ETV Bharat / bharat

ನರ್ಸ್​​ ಜೊತೆ ಅನೈತಿಕ ಸಂಬಂಧ ಹೊಂದಿದ್ದ ಕರ್ನಲ್​​ ವಿರುದ್ಧ ಕ್ರಮ ಕೈಗೊಂಡ ಸೇನೆ

ಭಾರತೀಯ ಸೇನೆಗೆ ಸೇರಿದ ಆಸ್ಪತ್ರೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ದಾದಿ ಜೊತೆ ಅಕ್ರಮ ಸಂಬಂಧ ಹೊಂದಿದ್ದ ಕರ್ನಲ್ ವೊಬ್ಬರನ್ನು ಸೇವೆಯನ್ನು ಮೊಟಕುಗೊಳಿಸಲಾಗಿದೆ.

Representative Image
ಸಾಂದರ್ಭಿಕ ಚಿತ್ರ
author img

By

Published : Feb 13, 2020, 8:15 PM IST

ನವದೆಹಲಿ: ಭಾರತೀಯ ಸೇನೆಗೆ ಸೇರಿದ ಆಸ್ಪತ್ರೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ದಾದಿ ಜೊತೆ ಅಕ್ರಮ ಸಂಬಂಧ ಹೊಂದಿದ್ದ ಕರ್ನಲ್ ವೊಬ್ಬರನ್ನು ಸೇವೆಯನ್ನು ಮೊಟಕುಗೊಳಿಸಲಾಗಿದೆ.

ನಿವೃತ್ತರಾದರೂ ಭಾರತೀಯ ಸೇನಾ ಕಾಯ್ದೆ ಸೆಕ್ಷನ್ 123ರ ಅನ್ವಯ ಕಾರ್ಯ ನಿರ್ವಹಿಸುತ್ತಿದ್ದ ಕರ್ನಲ್​ ಅವರ ಸೇವೆಯನ್ನು ತಕ್ಷಣದಿಂದಲೇ ಜಾರಿಗೆಬರುವಂತೆ ಮೊಟಕುಗೊಳಿಸಿ ಪ್ರಕರಣ ಸಂಬಂಧ ತನಿಖೆಗೆ ಆದೇಶಿಸಲಾಗಿದೆ.

ಶಿಕ್ಷೆಗೆ ಗುರಿಯಾಗಿರುವ ಕರ್ನಲ್,​ ಸೇನಾ ಆಸ್ಪತ್ರೆಯಲ್ಲಿನ ದಾದಿಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದರು ಎನ್ನಲಾಗಿದೆ. ಈ ಬಗ್ಗೆ ಸೇನೆಯಲ್ಲಿದ್ದ ಸೈನಿಕರೇ ರಕ್ಷಣಾ ಸಚಿವ ರಾಜನಾಥ್​​ ಸಿಂಗ್​ಗೆ ಈ ಹಿಂದೆ ಪತ್ರ ಬರೆದಿದ್ದರು.

ಇನ್ನು ಕರ್ನಲ್,​ ದಾದಿಯೊಂದಿಗೆ ಆಪ್ತವಾಗಿದ್ದ ದೃಶ್ಯಗಳನ್ನೂ ಚಿತ್ರೀಕರಿಸಿ ಪತ್ರದೊಂದಿಗೆ ರಕ್ಷಣಾ ಸಚಿವರಿಗೆ ದೂರು ಪತ್ರದೊಂದಿಗೆ ಕಳುಹಿಸಲಾಗಿತ್ತು.

ಈ ಬಗ್ಗೆ ಮಾತನಾಡಿರುವ ಸೇನಾ ಮುಖ್ಯಸ್ಥ ಜನರಲ್ ಮನೋಜ್ ಮುಕುಂದ್ ನರವಾನೆ, ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ನಡೆಸಲಾಗುವುದು ಎಂದಿದ್ದಾರೆ.

ಇನ್ನು ಇದೇ ರೀತಿ ಜಮ್ಮು ಮತ್ತು ಕಾಶ್ಮೀರದಲ್ಲಿ ಅನೈತಿಕ ಸಂಬಂಧ ಹೊಂದಿ ಸಿಕ್ಕಿಬಿದ್ದ ಮಹಿಳಾ ಮತ್ತು ಪುರುಷ ಅಧಿಕಾರಿಯನ್ನು ವಜಾಗೊಳಿಸುವಂತೆ ಸೇನೆ ಆದೇಶಿಸಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.