ಕೋಲ್ಕತ್ತಾ: ತೆಲುಗು ಭಾಷೆಯನ್ನು ಪಶ್ಚಿಮ ಬಂಗಾಳದ ಅಧಿಕೃತ ಭಾಷೆಯೆಂದು ಅಂಗೀಕಾರ ಮಾಡಲಾಗುವುದು ಎಂದು ಸರ್ಕಾರ ಘೋಷಿಸಿದ ಬಳಿಕ ರಾಜ್ಯದ 'ಮಿನಿ ಆಂಧ್ರಪ್ರದೇಶ'ದ ಜನರು ಸಂಭ್ರಮಿಸುತ್ತಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ತೆಲುಗು ಸಂಘದ ಕಾರ್ಯದರ್ಶಿ ಬಿ ಸೇಠ್ ಗಿರಿ ರಾವ್, ಬಹಳ ಸಮಯದ ನಂತರ ರಾಜ್ಯ ಸರ್ಕಾರ ನಮ್ಮ ಮನವಿಗೆ ಸ್ಪಂದಿಸಿರುವುದಕ್ಕೆ ತುಂಬಾ ಸಂತೋಷವಾಗಿದೆ. ಪ್ರತಿಪಕ್ಷಗಳು ಈ ವಿಚಾರದಲ್ಲಿ ರಾಜಕೀಯ ಮಾಡಬಹುದು, ಆದರೆ ಅದಕ್ಕೂ ನಮಗೂ ಯಾವುದೇ ಸಂಬಂಧವಿಲ್ಲ. ಪಕ್ಷ-ರಾಜಕೀಯ ನಮ್ಮ ಸಮಾಜವನ್ನು ನಡೆಸುವುದಿಲ್ಲ. ನಮ್ಮ ಬೇಡಿಕೆಗಳನ್ನು ಈಡೇರಿಸಿದರಿಗೆ ನಾವು ಗೌರವಿಸುತ್ತೇವೆ ಎಂದು ಹೇಳುತ್ತಾರೆ.
ಇದನ್ನೂ ಓದಿ: ಜಮ್ಮು ಕಾಶ್ಮೀರದಲ್ಲಿ ಪ್ರಜಾಪ್ರಭುತ್ವವನ್ನು ಪುನಃಸ್ಥಾಪಿಸಲು ಮೋದಿ ಸರ್ಕಾರ ಶ್ರಮಿಸಲಿದೆ: ಅಮಿತ್ ಶಾ ಟ್ವೀಟ್
ಮಂಗಳವಾರ ನಡೆದ ಮಾಧ್ಯಮಗೋಷ್ಟಿಯಲ್ಲಿ ಪಶ್ಚಿಮ ಬಂಗಾಳ ಶಿಕ್ಷಣ ಸಚಿವ ಪಾರ್ಥ ಚಟರ್ಜಿ ಅವರು ತೆಲುಗು ರಾಜ್ಯದ ಅಧಿಕೃತ ಭಾಷೆಯಾಗಿ ಅಂಗೀಕರಿಸಲಾಗುವುದು ಎಂದು ಘೋಷಿಸಿದ್ದರು. ಹೀಗಾಗಿ ರಾಜ್ಯದ 'ಮಿನಿ ಆಂಧ್ರಪ್ರದೇಶ' ಎಂದು ಕರೆಯಲ್ಪಡುವ 'ಖರಗ್‌ಪುರ' ಪ್ರದೇಶದಲ್ಲಿ ಸಂತಸ ಮನೆ ಮಾಡಿದೆ. ಆದರೆ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸರ್ಕಾರದ ಈ ನಿರ್ಧಾರವನ್ನು ಚುನಾವಣೆಗೆ ಮುನ್ನದ ಪಿತೂರಿ ಎಂದು ಬಿಜೆಪಿ ಆರೋಪಿಸಿದೆ.
ತೆಲುಗು ಭಾಷೆಯನ್ನು ಅಧಿಕೃತ ಭಾಷೆಯಾಗಿ ಗುರುತಿಸಲು ನಾನು ಬಹಳ ಸಮಯದಿಂದ ಹೋರಾಡುತ್ತಿದ್ದೇನೆ. ಸಿಎಂ ಮಮತಾ ಬ್ಯಾನರ್ಜಿ ಅವರ ಭರವಸೆ ಪ್ರಕಾರ ಈ ಘೋಷಣೆ ಮಾಡಿದ್ದು, ಇದನ್ನು ನಮ್ಮ ಅನೇಕ ತೆಲುಗು ಸಹೋದರರಿಗೆ ಪ್ರಯೋಜನವಾಗಲಿದೆ ಎಂದು ಟಿಎಂಸಿ ಶಾಸಕ ಪ್ರದೀಪ್ ಸರ್ಕಾರ್ ಹೇಳಿದರು.