ವಾಷಿಂಗ್ಟನ್: ಕೊರೊನಾ ವಿರುದ್ಧದ ಸಮರಕ್ಕೆ ಬೆಂಬಲ ಸೂಚಿಸಿ ಹಾಲಿವುಡ್ ನಟಿ ಏಂಜಲೀನಾ ಜೂಲಿ 1 ಮಿಲಿಯನ್ ಡಾಲರ್ ಕ್(7 ಕೋಟಿ ರೂ) ಹಣವನ್ನು ದೇಣಿಗೆಯಾಗಿ ನೀಡಿದ್ದಾರೆ. ಕೊರೊನಾ ಹರಡುತ್ತಿರುವ ವೇಳೆ ಯಾವುದೇ ಮಗು ಹಸಿವಿನಿಂದ ನರಳಬಾರದು ಎಂಬ ಕಾರಣಕ್ಕೆ ''ನೊ ಕಿಡ್ ಹಂಗ್ರಿ'' ಎಂಬ ಸಂಘಟನೆಗೆ ಹಣವನ್ನು ದೇಣಿಗೆಯಾಗಿ ನೀಡಿದ್ದಾರೆ.
ಜಗತ್ತಿನಾದ್ಯಂತ ಒಂದು ವಾರದಿಂದ ಕೊರೊನಾ ಕಾರಣಕ್ಕೆ ಕೋಟ್ಯಂತರ ಮಕ್ಕಳು ಶಾಲೆಗಳಿಂದ ಹೊರಗೆ ಉಳಿದಿದ್ದಾರೆ. ಪೋಷಕಾಂಶಗಳಿಗಾಗಿ ಶಾಲೆಗಳನ್ನೇ ಅವಲಂಬಿಸಿದ್ದ ಮಕ್ಕಳು ಈಗ ಗುಣಮಟ್ಟದ ಆಹಾರದಿಂದ ವಂಚಿತವಾಗಿವೆ. ಅಮೆರಿಕವೊಂದರಲ್ಲೇ 22 ಮಿಲಿಯನ್ ಮಕ್ಕಳು ಪೋಷಕಾಂಶಯುಕ್ತ ಆಹಾರವಿಲ್ಲದೇ ನರಳುವಂತಾಗಿದೆ ಎಂದಿರುವ ಅವರು ಯಾವುದೇ ಮಗು ಹಸಿವಿನಿಂದ ನರಳಬಾರದಂತೆ ಕ್ರಮ ಕೈಗೊಳ್ಳಬೇಕಿದೆ ಎಂದು ಜೋಲಿ ಮನವಿ ಮಾಡಿದ್ದಾರೆ.
ಇದಕ್ಕೂ ಮೊದಲು ಹಾಲಿವುಡ್ನ ತಾರೆಗಳಾದ ರಿಹಾನ್ನಾ, ಅರ್ನಾಲ್ಡ್, ರಯಾನ್ ರೆನಾಲ್ಡ್, ಬ್ಲೇಕ್ ಲೈವ್ಲಿ ಮುಂತಾದವರು ಕೊರೊನಾ ವಿರುದ್ಧ ಹೋರಾಟಕ್ಕೆ ವಿವಿಧ ಸಂಘಟನೆಗಳಿಗೆ ದೇಣಿಗೆ ನೀಡಿದ್ದರು. ಅಮೆರಿಕ ಮಾಧ್ಯಮ ದಿಗ್ಗಜರಾದ ಕೈಲಿ ಜೆನ್ನರ್ 1 ಮಿಲಿಯನ್ ಡಾಲರ್ ಅನ್ನು ದೇಣಿಗೆಯಾಗಿ ನೀಡಿದ್ದರು. ಈ ಹಣವನ್ನು ಮಾಸ್ಕ್ ಹಾಗೂ ಇನ್ನಿತರ ಸಾಮಗ್ರಿಗಳನ್ನು ಖರೀದಿಸಲು ಸಂಘಟನೆಯೊಂದು ಬಳಸಿಕೊಂಡಿತ್ತು.