ಮಚಿಲಿಪಟ್ನಂ(ಆಂಧ್ರ ಪ್ರದೇಶ): ಎಪಿ ಸಾರಿಗೆ ಸಚಿವ ಮತ್ತು ಸ್ಥಳೀಯ ಶಾಸಕ ಪೆರ್ನಿ ವೆಂಕಟರಾಮಯ್ಯ ಮತ್ತು ಆತನ ಬೆಂಬಲಿಗರು ಒರ್ವ ಆಶಾಕಾರ್ಯಕರ್ತೆಗೆ ಕಿರುಕುಳ ನೀಡಿರುವ ಆರೋಪ ಕೇಳಿ ಬಂದಿದ್ದು, ಆಕೆ ಮಾತ್ರೆ ಸೇವಿಸಿ ಅತ್ಮಹತ್ಯೆಗೆ ಪ್ರಯತ್ನಿಸಿದ್ದಾಳೆಂದು ಪೊಲೀಸರು ಶನಿವಾರ ಮಾಹಿತಿ ನೀಡಿದ್ದಾರೆ.
ಆತ್ಮಹತ್ಯೆಗೆ ಯತ್ನಿಸಿರುವ ಆಶಾ ಕಾರ್ಯಕರ್ತೆ ಜಯಲಕ್ಷ್ಮಿ ಎಂಬಾಕೆಯನ್ನು ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದು, ಸದ್ಯ ಆಕೆ ಚೇತರಿಸಿಕೊಳ್ಳುತ್ತಿದ್ದಾಳೆ ಎನ್ನಲಾಗಿದೆ. ಲಕ್ಷ್ಮಿ ಪತ್ರವೊಂದನ್ನು ಬರೆದಿಟ್ಟಿದ್ದು, ಸಚಿವ ಪೆರ್ನಿ ವೆಂಕಟರಾಮಯ್ಯ ಮತ್ತು ಆತನ ಬೆಂಬಲಿಗ ಎಂ.ತುಳಸಿ ಅವರು ಕಿರುಕುಳ ನೀಡಿರುವುದಾಗಿ ಪತ್ರದಲ್ಲಿ ಆರೋಪಿಸಿದ್ದಾಳೆ.
ಪೊಲೀಸ್ ವರಿಷ್ಠಾಧಿಕಾರಿ ಎಂ.ರವೀಂದ್ರಂತ್ ಬಾಬು, ಲಕ್ಷೀ ಬರೆದಿರುವ ಪತ್ರವನ್ನು ನಾವು ವಿಧಿ ವಿಜ್ಞಾನ ಪರೀಕ್ಷೆಗೆ ಕಳುಹಿಸಿದ್ದೇವೆ. ಅವರ ಹೇಳಿಕೆಯನ್ನು ನೇರವಾಗಿ ನೋಂದಾಯಿಸುವುದರ ಮೂಲಕ ವಿಷಯ ಖಚಿತಪಡಿಸಿಕೊಂಡು ತನಿಖೆ ಮುಂದುವರೆಸುತ್ತೇವೆ. ಸದ್ಯ ಮಚಿಲಿಪಟ್ನಂ ಪಟ್ಟಣದ ಇನಾಗುಡುರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಹೇಳಿದ್ದಾರೆ.