ನವದೆಹಲಿ: ದೆಹಲಿ ವಿಧಾನಸಭೆಯಲ್ಲಿ ಆಮ್ ಆದ್ಮಿ ಮತ್ತೊಮ್ಮೆ ಭರ್ಜರಿ ಗೆಲುವು ದಾಖಲು ಮಾಡಿದ್ದು, ಅರವಿಂದ್ ಕೇಜ್ರಿವಾಲ್ ಹ್ಯಾಟ್ರಿಕ್ ಗೆಲುವು ದಾಖಲು ಮಾಡುವ ಮೂಲಕ ಮತ್ತೊಂದು ಅವಧಿಗೆ ಸರ್ಕಾರ ರಚನೆ ಮಾಡಲು ಸಜ್ಜಾಗಿದ್ದಾರೆ.
-
Aam Aadmi Party (AAP) chief Arvind Kejriwal to take oath as the Chief Minister of Delhi on 16th February, at Ramlila Maidan. pic.twitter.com/gABczDBoCw
— ANI (@ANI) February 12, 2020 " class="align-text-top noRightClick twitterSection" data="
">Aam Aadmi Party (AAP) chief Arvind Kejriwal to take oath as the Chief Minister of Delhi on 16th February, at Ramlila Maidan. pic.twitter.com/gABczDBoCw
— ANI (@ANI) February 12, 2020Aam Aadmi Party (AAP) chief Arvind Kejriwal to take oath as the Chief Minister of Delhi on 16th February, at Ramlila Maidan. pic.twitter.com/gABczDBoCw
— ANI (@ANI) February 12, 2020
ಇಂದು ಬೆಳಗ್ಗೆ ಲೆಫ್ಟಿನೆಂಟ್ ಗವರ್ನರ್ ಭೇಟಿ ಮಾಡಿ ಸರ್ಕಾರ ರಚನೆ ಮಾಡಲು ಕೇಜ್ರಿವಾಲ್ ಸಮಯಾವಕಾಶ ಕೇಳಿದ್ದು, ಅದರ ಪ್ರಕಾರ ಫೆಬ್ರವರಿ 16ರಂದು ರಾಮಲೀಲಾ ಮೈದಾನದಲ್ಲಿ ಕೇಜ್ರಿವಾಲ್ ಸಿಎಂ ಆಗಿ ಮತ್ತೊಂದು ಅವಧಿಗೆ ಪ್ರಮಾಣ ವಚನ ಸ್ವೀಕಾರ ಮಾಡಲಿದ್ದಾರೆ.
ಇಂದು ಮಧ್ಯಾಹ್ನ ಕೇಜ್ರಿವಾಲ್ ಮನೆಯಲ್ಲಿ ಹೊಸದಾಗಿ ಶಾಸಕರಾಗಿ ಆಯ್ಕೆಗೊಂಡಿರುವ ಎಎಪಿ ಶಾಸಕರೊಂದಿಗೆ ಸಭೆ ನಡೆಯಲಿದ್ದು, ಈ ವೇಳೆ, ನೂತನ ಶಾಸಕಾಂಗ ಪಕ್ಷದ ಅಭ್ಯರ್ಥಿಯ ಆಯ್ಕೆ ನಡೆಯಲಿದೆ. 70 ಕ್ಷೇತ್ರಗಳ ದೆಹಲಿ ವಿಧಾನಸಭೆಯಲ್ಲಿ ಆಮ್ ಆದ್ಮಿ ಪಕ್ಷ 62 ಸ್ಥಾನ ಹಾಗೂ ಬಿಜೆಪಿ 8 ಸ್ಥಾನಗಳಲ್ಲಿ ಗೆಲುವು ದಾಖಲು ಮಾಡಿವೆ. ಕಾಂಗ್ರೆಸ್ ಯಾವುದೇ ಸ್ಥಾನದಲ್ಲೂ ಗೆಲುವು ಸಾಧನೆ ಮಾಡದೇ ಮುಖಭಂಗಕ್ಕೊಳಗಾಗಿದೆ.