ಬರೋಡ (ಮಧ್ಯಪ್ರದೇಶ): ಕೊರೊನಾ ವೈರಸ್ ಸೃಷ್ಟಿಸಿರುವ ಆತಂಕ ಅಷ್ಟಿಷ್ಟಲ್ಲ. ಜನರು ಮನೆಯಿಂದ ಹೊರಬರದಂತೆ ಹದ್ದಿನ ಕಣ್ಣಿಟ್ಟಿರುವ ಪೊಲೀಸರು ತಾವೂ ಕೂಡಾ ಮನೆಗೆ ಹೋಗದಂತಹ ಪರಿಸ್ಥಿತಿ ಇದೆ.
ಸದಾ ಜನರ ಚಲನವಲನ ಗಮನಿಸಲು ಕರ್ತವ್ಯದಲ್ಲಿ ನಿರತರಾಗಿರುವ ಪೊಲೀಸರು ಮನೆಗೆ ಹೋಗಲೂ ಸಾಧ್ಯವಾಗುತ್ತಿಲ್ಲ. ಸಿಕ್ಕಿರುವ ಸಮಯದಲ್ಲಿ ಮನೆಗೆ ಹೋದರೂ ಮನೆಯೊಳಗೆ ಕಾಲಿಡಲಾಗುತ್ತಿಲ್ಲ. ಎಲ್ಲಿ ಮನೆಯವರಿಗೂ ಸೋಂಕು ತಗುಲುತ್ತೋ ಎಂಬ ಆತಂಕ ಅವರದ್ದು.
ಮಧ್ಯಪ್ರದೇಶದ ಶಯೋಪೂರ್ ಎಸ್ಡಿಒಪಿ ನಿರಂಜನ್ ಸಿಂಹ ಮನೆ ಹೊರಗೆ ಕುಳಿತುಕೊಂಡು ಊಟ ಮಾಡ್ತಿರುವ ಫೋಟೋ ಸುದ್ದಿಯಾಗಿದೆ. ಮಗಳು ಭೂಮಿಕಾ ಮನೆ ಬಾಗಿಲ ಬಳಿ ನಿಂತು ಅಪ್ಪನ ಜೊತೆ ಮಾತನಾಡುತ್ತಿದ್ದಾಳೆ.