ಆಂಧ್ರ ಪ್ರದೇಶ: ಸಾಲ ಮರುಪಾವತಿಸದ ಕಾರಣ ಯುವಕನನ್ನು ಹಿಗ್ಗಾಮುಗ್ಗಾ ಥಳಿಸಿರುವ ಘಟನೆ ಪಶ್ಚಿಮ ಗೋದಾವರಿ ಜಿಲ್ಲೆಯ ಜಂಗರೆಡ್ಡಿಗುಡೆಂನಲ್ಲಿ ನಡೆದಿದೆ.
ಥಡೆಪಲ್ಲಿಗುಡೆಮ್ನ ಯುವಕ ಮೂರು ತಿಂಗಳ ಹಿಂದೆ ಅದೇ ಏರಿಯಾದ ಎರ್ರಸಾನಿ ವಿಜಯಬಾಬು ಅವರಿಂದ 30,000 ರೂ. ಸಾಲ ಪಡೆದಿದ್ದ. ಈ ಸಾಲವನ್ನು ವಾಪಸ್ ಕೊಡುವಂತೆ ಯುವಕನಿಗೆ ಕಿರುಕುಳ ನೀಡಲಾಗುತ್ತಿತ್ತು.
ವಿಜಯಬಾಬು ಮತ್ತು ಇತರ ಮೂವರು ಬಲವಂತವಾಗಿ ಯುವಕನನ್ನು ಥಡೆಪಲ್ಲಿಗುಡೆಮ್‌ನಿಂದ ಜಂಗರೆಡ್ಡಿಗುಡೆಮ್‌ಗೆ ಕಾರಿನಲ್ಲಿ ಭಾನುವಾರ ರಾತ್ರಿ ಬಲವಂತವಾಗಿ ಕರೆದೊಯ್ದಿದ್ದಾರೆ. ಯುವಕನನ್ನು ಲೇಔಟ್ ಒಂದರಲ್ಲಿ ಬಂಧಿಸಿ, ಆತನಿಗೆ ಥಳಿಸಿ, ತಲೆಯನ್ನು ಬೋಳಿಸಿ ನಂತರ ಜಂಗರೆಡ್ಡಿಗುಡೆಮ್ ಬಸ್ ನಿಲ್ದಾಣದಲ್ಲಿ ಬಿಟ್ಟು ಹೋಗಿದ್ದಾರೆ.
ಬಳಿಕ ಯುವಕ ಪೊಲೀಸರಿಗೆ ದೂರು ನೀಡಿದ್ದು, ಎರ್ರಸಾನಿ ವಿಜಯಬಾಬು, ಶೇಖ್ ನಾಗೂರ್ ಮೀರಾವಲಿ, ಕಂಕಿರೇಡ್ಡಿ ಮಾರ್ಕಂಡೆಲು ಮತ್ತು ಮೋಟಾರಿ ಮಣಿಕಂಠ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.