ಪಶ್ಚಿಮ ಚಂಪಾರಣ್ (ಬಿಹಾರ): ವಾಲ್ಮೀಕಿ ಟೈಗರ್ ರಿಸರ್ವ್ (ವಿಟಿಆರ್) ಪ್ರವಾಹಕ್ಕೆ ಸಿಲುಕಿರುವುದರಿಂದ ಅಲ್ಲಿನ ಪ್ರಾಣಿಗಳು ಗ್ರಾಮದ ವಸತಿ ಪ್ರದೇಶಗಳಲ್ಲಿ ಆಶ್ರಯ ಪಡೆಯಲು ಆಗಮಿಸುತ್ತಿವೆ. ಇದರಿಂದಾಗಿ ಬಿಹಾರದಲ್ಲಿ ಪರಿಸ್ಥಿತಿ ತೀವ್ರವಾಗಿ ಹದಗೆಟ್ಟಿದೆ.
ವಾಲ್ಮೀಕಿ ನಗರದ ಬಾಗೀಚಾ ಟೋಲಾದ ಶಂಭು ಸಿಂಗ್ ಅವರ ಶೆಡ್‌ಗೆ ನುಗ್ಗಿದ ದೈತ್ಯ ಹೆಬ್ಬಾವು ಐದು ಕೊಳಿ ಮರಿಗಳನ್ನು ನುಂಗಿದೆ.
ಗ್ರಾಮಸ್ಥರು ಈ ಕುರಿತು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದು, ಇಲಾಖೆಯ ಸಿಬ್ಬಂದಿ ಹೆಬ್ಬಾವು ಹಿಡಿದು ವಿಟಿಆರ್ನ ಕಾಡಿನಲ್ಲಿ ಬಿಟ್ಟು ಬಂದಿದ್ದಾರೆ. ಗ್ರಾಮಸ್ಥರಿಗೆ ಪರಿಹಾರ ನೀಡಲಾಗುವುದು ಎಂದು ಅರಣ್ಯ ಅಧಿಕಾರಿಗಳು ತಿಳಿಸಿದ್ದಾರೆ.
ಬಾಗಾಹಾದ ನಾರೈಪುರ ಗ್ರಾಮದಲ್ಲಿರುವ ಜಾನುವಾರು ಶೆಡ್‌ಗೆ ಪ್ರವೇಶಿಸಿದ ಮೊಸಳೆ ಎರಡು ಕುರಿಮರಿಗಳನ್ನು ತನ್ನ ಬೇಟೆಯಾಡಿದೆ. ಈ ದಾಳಿಯಲ್ಲಿ ಇಬ್ಬರು ಗಾಯಗೊಂಡಿದ್ದಾರೆ.
ವಾಲ್ಮೀಕಿ ಟೈಗರ್ ರಿಸರ್ವ್‌ನ ದಟ್ಟವಾದ ಅರಣ್ಯವು ನಿರಂತರ ಮಳೆಯಿಂದಾಗಿ ಪ್ರವಾಹಕ್ಕೆ ಸಿಲುಕಿದೆ. ಇದರಿಂದಾಗಿ ಕಾಡು ಪ್ರಾಣಿಗಳಾದ ಚಿರತೆ, ಕರಡಿಗಳು ಹಾಗೂ ವಿಷಕಾರಿ ಹಾವುಗಳನ್ನು ವಿಟಿಆರ್ ಅರಣ್ಯ ವಿಭಾಗದ ಪಕ್ಕದ ವಸತಿ ಪ್ರದೇಶಗಳಿಗೆ ನುಗ್ಗುತ್ತಿವೆ. ಇದರಿಂದಾಗಿ ಅಲ್ಲಿನ ಜನ ಭೀತಿಗೊಳಗಾಗಿ ಪ್ರಾಣ ಭಯದಲ್ಲಿ ಜೀವನ ಸಾಗಿಸುತ್ತಿದ್ದಾರೆ.