ಬೆಂಗಳೂರು: ಕೃಷಿ ಮಸೂದೆಗಳ ಅಂಗೀಕಾರದ ವೇಳೆ ಅಶಿಸ್ತಿನ ವರ್ತನೆಯ ಕಾರಣಕ್ಕೆ ಕರ್ನಾಟಕದಿಂದ ಆಯ್ಕೆಯಾಗಿದ್ದ ಕಾಂಗ್ರೆಸ್ ಸದಸ್ಯ ಸೈಯದ್ ನಾಸಿರ್ ಹುಸೇನ್ ಅಮಾನತುಗೊಂಡಿದ್ದಾರೆ.
ಭಾರತೀಯ ಕಾಂಗ್ರೆಸ್ ಪಕ್ಷದ ನಾಯಕರಾಗಿರುವ ಇವರು, 2018ರ ಮಾರ್ಚ್ನಲ್ಲಿ ನಡೆದಿದ್ದ ರಾಜ್ಯಸಭಾ ಚುನಾವಣೆಯಲ್ಲಿ 42 ಮತಗಳನ್ನು ಪಡೆದು ಮೇಲ್ಮನೆಗೆ ಆಯ್ಕೆಯಾಗಿದ್ದರು.
ಮೂಲತಃ ಬಳ್ಳಾರಿ ಜಿಲ್ಲೆಯವರಾದ ಸೈಯದ್ ನಾಸಿರ್ ಹುಸೇನ್ 2018 ಏಪ್ರಿಲ್ 3ರಿಂದ ರಾಜ್ಯಸಭಾ ಸ್ಥಾನ ಅಲಂಕರಿಸಿದ್ದಾರೆ.
ರಾಜ್ಯಸಭೆಯಲ್ಲಿ ಕೃಷಿ ಮಸೂದೆಗಳ ಬಗ್ಗೆ ಚರ್ಚೆ ವೇಳೆ ಗದ್ದಲ ಸೃಷ್ಟಿಸಿದ 8 ಮಂದಿ ಪ್ರತಿಪಕ್ಷದ ಸದಸ್ಯರನ್ನು ಅಮಾನತು ಮಾಡಿ ರಾಜ್ಯಸಭಾಧ್ಯಕ್ಷ ವೆಂಕಯ್ಯ ನಾಯ್ಡು ಆದೇಶ ಹೊರಡಿಸಿದ್ದು, ಎಂಟು ಮಂದಿಯಲ್ಲಿ ಕರ್ನಾಟಕದ ನಾಸೀರ್ ಹುಸೇನ್ ಕೂಡಾ ಒಬ್ಬರಾಗಿದ್ದಾರೆ.