ನವದೆಹಲಿ: ಮಹಾಮಾರಿ ಕೊರೊನಾ ವೈರಸ್ ಹಾವಳಿಯಿಂದಾಗಿ ಎಲ್ಲವೂ ಸಂಕಷ್ಟಕ್ಕೊಳಗಾಗಿದೆ. ಇದೀಗ ಎಲ್ಲರ ಆರಾಧ್ಯ ದೈವ ವಿಘ್ನವಿನಾಶಕನಿಗೂ ಇದರ ಶಾಕ್ ತಟ್ಟಿದೆ. ಹೀಗಾಗಿ ಅದ್ಧೂರಿ ಗಣೇಶೋತ್ಸವ ಆಚರಣೆ ಮಾಡಲು ಬ್ರೇಕ್ ಹಾಕಲಾಗಿದೆ.
ದೇಶದಲ್ಲಿ ಕೊರೊನಾ ಅಬ್ಬರ ಜೋರಾಗಿರುವ ಕಾರಣ ಈ ಸಲ ಗಣೇಶೋತ್ಸವ ಪ್ರತಿ ವರ್ಷದಂತೆ ವಿಜೃಂಭಣೆಯಿಂದ ಆಚರಣೆಗೊಳಪಡುವುದು ಸಂದೇಹ. ಹೀಗಾಗಿ ಭಕ್ತರಿಗೆ ಜೂಮ್, ಫೇಸ್ಬುಕ್ ಹಾಗೂ ಗೂಗಲ್ ಮೂಲಕ ತನ್ನ ದರ್ಶನ ನೀಡಲಿದ್ದಾನೆ. ಪ್ರಮುಖವಾಗಿ ದೆಹಲಿ, ಮಹಾರಾಷ್ಟ್ರದಲ್ಲಿ ಈ ನಿರ್ಧಾರ ಜಾರಿಯಾಗಲಿದೆ.
ಸಾರ್ವಜನಿಕ ಸ್ಥಳಗಳಲ್ಲಿ ಗಣಪತಿ ಪ್ರತಿಷ್ಠಾಪಣೆ ಮಾಡುವುದರಿಂದ ಹೆಚ್ಚಿನ ಭಕ್ತರು ಆಗಮಿಸುವ ಸಾಧ್ಯತೆ ದಟ್ಟವಾಗಿರುತ್ತದೆ. ಹೀಗಾಗಿ ಆನ್ಲೈನ್ ಮೂಲಕವೇ ಪೂಜೆ ವೀಕ್ಷಣೆ ಮಾಡಲು ಭಕ್ತರಿಗೆ ಅವಕಾಶ ಮಾಡಿಕೊಡಲಾಗಿದೆ.
ಇದೇ ವಿಚಾರವಾಗಿ ಮಾತನಾಡಿರುವ ಮರಾಠಿ ಮಿತ್ರ ಮಂಡಳಿ, ಗಣೇಶ ಆರಥಿಯನ್ನು ಫೇಸ್ಬುಕ್ ಲೈವ್ನಲ್ಲಿ ಮಾಡಲಾಗುವುದು ಎಂದಿದೆ.