ETV Bharat / bharat

ಚುನಾವಣೆಯಲ್ಲಿ ಸೋಲುತ್ತಿದ್ದ 'ದಾದಾ'ಗೆ ಬೀದರ್​​ನ ಈ ಶ್ರೀಗಳ ಆಶೀರ್ವಾದದಿಂದ 2 ಬಾರಿ ಜಯ!

ಮಾಜಿ ರಾಷ್ಟ್ರಪತಿ, ದಿವಂಗತ ಪ್ರಣಬ್​ ಮುಖರ್ಜಿ ರಾಜಕೀಯವಾಗಿ ಸೋಲು ಹಾಗೂ ಗೆಲುವುಗಳನ್ನು ಸಮನಾಗಿ ಕಂಡವರು. ಅವರ ರಾಜಕೀಯ ಆರಂಭದ ದಿನಗಳಲ್ಲಿ ಹಲವು ಚುನಾವಣೆಯಲ್ಲಿ ಸೋಲು ಕಂಡಿದ್ದ ಅವರಿಗೆ ಬೀದರ್​ನ ಶಂಭುಲಿಂಗೇಶ್ವರ ದೇವಾಲಯ ಅತಿ ದೊಡ್ಡ ತಿರುವು ನೀಡಿದೆ ಎನ್ನಲಾಗುತ್ತದೆ.

pranab mukharjee in bidar
ಬೀದರ್​ನಲ್ಲಿ ಪ್ರಣಬ್ ಮುಖರ್ಜಿ
author img

By

Published : Sep 1, 2020, 8:33 AM IST

ಬೀದರ್: ಮಾಜಿ ರಾಷ್ಟ್ರಪತಿ, ದಿವಂಗತ ಪ್ರಣಬ್​ ಮುಖರ್ಜಿ ರಾಜಕೀಯವಾಗಿ ಸೋಲು ಹಾಗೂ ಗೆಲುವುಗಳನ್ನು ಸಮನಾಗಿ ಕಂಡವರು. ಅವರ ರಾಜಕೀಯ ಆರಂಭದ ದಿನಗಳಲ್ಲಿ ಹಲವು ಚುನಾವಣೆಯಲ್ಲಿ ಸೋಲು ಕಂಡಿದ್ದರು. ಆದರೆ ಬೀದರ್​ನ ಶಂಭುಲಿಂಗೇಶ್ವರನ ಸನ್ನಿಧಿ ಪ್ರಣಬ್ ಅವರ ರಾಜಕೀಯ ದಿಕ್ಕನ್ನು ಬದಲಾಯಿಸಿತು ಎಂಬ ಮಾತಿದೆ. ಅದರ ಬಗ್ಗೆ ದೇವಸ್ಥಾನದ ಶ್ರೀಗಳಾದ ಎನ್​.ವಿ.ರೆಡ್ಡಿ ಅನುಭವ ಹಂಚಿಕೊಂಡಿದ್ದಾರೆ.

ಪ್ರಣಬ್​ ಮುಖರ್ಜಿ ಅವರಿಗೆ ಬೀದರ್​ನ ರೇಕುಳಗಿಯ ಶಂಭುಲಿಂಗೇಶ್ವರನ ದೈವ ಶಕ್ತಿಯ ಮೇಲೆ ಅಪಾರ ನಂಬಿಕೆಯಿತ್ತು. 'ದಾದಾ'ಗೆ ರಾಜಕೀಯ ಜಯಮಾಲೆಯನ್ನು ತೊಡಿಸಿದ್ದು ಇದೇ ದೇವಸ್ಥಾನವೆಂದು ಎನ್​.ವಿ.ರೆಡ್ಡಿಯವರು ಅಭಿಪ್ರಾಯಪಡುತ್ತಾರೆ. ಜೊತೆಗೆ ಪ್ರಣಬ್ ಮುಖರ್ಜಿ ಅವರ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದ್ದಾರೆ.

'ದಾದಾ' ಬಗ್ಗೆ ಗುರೂಜಿ ಹೇಳಿದ್ದು..!

ಪ್ರಣಬ್ ಮುಖರ್ಜಿ ಚುನಾವಣೆ ಬಂದಾಗ ಇಲ್ಲಿಗೆ ಧಾವಿಸುತ್ತಿದ್ದರು. ಅವರ ರಾಜಕೀಯದ ಕಠಿಣ ನಿರ್ಧಾರಗಳನ್ನು ಕೂಡ ಕೇಳುವುದು ಮಾತ್ರವಲ್ಲದೆ ಅವರ ಮನೆಯ ಸದಸ್ಯರನ್ನು ಈ ಸನ್ನಿಧಾನಕ್ಕೆ ಕಳಿಸುತ್ತಿದ್ದರು. ಅವರು ರಾಜಕೀಯಕ್ಕೆ ಕಾಲಿಟ್ಟ ಮೇಲೆ 25 ವರ್ಷಗಳಿಂದ ನಮ್ಮೊಂದಿಗೆ ಸಂಪರ್ಕವಿತ್ತು. ಇತ್ತೀಚೆಗೆ ಕೊರೊನಾಗೆ ಮೊದಲು ಮಾರ್ಚ್​ನಲ್ಲಿ ದೆಹಲಿಗೆ ತೆರಳಿ ಅವರಿಗೆ ಪ್ರಸಾದ ನೀಡಿದ್ದೆ. ಹಲ್ಲು ನೋವು ಎಂದು ಹೇಳಿದಾಗ ಪ್ರಸಾದ ಕೊಟ್ಟಿದ್ದೆ. ಆಸ್ಪತ್ರೆ ಸೇರಿದ ನಂತರ ಅವರ ನಡುವಿನ ಸಂಪರ್ಕ ಆಗಿಲ್ಲ ಎಂದು ಶಂಭುಲಿಂಗ ದೇವಸ್ಥಾನದ ಶ್ರೀಗಳಾದ ಎನ್.ವಿ.ರೆಡ್ಡಿ ಹೇಳಿದ್ದಾರೆ.

ಬೀದರ್​ನಲ್ಲಿ ಪ್ರಣಬ್ ಮುಖರ್ಜಿ

ಪ್ರಣಬ್ ಅವರ ಒಳ್ಳೆಯ ಬುದ್ಧಿ, ಅವರ ಕೆಲಸ ನೋಡಿ ವಿರೋಧ ಪಕ್ಷದವರು 'ದಾದಾ' ಎಂದೇ ಗೌರವಿಸುತ್ತಿದ್ದರು. ಅಂತಹ ದೊಡ್ಡ ವ್ಯಕ್ತಿ ಸಿಗೋದಿಲ್ಲ, ಅವರು ನಮ್ಮ ಭಾರತದ ಹೆಮ್ಮೆ. ಅಂತಹ ದೊಡ್ಡ ವ್ಯಕ್ತಿ ನಮ್ಮ ಬೀದರ್ ಶಂಭುಲಿಂಗೇಶ್ವರ ಅವರನ್ನ ನಂಬಿಕೊಂಡು ಬರೋದು ನಿಜಕ್ಕೂ ನಮಗೆ ಗೌರವದ ವಿಚಾರ. ಅವರು ಎರಡು ಬಾರಿ ಲೋಕಸಭೆ ಗೆದ್ದಿದ್ದು, ಕ್ಷೇತ್ರ ಆಯ್ಕೆ ಮಾಡುವಂತೆ ನಾನೇ ಹೇಳಿದ್ದೆ ಎಂದು ಶ್ರೀಗಳು ಸ್ಪಷ್ಟನೆ ನೀಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.