ಪಾಟ್ನಾ: ಬಿಹಾರದಲ್ಲಿ ಚುನಾವಣೆ ಕಣ ರಂಗೇರಿದ್ದು, ಎಲ್ಲ ಅಭ್ಯರ್ಥಿಗಳು ಕಣಕ್ಕಿಳಿದು ಮತಯಾಚನೆ ಮಾಡುವ ಕೆಲಸದಲ್ಲಿ ಫುಲ್ ಬ್ಯುಸಿಯಾಗಿದ್ದಾರೆ. ಇದರ ಮಧ್ಯೆ ಅಲ್ಲಿನ ಉಪ ಮುಖ್ಯಮಂತ್ರಿ ಸುಶೀಲ್ ಕುಮಾರ್ ಮೋದಿಗೆ ಕೊರೊನಾ ಸೋಂಕು ತಗುಲಿದೆ.
ಇದಕ್ಕೆ ಸಂಬಂಧಿಸಿದಂತೆ ಟ್ವೀಟರ್ನಲ್ಲಿ ಸುಶೀಲ್ ಕುಮಾರ್ ಮೋದಿ ಮಾಹಿತಿ ಹಂಚಿಕೊಂಡಿದ್ದು, ಆಲ್ ಇಂಡಿಯಾ ಇನ್ಸ್ಟ್ಯೂಟ್ ಆಫ್ ಮೆಡಿಕಲ್ ಸೈನ್ಸ್(AIIMS) ಪಾಟ್ನಾದಲ್ಲಿ ಚಿಕಿತ್ಸೆಗೋಸ್ಕರ ದಾಖಲಾಗಿದ್ದಾರೆ.
-
Tested positive for CORONA.All parameters perfectly normal.Started with mild https://t.co/cTwCzt88DL temp.for last 2 days.Admitted to AIIMS Patna for better monitoring.CT scan of lungs normal.Will be back soon for campaigning.
— Sushil Kumar Modi (@SushilModi) October 22, 2020 " class="align-text-top noRightClick twitterSection" data="
">Tested positive for CORONA.All parameters perfectly normal.Started with mild https://t.co/cTwCzt88DL temp.for last 2 days.Admitted to AIIMS Patna for better monitoring.CT scan of lungs normal.Will be back soon for campaigning.
— Sushil Kumar Modi (@SushilModi) October 22, 2020Tested positive for CORONA.All parameters perfectly normal.Started with mild https://t.co/cTwCzt88DL temp.for last 2 days.Admitted to AIIMS Patna for better monitoring.CT scan of lungs normal.Will be back soon for campaigning.
— Sushil Kumar Modi (@SushilModi) October 22, 2020
ಆರೋಗ್ಯದಲ್ಲಿ ಯಾವುದೇ ಏರುಪೇರು ಕಂಡು ಬಂದಿಲ್ಲ. ಕಳೆದ ಎರಡು ದಿನಗಳಿಂದ ಸ್ವಲ್ಪ ಮಟ್ಟದ ತೊಂದರೆ ಕಾಣಿಸಿಕೊಂಡಿದ್ದು, ಅದೇ ಕಾರಣಕ್ಕಾಗಿ ಏಮ್ಸ್ಗೆ ತೆರಳಿದ್ದೇನು. ಶ್ವಾಸಕೋಸದ ಸಿಟಿ ಸ್ಕ್ಯಾನ್ ಮಾಡಿಸಲಾಗಿದ್ದು, ಯಾವುದೇ ತೊಂದರೆ ಇಲ್ಲ. ಚುನಾವಣಾ ಪ್ರಚಾರದಲ್ಲಿ ಭಾಗಿಯಾಗಲು ಶೀಘ್ರದಲ್ಲೇ ಹಿಂತಿರುಗುತ್ತೇನೆ ಎಂದು ಟ್ವೀಟ್ನಲ್ಲಿ ತಿಳಿಸಿದ್ದಾರೆ.
ಬಿಹಾರದಲ್ಲಿ ಈಗಾಗಲೇ ಚುನಾವಣೆ ಕಣ ರಂಗೇರಿರುವ ಕಾರಣ ಕಳೆದ ಭಾನುವಾರ ಸುಶೀಲ್ ಕುಮಾರ್ ಮೋದಿ, ಅಲ್ಲಿನ ಮುಖ್ಯಮಂತ್ರಿ ನಿತೀಶ್ ಕುಮಾರ್ ಜತೆ ಬಕ್ಸಾರ್ ಹಾಗೂ ಭೋಜಪುರ್ ಜಿಲ್ಲೆಗಳಲ್ಲಿ ಚುನಾವಣಾ ಪ್ರಚಾರ ನಡೆಸಿದ್ದರು.
ಬಿಹಾರದಲ್ಲಿ ಸದ್ಯ 2,08,000 ಕೋವಿಡ್ ಕೇಸ್ಗಳಿದ್ದು, 1,96,208 ಡಿಸ್ಚಾರ್ಜ್ ಹಾಗೂ 11,010 ಸಕ್ರಿಯ ಪ್ರಕರಣಗಳಿದ್ದು, 1,019 ಜನರು ಸಾವನ್ನಪ್ಪಿದ್ದಾರೆ.