ETV Bharat / bharat

ಅಸ್ಸೋಂನ ನಾಲ್ಕು ಜಿಲ್ಲೆಗಳಲ್ಲಿ ತಗ್ಗಿದ ನೀರಿನ ಮಟ್ಟ: ಸುಧಾರಿಸಿದ ಪ್ರವಾಹ ಪರಿಸ್ಥಿತಿ

ತೀವ್ರ ಪ್ರವಾಹಕ್ಕೀಡಾಗಿದ್ದ ಈಶಾನ್ಯ ರಾಜ್ಯ ಅಸ್ಸೋಂನ ನಾಲ್ಕು ಜಿಲ್ಲೆಗಳ ನೀರಿನ ಮಟ್ಟ ಸದ್ಯ ತಗ್ಗಿದ್ದು, ಪ್ರವಾಹ ಪರಿಸ್ಥಿತಿ ಸುಧಾರಿಸಿದೆ. ಪ್ರಸ್ತುತ ಆರು ಜಿಲ್ಲೆಗಳಲ್ಲಿ 10,000 ಕ್ಕೂ ಹೆಚ್ಚು ಜನರು ಮತ್ತು 5,375 ಹೆಕ್ಟೇರ್ ಬೆಳೆ ಭೂಮಿ ಹಾನಿಗೀಡಾಗಿದೆ ಎಂದು ಸರ್ಕಾರ ತಿಳಿಸಿದೆ.

author img

By

Published : Aug 8, 2020, 6:38 PM IST

Assam flood situation improves further; over 10,000 affected
ಅಸ್ಸಾಂ ನ ನಾಲ್ಕು ಜಿಲ್ಲೆಗಳಲ್ಲಿ ತಗ್ಗಿದ ನೀರಿನ ಮಟ್ಟ: ಸುಧಾರಿಸಿದ ಪ್ರವಾಹ ಪರಿಸ್ಥಿತಿ

ಗುವಾಹಟಿ (ಅಸ್ಸೋಂ): ತೀವ್ರ ಪ್ರವಾಹಕ್ಕೀಡಾಗಿದ್ದ ಇಲ್ಲಿನ ನಾಲ್ಕೂ ಜಿಲ್ಲೆಗಳ ನೀರಿನ ಮಟ್ಟ ಸದ್ಯ ತಗ್ಗಿದ್ದು, ಪ್ರವಾಹ ಪರಿಸ್ಥಿತಿ ಸುಧಾರಿಸಿದೆ. ಪ್ರಸ್ತುತ ಆರು ಜಿಲ್ಲೆಗಳಲ್ಲಿ 10,000 ಕ್ಕೂ ಹೆಚ್ಚು ಜನರು ಮತ್ತು 5,375 ಹೆಕ್ಟೇರ್ ಬೆಳೆಭೂಮಿ ಹಾನಿಗೀಡಾಗಿದೆ ಎಂದು ಸರ್ಕಾರದ ಬುಲೆಟಿನ್ ತಿಳಿಸಿದೆ.

ಗುರುವಾರದಿಂದ ಬೊಂಗೈಗಾಂವ್, ಗೋಲ್ಪಾರ, ಕಮ್ರೂಪ್ ಮತ್ತು ನಾಗಾನ್ ಜಿಲ್ಲೆಗಳ ನಂದಿಗಳಿಂದ ಪ್ರವಾಹ ಬಂದಿದ್ದು, 10 ಜಿಲ್ಲೆಗಳ 177 ಹಳ್ಳಿಗಳಲ್ಲಿನ 84,100 ಜನರು ಹಾನಿಗೊಳಗಾಗಿದ್ದಾರೆ. ಅದರಲ್ಲೂ ಗೋಲ್ಪಾರ ಕಳೆದ ಹಲವು ದಿನಗಳಿಂದ ಹೆಚ್ಚು ಹಾನಿಗೊಳಗಾದ ಜಿಲ್ಲೆಯಾಗಿದೆ.

ಅಸ್ಸೋಂ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ(ಎಎಸ್‌ಡಿಎಂಎ) ತನ್ನ ಬುಲೆಟಿನ್‌ನಲ್ಲಿ ಸದ್ಯಕ್ಕೆ ಧೇಮಾಜಿ, ಬಕ್ಸಾ, ಚಿರಾಂಗ್, ಕೊಕ್ರಜಾರ್, ಕಮ್ರೂಪ್ ಮೆಟ್ರೋಪಾಲಿಟನ್ ಮತ್ತು ಮೊರಿಗಾಂವ್ ಜಿಲ್ಲೆಗಳು ಮಾತ್ರವೇ ಪ್ರವಾಹಕ್ಕೀಡಾಗಿವೆ ಎಂದು ತಿಳಿಸಿದೆ.

ಪ್ರವಾಹ ಪರಿಸ್ಥಿತಿಯ ಸುಧಾರಣೆಯೊಂದಿಗೆ, ಕೇವಲ ಎರಡು ಜಿಲ್ಲಾಡಳಿತ ಮಾತ್ರ ಒಂದೆರಡು ಪರಿಹಾರ ಶಿಬಿರಗಳು ಮತ್ತು ವಿತರಣಾ ಕೇಂದ್ರಗಳನ್ನು ನಡೆಸುತ್ತಿದ್ದು, ಅಲ್ಲಿ ಪ್ರಸ್ತುತ 201 ಜನರು ವಾಸಿಸುತ್ತಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.