ETV Bharat / bharat

ಪಶ್ಚಿಮ ಬಂಗಾಳದಲ್ಲಿ ಜುಲೈ 31ರವರೆಗೆ ಲಾಕ್​ಡೌನ್​... ಮಮತಾ ಬ್ಯಾನರ್ಜಿ ಘೋಷಣೆ - ಪಶ್ಚಿಮ ಬಂಗಾಳ ಲಾಕ್​ಡೌನ್​

ಕೆಲವೊಂದು ಅಗತ್ಯ ಸೇವೆಗಳಿಗೆ ಅವಕಾಶ ನೀಡಿ ಪಶ್ಚಿಮ ಬಂಗಾಳ ಜುಲೈ 31ರವರೆಗೆ ಲಾಕ್​ಡೌನ್​ ಆದೇಶ ಹೊರಹಾಕಿದೆ.

CM Mamata Banerjee
CM Mamata Banerjee
author img

By

Published : Jun 24, 2020, 8:08 PM IST

ಕೋಲ್ಕತ್ತಾ: ದೇಶಾದ್ಯಂತ ಅನ್​ಲಾಕ್​ 1 ಜಾರಿಯಲ್ಲಿದ್ದು, ಬಸ್​ ಸಂಚಾರ ಸೇರಿದಂತೆ ಕೆಲವೊಂದು ಅಗತ್ಯ ಸೇವೆಗೆ ಕೇಂದ್ರ ಸರ್ಕಾರ ಅನುಮತಿ ನೀಡಿದೆ. ಆದರೆ ಪಶ್ಚಿಮ ಬಂಗಾಳ ಮಾತ್ರ ಜುಲೈ 31ರವರೆಗೆ ಲಾಕ್​ಡೌನ್​ ಮುಂದೂಡಿಕೆ ಮಾಡಿ ಮಹತ್ವದ ಆದೇಶ ಹೊರಹಾಕಿದೆ.

ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನೇತೃತ್ವದಲ್ಲಿ ಇಂದು ಸರ್ವಪಕ್ಷ ಸಭೆ ನಡೆಸಿದ ಬಳಿಕ ಈ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಮಮತಾ ಬ್ಯಾನರ್ಜಿ ತಿಳಿಸಿದ್ದು, ಆರೋಗ್ಯ ಸೇವೆ ಸೇರಿದಂತೆ ಕೆಲವೊಂದು ಅಗತ್ಯ ಸೇವೆಗಳಿಗೆ ಅವಕಾಶ ನೀಡಿದ್ದಾರೆ.

ರೈಲು, ಮೆಟ್ರೋ ಹಾಗೂ ಶಾಲಾ- ಕಾಲೇಜ್​ಗಳು ಬಂದ್​ ಇರಲಿದ್ದು, ಸದ್ಯದ ಸ್ಥಿತಿಯಲ್ಲಿ ಪರೀಕ್ಷೆ ನಡೆಸದಿರಲು ನಿರ್ಧರಿಸಲಾಗಿದೆ ಎಂದು ತಿಳಿಸಿದ್ದಾರೆ. ಪಶ್ಚಿಮ ಬಂಗಾಳದಲ್ಲಿ 14,728 ಕೋವಿಡ್​ ಪ್ರಕರಣ ಕಾಣಿಸಿಕೊಂಡಿದ್ದು, 9,218 ಆ್ಯಕ್ಟಿವ್​ ಕೇಸ್​ಗಳಿವೆ. ಜತೆಗೆ 580 ಜನರು ಸಾವನ್ನಪ್ಪಿದ್ದಾರೆ. ದಿನದಿಂದ ದಿನಕ್ಕೆ ಕೋವಿಡ್​ ಸೋಂಕಿತ ಪ್ರಕರಣ ಹೆಚ್ಚು ಕಂಡು ಬರುತ್ತಿರುವ ಕಾರಣ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.