ಕೊಯಮತ್ತೂರು: ಸಂಚಾರ ಉಲ್ಲಂಘನೆ ತಡೆಗಟ್ಟುವ ಮತ್ತು ರಸ್ತೆಯಲ್ಲಿ ಉತ್ತಮ ಕಣ್ಗಾವಲು ಹೊಂದುವ ಉದ್ದೇಶದಿಂದ ಸಂಚಾರ ಪೊಲೀಸ್ ಸಿಬ್ಬಂದಿಗೆ ದೇಹಕ್ಕೆ ಧರಿಸುವ ಅತ್ಯಾಧುನಿಕ ಕ್ಯಾಮೆರಾಗಳನ್ನು ನೀಡಲಾಗಿದೆ.
ಸಂಚಾರ ಸಿಬ್ಬಂದಿಗೆ ಇಲಾಖೆಯಿಂದ 70 ಕ್ಯಾಮೆರಾಗಳನ್ನು ನೀಡಲಾಗಿದ್ದು, ಈ ಕ್ಯಾಮೆರಾಗಳು ಟ್ರಾಫಿಕ್ ಉಲ್ಲಂಘನೆಯನ್ನು ಮತ್ತು ಅಪರಾಧ ಘಟನೆಗಳನ್ನು ಸೆರೆಹಿಡಿಯುವ ಮೂಲಕ ದೃಶ್ಯಗಳನ್ನು ತಕ್ಷಣವೇ ಕಂಟ್ರೋಲ್ ರೂಮ್ ಗೆ ರವಾನಿಸುತ್ತದೆ.
ಮುಂದಿನ ದಿನಗಳಲ್ಲಿ ಇತರ ಪೊಲೀಸ್ ಅಧಿಕಾರಿಗಳಿಗೂ ಇದೇ ರೀತಿಯ ಕ್ಯಾಮೆರಾಗಳನ್ನು ನೀಡುವ ಯೋಜನೆಯಿದೆ ಎಂದು ಕೊಯಮತ್ತೂರು ಪೊಲೀಸ್ ಆಯುಕ್ತ ಸುಮಿತ್ ಸರನ್ ಅಭಿಪ್ರಾಯ ಪಟ್ಟಿದ್ದಾರೆ.