ETV Bharat / bharat

ಹಿಮಾಚಲ ಪ್ರದೇಶದ ಪ್ರವಾಸಿಗರು & ಸ್ಥಳೀಯರಿಗೆ ವರವಾಗಲಿದೆ 'ಅಟಲ್ ಟನಲ್' - ಅಟಲ್ ಟನಲ್ ಲೇಟೆಸ್ಟ್ ನ್ಯೂಸ್

ರೋಹ್ಟಂಗ್​ನಲ್ಲಿ ನಿರ್ಮಾಣವಾಗಿರುವ ಅಟಲ್ ಟನಲ್ ಹಿಮಾಚಲ ಪ್ರದೇಶಕ್ಕೆ ಪ್ರವಾಸಿಗರನ್ನು ಸೆಳೆಯುವುದು ಮಾತ್ರವಲ್ಲದೆ ಸ್ಥಳೀಯ ಜನರಿಗೆ ವರವಾಗಿ ಪರಿಣಮಿಸುವ ಸಾಧ್ಯತೆ ಇದೆ.

Atal Tunnel
ಸ್ಥಳೀಯರಿಗೆ ವರವಾಗಲಿದೆ ಅಟಲ್ ಟನಲ್
author img

By

Published : Oct 3, 2020, 8:14 AM IST

ಶಿಮ್ಲಾ: ಎರಡು ದಶಕಗಳ ಪರಿಶ್ರಮದ ನಂತರ ರೋಹ್ಟಂಗ್​ನಲ್ಲಿ ವಿಶ್ವದ ಅತಿ ಉದ್ದದ ಹೆದ್ದಾರಿಯಾದ ಅಟಲ್ ಸುರಂಗ ಮಾರ್ಗ ಸಂಚಾರಕ್ಕೆ ಸಿದ್ಧವಾಗಿದ್ದು, ಹಿಮಾಚಲ ಪ್ರದೇಶದ ಸ್ಥಳೀಯರಿಗೆ ಮತ್ತು ಪ್ರವಾಸಿಗರ ಸಂತೋಷಕ್ಕೆ ಕಾರಣವಾಗಿದೆ.

ಅಟಲ್ ಸುರಂಗವು ವಿಶ್ವದಲ್ಲಿಯೇ ಅತಿ ಉದ್ದದ ಹೆದ್ದಾರಿಯ ಸುರಂಗವಾಗಿದೆ. 9.02 ಕಿ.ಮೀ. ಉದ್ದದ ಈ ಸುರಂಗ ಮನಾಲಿಯಿಂದ ಲಹೌಲ್ ಸ್ಪಿತಿ ಕಣಿವೆಯನ್ನು ವರ್ಷವಿಡೀ ಸಂಪರ್ಕಿಸಲಿದೆ. ಇದು ಮನಾಲಿ ಮತ್ತು ಲೆಹ್ ನಡುವಿನ ಅಂತರವನ್ನು 46 ಕಿ.ಮೀ. ತಗ್ಗಿಸಲಿದ್ದು, 4ರಿಂದ 5 ಗಂಟೆಗಳ ಸಮಯ ಉಳಿಸಲಿದೆ.

ಈ ಸುರಂಗ ಕೇವಲ ಪ್ರವಾಸೋದ್ಯಮ ಕ್ಷೇತ್ರಕ್ಕೆ ಉತ್ತೇಜನ ನೀಡುವುದು ಮಾತ್ರವಲ್ಲದೆ ಹಿಮಾಚಲ ಪ್ರದೇಶದ ಸ್ಥಳೀಯರ ಜೀವನವನ್ನು ಸುಧಾರಿಸಲಿದೆ.

ಅತಿದೊಡ್ಡ ಫಲಾನುಭವಿಗಳಲ್ಲಿ ಹಿಮಾಚಲ ಪ್ರದೇಶದ ಲಾಹೌಲ್ ಕಣಿವೆ ಕೂಡ ಸೇರಿದೆ. ಮನಾಲಿ-ಲೇಹ್ ಮಾರ್ಗದಲ್ಲಿ ಬರುವ ಲಾಹೌಲ್ ಜಿಲ್ಲೆಯು ಪ್ರವಾಸಿಗರಲ್ಲಿ ಪ್ರಮುಖ ಆಕರ್ಷಣೆಯಾಗಿದ್ದು, ಅದರ ಸುಂದರವಾದ ಪರ್ವತ ಗ್ರಾಮಗಳು, ಹಿಮದಿಂದ ಕೂಡಿದ ಬೆಟ್ಟಗಳು, ಬೃಹತ್ ಹಿಮ ನದಿಗಳು, ಎತ್ತರದ ಹಾದಿಗಳು ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತವೆ.

ಪ್ರವಾಸೋದ್ಯಮಕ್ಕೆ ಸಹಕಾರಿಯಾಗಲಿದೆ ಸುರಂಗ

ಈ ಮೊದಲು ಮನಾಲಿಗೆ ಭೇಟಿ ನೀಡುವ ಪ್ರವಾಸಿಗರು ಬೇಸಿಗೆಯ ದಿನಗಳಲ್ಲಿ ಮಾತ್ರ ಸುಂದರವಾದ ಲಾಹೌಲ್ ಕಣಿವೆಗೆ ಭೇಟಿ ನೀಡಬಹುದಿತ್ತು. ಆ ತಿಂಗಳುಗಳಲ್ಲಿಯೂ ಸಹ ಲಹೌಲ್ ಕಣಿವೆಯ ಜಿಲ್ಲಾ ಕೇಂದ್ರ ಕಚೇರಿಯಾದ ಮನಾಲಿ ನಗರ ಮತ್ತು ಕೀಲಾಂಗ್ ನಡುವಿನ 115 ಕಿ.ಮೀ. ದೂರವನ್ನು ಕ್ರಮಿಸಲು 6-7 ಗಂಟೆಗಳ ಕಾಲ ರಸ್ತೆ ಮೂಲಕ ಪ್ರಯಾಣ ಮಾಡಬೇಕಿತ್ತು.

ಸುರಂಗವು ಲೋಕಾರ್ಪಣೆಗೊಂಡ ನಂತರ ಮನಾಲಿಯಿಂದ ಪ್ರವಾಸಿಗರು ಕೇವಲ 2 ಗಂಟೆಗಳಲ್ಲಿ ಲಾಹೌಲ್ ಕಣಿವೆಯನ್ನು ತಲುಪಬಹುದು. ಒಂದು ಬದಿಯ ಪ್ರಯಾಣದ ಸಮಯವನ್ನು 4-5 ಗಂಟೆಗಳವರೆಗೆ ಕಡಿತಗೊಳಿಸಬಹುದು. ವರ್ಷದುದ್ದಕ್ಕೂ ಸುಲಭ ಪ್ರಯಾಣಕ್ಕೆ ಸುರಂಗ ಸಹಕಾರಿಯಾಗಲಿದೆ. ಈ ಹಿಂದೆ ರೋಹ್ಟಾಂಗ್ ಪಾಸ್ ನವೆಂಬರ್ ಮತ್ತು ಮೇ ನಡುವೆ ಸಂಪೂರ್ಣವಾಗಿ ಹಿಮದಿಂದ ಆವರಿಸಲ್ಪಡುತ್ತಿದ್ದ ಕಾರಣ 6 ತಿಂಗಳು ಬಂದ್ ಮಾಡಲಾಗುತ್ತಿತ್ತು.

ಈ ಸುರಂಗ ಈಗ ಸಾಕಷ್ಟು ಪ್ರವಾಸಿಗರಿಗೆ ಮನಾಲಿಯಿಂದ ಲಾಹೌಲ್‌ಗೆ ಪ್ರತೀ ದಿನ ಪ್ರವಾಸಕ್ಕೆ ಆಗಮಿಸುವವರಿಗೆ ಸಹಕಾರಿಯಾಗುವ ಕಾರಣ ಎರಡೂ ಜಿಲ್ಲೆಗಳಿಗೂ ಆರ್ಥಿಕವಾಗಿ ಸಹಕಾರಿಯಾಗಲಿದೆ.

ಹಿಮಾಚಲ ಪ್ರದೇಶ ಸರ್ಕಾರವು ಒಂದು ವರ್ಷದಲ್ಲಿ ಎರಡು ಕೋಟಿ ಪ್ರವಾಸಿಗರು ಭೇಟಿ ಮಾಡುವ ಗುರಿಯನ್ನು ಹೊಂದಿದೆ. ಲಹೌಲ್ ಕಣಿವೆ ವರ್ಷಪೂರ್ತಿ ವಿಶ್ವದ ಇತರ ಭಾಗಗಳೊಂದಿಗೆ ಸಂಪರ್ಕ ಹೊಂದಿದ ನಂತರ ಪ್ರವಾಸಿಗರ ಸಂಖ್ಯೆ ಗಮನಾರ್ಹವಾಗಿ ಹೆಚ್ಚಾಗುತ್ತದೆ ಎಂಬ ನಿರೀಕ್ಷೆ ಇದೆ.

ಇದಲ್ಲದೆ ಅದ್ಭುತ ಎಂಜಿನಿಯರಿಂಗ್ ವರ್ಕ್​​ನೊಂದಿಗೆ ಸಿದ್ಧವಾಗಿರುವ ಅಟಲ್ ಸುರಂಗವು ಸ್ವತಃ ಆಕರ್ಷಣೆಯಾಗಬಹುದು ಮತ್ತು ಮನಾಲಿಗೆ ಹೆಚ್ಚಿನ ಪ್ರವಾಸಿಗರನ್ನು ಸೆಳೆಯಬಹುದು.

ಸುರಂಗದಿಂದ ಸ್ಥಳೀಯರಿಗೂ ಲಾಭ:

ಪ್ರವಾಸೋದ್ಯಮ ಕ್ಷೇತ್ರವು ಪ್ರವರ್ಧಮಾನಕ್ಕೆ ಬರುತ್ತಿರುವುದು ಸ್ಥಳೀಯ ನಾಗರಿಕರ ಅದೃಷ್ಟವನ್ನೂ ಸಹ ಬದಲಿಸಲಿದೆ. ಮನಾಲಿ ಈಗಾಗಲೇ ರಾಜ್ಯದ ಅತ್ಯುತ್ತಮ ಪ್ರವಾಸೋದ್ಯಮ ತಾಣವಾಗಿದೆ. ಖಾಸಗಿ ಹೋಟೆಲ್‌ಗಳು ಮತ್ತು ರೆಸಾರ್ಟ್‌ಗಳಂತಹ ಪ್ರವಾಸಿ ಸಂಬಂಧಿತ ವ್ಯವಹಾರಗಳಲ್ಲಿ ಹೆಚ್ಚಿನ ಜನ ತೊಡಗಿಕೊಂಡಿದ್ದಾರೆ. ಪ್ರವಾಸಿಗರ ಸಂಖ್ಯೆಯಲ್ಲಿನ ಹೆಚ್ಚಳವು ಸ್ಥಳೀಯ ಆರ್ಥಿಕತೆಯನ್ನು ಹೆಚ್ಚಿಸುತ್ತದೆ. ಗಮನಾರ್ಹವಾಗಿ ಪ್ರವಾಸೋದ್ಯಮವು ಪ್ರಸ್ತುತ ಹಿಮಾಚಲ ಪ್ರದೇಶದ ಒಟ್ಟಾರೆ ಜಿಡಿಪಿಗೆ 6.9ರಷ್ಟು ಕೊಡುಗೆ ನೀಡುತ್ತದೆ.

ಅಲ್ಲದೆ ಲಾಹೌಲ್‌ನ ಆಲೂಗಡ್ಡೆ ಮತ್ತು ಇತರ ಸ್ಥಳೀಯ ಉತ್ಪನ್ನಗಳು ಈಗ ರಾಜ್ಯದ ಇತರ ಭಾಗಗಳಲ್ಲಿನ ಮಾರುಕಟ್ಟೆಗಳನ್ನು ಸುಲಭವಾಗಿ ತಲುಪುತ್ತವೆ. ಇದು ಜಿಲ್ಲೆಯ ರೈತರು ಮತ್ತು ವ್ಯಾಪಾರಿಗಳಿಗೆ ದೊಡ್ಡ ವರವಾಗಿದೆ. ಕೇವಲ ಸಾರಿಗೆ ವೆಚ್ಚದಲ್ಲಿ ಕೋಟ್ಯಂತರ ರೂಪಾಯಿಗಳನ್ನು ಉಳಿಸುವುದಲ್ಲದೆ ಸರಕುಗಳು ಸಮಯಕ್ಕೆ ಸರಿಯಾಗಿ ನಿರ್ದಿಷ್ಟ ಸ್ಥಳ ತಲುಪಲಿವೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.