ETV Bharat / bharat

ಭಾರತದ ಕೋವಿಡ್ ಲಸಿಕೆ ಫೈನಲ್: ಜಗತ್ತಿನ ಇತರ ಲಸಿಕೆಗಳ ಸಂಪೂರ್ಣ ವಿವರ ಇಲ್ಲಿದೆ..

ಸೆರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ ಮತ್ತು ಭಾರತ್ ಬಯೋಟೆಕ್‌ನ ಲಸಿಕೆಗಳನ್ನು ತುರ್ತು ಪರಿಸ್ಥಿತಿಯಲ್ಲಿ ನಿರ್ಬಂಧಿತ ಬಳಕೆಗೆ ಅನುಮತಿ ನೀಡುವ ಮೂಲಕ ಕೋವಿಡ್​ ವಿರುದ್ಧದ ಸಮರದಲ್ಲಿ ಭಾರತ ಮಹತ್ತರ ಮೈಲುಗಲ್ಲು ಸಾಧಿಸಿದೆ. ಈ ಮೂಲಕ ವಿಶ್ವದ ಮುಂದುವರೆದ ರಾಷ್ಟ್ರಗಳ ಪಟ್ಟಿಯಲ್ಲಿ ಭಾರತವೂ ಸ್ಥಾನ ಪಡೆದಿದೆ. ಭಾರತ, ಅಮೆರಿಕ ಮಾತ್ರವಲ್ಲದೆ, ವಿಶ್ವದ ಹಲವು ರಾಷ್ಟ್ರಗಳು ಕೋವಿಡ್ ಲಸಿಕೆ ಅಭಿವೃದ್ದಿಯಲ್ಲಿ ಶ್ರಮಿಸುತ್ತಿವೆ. ಆ ರಾಷ್ಟ್ರಗಳು ಯಾವುವು? ಅವುಗಳು ಅಭಿವೃದ್ದಿಪಡಿಸುತ್ತಿರುವ ಲಸಿಕೆಗಳ ಬಗೆಗಿನ ಸಂಪೂರ್ಣ ಮಾಹಿತಿ ಇಲ್ಲಿದೆ.

author img

By

Published : Jan 3, 2021, 5:36 PM IST

As India Clears Two Vaccines
ಕೋವಿಡ್ ಲಸಿಕೆಗೆ ಅನುಮೋದನೆ ನೀಡಿದ ಭಾರತ

ನವದೆಹಲಿ : ಆಕ್ಸ್‌ಫರ್ಡ್ ವಿಶ್ವವಿದ್ಯಾಲಯ ಮತ್ತು ಅಸ್ಟ್ರಾಜೆನೆಕಾ ಅಭಿವೃದ್ಧಿಪಡಿಸಿದ ಕೊರೊನಾ ಲಸಿಕೆ 'ಕೋವಿಶೀಲ್ಡ್' ಗೆ ಅನುಮೋದನೆ ನೀಡಿದ ನಾಲ್ಕನೇ ರಾಷ್ಟ್ರವಾಗಿ ಭಾರತ ಹೊರಹೊಮ್ಮಿದೆ. ಈ ಮೂಲಕ ಅತೀ ಹೆಚ್ಚು ಕೋವಿಡ್ ಸೋಂಕು ವರದಿಯಾದ ವಿಶ್ವದ ಎರಡನೇ ರಾಷ್ಟ್ರದಲ್ಲಿ ಮುಂಬರುವ ದಿನಗಳಲ್ಲಿ ಕೋವಿಡ್​ ಲಸಿಕೆ ವಿತರರಣೆ ಅಧಿಕೃತವಾಗಿದೆ. ವಿಶ್ವದಾದ್ಯಂತ 1.8 ಮಿಲಿಯನ್ ಜನರನ್ನು ಬಲಿ ಪಡೆದ ಮಹಾಮಾರಿ ಕೋವಿಡ್​ಗೆ ಇತಿಶ್ರಿ ಹಾಡಲು ಭಾರತ ಸಜ್ಜಾಗಿದೆ.

ಮೊದಲು ಅನುಮೋದನೆ ಪಡೆದವರು ಯಾರು?

ಯುಎಸ್​ನ ಔಷಧಿ ತಯಾರಕ ಕಂಪನಿ ಫೈಝರ್​ ಮತ್ತು ಜರ್ಮನ್​ನ ಪಾಲುದಾರ ಬಯೋಎನ್​ಟೆಕ್ ಕೋವಿಡ್ ಲಸಿಕೆಗೆ ಅನುಮೋದನೆ ಪಡೆದ ಮೊಟ್ಟ ಮೊದಲ ಸಂಸ್ಥೆಗಳಾಗಿವೆ. 18 ನವೆಂಬರ್ 2020 ರಂದು ಈ ಸಂಸ್ಥೆಗಳು ಕೋವಿಡ್ ಲಸಿಕೆಯ ಕೊನೆಯ ಹಂತದ ಪ್ರಾಯೋಗಿಕ ಡೇಟಾವನ್ನು ಬಿಡುಗಡೆ ಮಾಡಿದವು. ಡಿಸೆಂಬರ್ 3 ರಂದು ತುರ್ತು ಬಳಕೆಗಾಗಿ ಬ್ರಿಟನ್ ಮೊದಲ ಬಾರಿಗೆ ಅನುಮೋದನೆ ನೀಡಿತು. ನಂತರ ಡಿಸೆಂಬರ್ 9 ರಂದು ಕೆನಡಾ ಮತ್ತು ಡಿಸೆಂಬರ್ 11 ರಂದು ಯುಎಸ್ ಫುಡ್ ಅಂಡ್ ಡ್ರಗ್ ಅಡ್ಮಿನಿಸ್ಟ್ರೇಷನ್ ( ಎಫ್​ಡಿಎ) ಸೌದಿ ಅರೇಬಿಯಾ ಮತ್ತು ಮೆಕ್ಸಿಕೊ ಸೇರಿದಂತೆ ಹಲವಾರು ದೇಶಗಳು ಕೂಡ ಇದನ್ನು ಅನುಮೋದಿಸಿದೆ.

ಯುರೋಪಿಯನ್ ಮೆಡಿಸಿನ್ಸ್ ಏಜೆನ್ಸಿ (ಇಎಂಎ) ಡಿಸೆಂಬರ್ 21 ರಂದು ಫೈಝರ್​ ಲಸಿಕೆಗೆ ಅನುಮೋದನೆ ನೀಡಿದೆ. ಭಾರತದಲ್ಲಿ ಫೈಝರ್​ ಲಸಿಕೆ ಇನ್ನೂ ಪರಿಶೀಲನೆಯ ಹಂತದಲ್ಲಿದೆ. ವಿಶ್ವ ಆರೋಗ್ಯ ಸಂಸ್ಥೆ ಕಳೆದ ಗುರುವಾರ ಪೈಝರ್​ ಲಸಿಕೆಯನ್ನು ತುರ್ತು ಬಳಕೆಗಾಗಿ ಅನುಮೋದನೆ ನೀಡಿದೆ.

ಮಾಡರ್ನಾ ಲಸಿಕೆ ಏನಾಯ್ತು?

ನವೆಂಬರ್ 30 ರಂದು ಕೊನೆಯ ಹಂತದ ಪ್ರಯೋಗದ ದತ್ತಾಂಶ ಬಿಡುಗಡೆ ಮಾಡಿರುವ ಮಾಡರ್ನಾ ಸಂಸ್ಥೆಯ ಲಸಿಕೆ, ಅನೇಕ ದೇಶಗಳಲ್ಲಿ ಫೈಝರ್​ ಬಳಿಕ ಎರಡನೆ ಲಸಿಕೆಯಾಗಿ ಪರಿಗಣಿಸಲ್ಪಟ್ಟಿದೆ. ಈ ಲಸಿಕೆ ಕೋವಿಡ್​ ತಡೆಗಟ್ಟುವಲ್ಲಿ ಶೇ. 94.1 ರಷ್ಟು ಪರಿಣಾಮಕಾರಿತ್ವವನ್ನು ತೋರಿಸಿದೆ ಎಂದು ತಿಳಿದು ಬಂದಿದೆ. ಡಿಸೆಂಬರ್ 19 ರಂದು ಯುಎಸ್​ ಮಾಡರ್ನಾ ಲಸಿಕೆಯನ್ನು ಅಧಿಕೃತಗೊಳಿಸಿದರೆ, ಕೆನಡಾ ಡಿಸೆಂಬರ್ 23 ರಂದು ಅನುಮೋದನೆ ನೀಡಿದೆ ಮತ್ತು ಯುರೋಪಿಯನ್ ಮೆಡಿಸಿನ್ಸ್ ಏಜೆನ್ಸಿ (ಇಎಂಎ) ಜನವರಿ 6 ರಂದು ಅನುಮೋದನೆ ನೀಡುವ ಸಾಧ್ಯತೆಯಿದೆ.

ಅಸ್ಟ್ರಾಜೆನೆಕಾ :

ಅಸ್ಟ್ರಾಜೆನೆಕಾದ ಕೋವಿಶೀಲ್ಡ್ ಲಸಿಕೆಗೆ ಭಾರತ ಅನುಮೋದನೆ ನೀಡಿದ್ದು, ಬ್ರಿಟನ್, ಅರ್ಜೆಂಟೀನಾ ಮತ್ತು ಎಲ್ ಸಾಲ್ವಡಾರ್​ ದೇಶಗಳು ಈ ಲಸಿಕೆಯನ್ನು ಅನುಮೋದಿಸಿದೆ. ಆದರೆ, ಈ ಲಸಿಕೆಯ ಪ್ರಾಯೋಗಿಕ ದತ್ತಾಂಶಗಳಲ್ಲಿನ ಗೊಂದಲಗಳು ಅನುಮೋದನೆ ಪ್ರಕ್ರಿಯೆಯನ್ನು ಸಂಕೀರ್ಣಗೊಳಿಸಿವೆ.

ರಷ್ಯಾ ಮತ್ತು ಚೀನಾದ ಲಸಿಕೆಗಳು ಏನಾಯ್ತು..?

ರಷ್ಯಾ ಮತ್ತು ಚೀನಾ ಕೂಡ ತನ್ನ ನಾಗರಿಕರಿಗೆ ತಮ್ಮದೇ ಆದ ಲಸಿಕೆ ಅಭಿವೃದ್ದಿಪಡಿಸಿವೆ.

ಡಿಸೆಂಬರ್ 31 ರಂದು ಚೀನಾ ತನ್ನ ಮೊದಲ ಕೋವಿಡ್​-19 ಲಸಿಕೆಯನ್ನು ಸಾಮಾನ್ಯ ಸಾರ್ವಜನಿಕ ಬಳಕೆಗಾಗಿ ಅನುಮೋದಿಸಿತು. ಇದನ್ನು ಸರ್ಕಾರಿ ಸಂಸ್ಥೆ ಸಿನೋಫಾರ್ಮ್‌ನ ಅಂಗಸಂಸ್ಥೆ ಅಭಿವೃದ್ಧಿಪಡಿಸಿದೆ. ಇದು ವೈರಸ್ ವಿರುದ್ಧ ಶೇ. 79ರಷ್ಟು ಪರಿಣಾಮಕಾರಿ ಎಂದು ಕಂಪನಿ ಹೇಳಿದೆ.

ಗಮಲೇಯ ಇನ್ಸ್ಟಿಟ್ಯೂಟ್ ಅಭಿವೃದ್ಧಿಪಡಿಸಿದ ಸ್ಪುಟ್ನಿಕ್ ವಿ ಲಸಿಕೆ ಕೊನೆಯ ಹಂತದ ಪ್ರಯೋಗ ಫಲಿತಾಂಶಗಳ ಆಧಾರದ ಮೇಲೆ ಶೇ. 91.4 ರಷ್ಟು ಪರಿಣಾಮಕಾರಿಯಾಗಿದೆ ಎಂದು ನವೆಂಬರ್ 24 ರಂದು ರಷ್ಯಾ ಹೇಳಿದೆ. ಇದು ಆಗಸ್ಟ್‌ನಲ್ಲಿ ಲಸಿಕೆ ಅಭಿವೃದ್ದಿಪಡಿಸಲು ಪ್ರಾರಂಭಿಸಿತು ಮತ್ತು ಇದುವರೆಗೆ ಒಂದು ಲಕ್ಷಕ್ಕೂ ಹೆಚ್ಚು ಜನರಿಗೆ ಲಸಿಕೆ ವಿತರಿಸಿದೆ.

ಮುಂದಿನ ವರ್ಷ 300 ಮಿಲಿಯನ್ ಡೋಸ್ ಸ್ಪುಟ್ನಿಕ್ ವಿ ತಯಾರಿಸಲು ಭಾರತ ಯೋಜನೆ ರೂಪಿಸಿದೆ. ಅರ್ಜೆಂಟೀನಾ ಸ್ಪುಟ್ನಿಕ್ ವಿ ಲಸಿಕೆ ಲಸಿಕೆಯ ಬಳಕೆಗೆ ಗ್ರೀನ್ ಸಿಗ್ನಲ್ ನೀಡಿದ್ದು, ಸುಮಾರು 24 ಸಾವಿರ ಡೋಸ್‌ ಲಸಿಕೆ ಡಿಸೆಂಬರ್ 24 ರಂದು ದೇಶಕ್ಕೆ ಆಗಮಿಸಿವೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.