ETV Bharat / bharat

ಎಚ್ಚರ: ಪಿಎಂ ಕೇರ್ಸ್​ ಫಂಡ್​ ನೆಪದಲ್ಲಿ ಫೇಕ್​ ಯುಪಿಐ ಐಡಿಗೆ ಹಣ ಹಾಕಬೇಡಿ - PM CARES Fund

ಕೊರೊನಾ ವೈರಸ್​ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡುವವರಿಗಾಗಿ ಕೇಂದ್ರ ಸರ್ಕಾರ PM CARES Fund ಎಂಬ ನಿಧಿಯೊಂದನ್ನು ಸ್ಥಾಪಿಸಿದೆ. ಈಗ ಪಿಎಂ ಕೇರ್ಸ್​ ಫಂಡ್ ಹೆಸರಲ್ಲಿ ಫೇಕ್​ ಯುಪಿಐ ಐಡಿ ಹರಿದಾಡುತ್ತಿದ್ದು, ಈ ಬಗ್ಗೆ ಜಾಗೃತರಾಗಿರಿ ಎಂದು ಪಿಐಬಿ ಪ್ಯಾಕ್ಟ್​ ಚೆಕ್​ ಅಧಿಕೃತ ಟ್ವಿಟರ್ ಖಾತೆಯಲ್ಲಿ ಜಾಗೃತಿ ಮೂಡಿಸಲಾಗಿದೆ.

PM CARES Fund
ಪಿಎಂ ಕೇರ್ಸ್​ ಫಂಡ್​
author img

By

Published : Mar 30, 2020, 12:53 PM IST

ನವದೆಹಲಿ: ಮಹಾಮಾರಿ ಕೊರೊನಾ ವೈರಸ್​ ವಿರುದ್ಧ ಭಾರತ ಹೋರಾಟ ನಡೆಸುತ್ತಿದೆ. ಈ ನಡುವೆ ಕೇಂದ್ರ ಸರ್ಕಾರವು ಈ ಮಹತ್ವದ ಹೋರಾಟಕ್ಕೆ ದೇಣಿಗೆ ನೀಡುವವರಿಗಾಗಿ ನಿಧಿಯೊಂದನ್ನು ಸ್ಥಾಪಿಸಿದೆ.

ದೇಶದ ಹಲವು ನಾಗರಿಕರ ಮನವಿ ಮೇರೆಗೆ ಪ್ರಧಾನ ಮಂತ್ರಿಗಳು ಕಳೆದ ಶನಿವಾರ ಪಿಎಂ ಕೇರ್ಸ್​ ಫಂಡ್(PM CARES Fund) ಎಂಬ ಖಾತೆಯನ್ನು ಸ್ಥಾಪಿಸಿದ್ದು, ಕೊರೊನಾ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡುವವರು ಈ ಖಾತೆಗೆ ಹಣ ಜಮಾವಣೆ ಮಾಡಬಹುದಾಗಿದೆ. ಈಗಾಗಲೇ ಈ ಖಾತೆಗೆ ಹಲವು ಪ್ರಮುಖರು ಸೇರಿದಂತೆ ಜನಸಾಮಾನ್ಯರು ಕೂಡಾ ದೇಣಿಗೆ ನೀಡಿದ್ದಾರೆ. ಆದರೆ ಸದ್ಯ ಇದರ ದುರ್ಬಳಕೆಯಾಗುತ್ತಿದ್ದು, ಹಲವೆಡೆ ಪಿಎಂ ಕೇರ್ಸ್​ ಫಂಡ್ ಹೆಸರಲ್ಲಿ ಫೇಕ್​ ಯುಪಿಐ ಐಡಿ ಹರಿದಾಡುತ್ತಿದೆ. ಜನರು ಇದರಿಂದ ಜಾಗರೂಕರಾಗಿರಬೇಕಿದೆ.

ಈ ಬಗ್ಗೆ ಪಿಐಬಿ ಸತ್ಯಶೋಧನೆ​ ನಡೆಸಿ​ ಅಧಿಕೃತ ಟ್ವಿಟ್ಟರ್​ ಖಾತೆಯಲ್ಲಿ ಸ್ಪಷ್ಟನೆ ನೀಡಿದ್ದು, ಇಂತಹ ನಕಲಿ ಯುಪಿಐ ಐಡಿಗೆ ಹಣ ಜಮಾವಣೆ ಮಾಡಬೇಡಿ. ಈ ಬಗ್ಗೆ ಎಚ್ಚರವಾಗಿರಿ ಎಂದು ಹೇಳಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.