದ್ಯಗಳಿಗಾಗಿ ನಡೆಸಲಾಗುತ್ತಿದ್ದ ಬೆಟ್ಟಿಂಗ್​​ ದಂಧೆ ಅಡ್ಡೆ ಮೇಲೆ ಪೊಲೀಸರು ದಾಳಿ ನಡೆಸಿದ್ದು, 6 ಲಕ್ಷ ರೂ ನಗದು, ಮೊಬೈಲ್​​ ಪೋನ್​ ಹಾಗೂ ಲ್ಯಾಪ್​ಟಾಪ್​ ವಶಕ್ಕೆ ಪಡೆದುಕೊಳ್ಳಲಾಗಿದೆ.

ಬಿಹಾರದ ಜಮ್ಲಾಪುರ್​ ಪ್ರದೇಶದಲ್ಲಿ ನಡೆಯುತ್ತಿದ್ದ ಬೆಟ್ಟಿಂಗ್​ ಅಡ್ಡೆ ಮೇಲೆ ದಾಳಿ ನಡೆಸಲಾಗಿದ್ದು, ಓರ್ವ ವ್ಯಕ್ತಿಯ ಬಂಧನ ಮಾಡಲಾಗಿದೆ ಎಂದು ಪೊಲೀಸ್​ ವರಿಷ್ಠಾಧಿಕಾರಿ ಲಿಪಿ ಸಿಂಗ್​​ ತಿಳಿಸಿದ್ದಾರೆ.

ಬಂಧಿತ ಆರೋಪಿಯನ್ನ ಕೈಲಾಸ್​​ ಎಂದು ಗುರುತಿಸಲಾಗಿದ್ದು, ಇತನಿಂದ 6 ಲಕ್ಷ ರೂ ನಗದು ಹಾಗೂ ಮೊಬೈಲ್​ ಹಾಗೂ ಲ್ಯಾಪ್​ಟಾಪ್​ ವಶಕ್ಕೆ ಪಡೆದುಕೊಳ್ಳಲಾಗಿದೆ. ಇತನ ವಿರುದ್ಧ ಗ್ಯಾಮ್ಲಿಂಗ್​​ ಅಡಿ ದೂರು ದಾಖಲು ಮಾಡಿಕೊಳ್ಳಲಾಗಿದೆ. ಈ ಪ್ರದೇಶದಲ್ಲಿ ಸುಮಾರು 50 ಲಕ್ಷಕ್ಕೂ ಅಧಿಕ ಮೌಲ್ಯದ ಬೆಟ್ಟಿಂಗ್​ ದಂಧೆ ನಡೆಯುತ್ತಿದ್ದು, ಅನೇಕರು ಇದರಲ್ಲಿ ಭಾಗಿಯಾಗಿರುವ ಶಂಕೆ ವ್ಯಕ್ತಪಡಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.